Olympics 2024: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ ಕ್ರಿಕೆಟ್ ಅನ್ನು ಒಲಂಪಿಕ್ಸ್ಗೆ ಸೇರಿಸಲು ನಿರ್ದರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಕ ಕಾರಣ ವಿರಾಟ್ ಕೊಹ್ಲಿ ಎಂದು ಕೊಹ್ಲಿಯ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋ ನೋಡಿದ ಕಿಂಗ್ ಅಭೀಮಾನಿಗಳು ಫುಲ್ ಖುಷ್ ಆಗಿದ್ದಾರೆ, ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
1900 ರಲ್ಲಿ, ಮೊದಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಆಡಲಾಗಿತ್ತು. ಆಗ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಮಾತ್ರ ಕ್ರಿಕೆಟ್ ಪಂದ್ಯವನ್ನು ಆಡಿದ್ದವು. ಆ ಸಮಯದಲ್ಲಿ, ಬೇರೆ ಯಾವ ದೇಶಗಳು ಕ್ರಿಕೆಟ್ನಲ್ಲಿ ಭಾಗವಹಿಸದ ಕಾರಣ ಒಲಿಂಪಿಕ್ಸ್ನಿಂದ ಕ್ರಿಕೆಟ್ ಅನ್ನು ತೆಗೆದುಹಾಕಲಾಯಿತು.
1900 ರಲ್ಲಿ ಕ್ರಿಕೆಟ್ ಆಟವು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಮಾತ್ರ ಜನಪ್ರಿಯವಾಗಿತ್ತು. ಅದರ ನಂತರ ಭಾರತ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ನಂತಹ ಕ್ರಿಕೆಟ್ ತಂಡಗಳು ರೂಪುಗೊಂಡವು. 1950 ರ ನಂತರವೇ ಏಷ್ಯಾ ಖಂಡದಲ್ಲಿ ಕ್ರಿಕೆಟ್ ಬೆಳೆಯಲು ಪ್ರಾರಂಭಿಸಿತು.
ಆಗಲೂ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ಸೇರಿಸಿರಲಿಲ್ಲ. ಏಕೆಂದರೆ 10 ದೇಶಗಳು ಮಾತ್ರ ಗಂಭೀರವಾಗಿ ಕ್ರಿಕೆಟ್ ಆಡುತ್ತಿದ್ದ ಕಾಲವದು. ಒಲಿಂಪಿಕ್ಸ್ನಲ್ಲಿ ಕ್ರೀಡೆಯನ್ನು ಸೇರಿಸಬೇಕಾದರೆ, ಆ ಕ್ರೀಡೆಯನ್ನು ಕನಿಷ್ಠ 75 ದೇಶಗಳಲ್ಲಿ ಆಡಬೇಕು. ಹಲವು ದೇಶಗಳಲ್ಲಿ ಕ್ರಿಕೆಟ್ ತಂಡಗಳಿವೆ ಆದರೆ ಅವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿಲ್ಲ.
ಟಿ20 ಪಂದ್ಯಗಳು ಬಂದ ನಂತರ ಪರಿಸ್ಥಿತಿ ಬದಲಾಯಿತು. ಈಗ ಟಿ20 ಕ್ರಿಕೆಟ್ನಲ್ಲಿ ಸಕ್ರಿಯವಾಗಿ ಆಡುತ್ತಿರುವ ದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಒಲಿಂಪಿಕ್ಸ್ಗೆ ಕ್ರಿಕೆಟ್ ಅನ್ನು ಸೇರಿಸಲು ಪ್ರಯತ್ನಿಸಿತು. ಅದಕ್ಕೆ ವಿರಾಟ್ ಕೊಹ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ.
31.5 ಕೋಟಿ ಅಭಿಮಾನಿಗಳು ವಿರಾಟ್ ಕೊಹ್ಲಿವರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಮೂರನೇ ಅತಿ ಹೆಚ್ಚು ಹಿಂಬಾಲಕ ಆಟಗಾರರಾಗಿದ್ದಾರೆ. ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಲು ವಿರಾಟ್ ಕೊಹ್ಲಿಯ ಜನಪ್ರಿಯತೆಯೇ ಪ್ರಮುಖ ಕಾರಣ ಎಂದು ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಬ್ರಿಯಾನಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ