ವಿರಾಟ್ ಕೊಹ್ಲಿ ನಿವೃತ್ತಿ..! 20ರ ಹರೆಯದ ಈ ಕ್ರಿಕೆಟಿಗನೇ Team Indiaದಲ್ಲಿ ಇನ್ಮುಂದೆ ಕೊಹ್ಲಿ ಸ್ಥಾನ ತುಂಬೋದು..

Virat Kohli Yash Dhull: ವಿರಾಟ್ ಗೆ ಈಗ 34 ವರ್ಷ ವಯಸ್ಸಾಗಿದ್ದು, ಟೀಂ ಇಂಡಿಯಾಕ್ಕೆ ಹಲವು ವರ್ಷಗಳ ಕಾಲ ತಮ್ಮ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಾಗಲೇ ಆಯ್ಕೆ ಸಮಿತಿ ವಿರಾಟ್ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರೆಂಬ ಹುಡುಕಾಟವನ್ನು ಮುಂದುವರೆಸಿದೆ.

Written by - Bhavishya Shetty | Last Updated : Jul 15, 2023, 07:56 AM IST
    • ವಿರಾಟ್ ಟೀಂ ಇಂಡಿಯಾಕ್ಕೆ ಹಲವು ವರ್ಷಗಳ ಕಾಲ ತಮ್ಮ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ
    • ವಿರಾಟ್ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರೆಂಬ ಹುಡುಕಾಟವನ್ನು ಮುಂದುವರೆಸಿದೆ.
    • ವಿರಾಟ್‌ ಅವರಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಹೌದು
ವಿರಾಟ್ ಕೊಹ್ಲಿ ನಿವೃತ್ತಿ..! 20ರ ಹರೆಯದ ಈ ಕ್ರಿಕೆಟಿಗನೇ Team Indiaದಲ್ಲಿ ಇನ್ಮುಂದೆ ಕೊಹ್ಲಿ ಸ್ಥಾನ ತುಂಬೋದು.. title=
Virat Kohli

Emerging Asia Cup, IND A vs UAE A: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾಕ್ಕೆ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಅವರ ಬ್ಯಾಟಿಂಗ್ ಮಾತ್ರ ಸಖತ್ ಆಗಿಯೇ ಮಿಂಚುತ್ತಿತ್ತು. ಈ ದಿಲ್ಲಿ ಆಟಗಾರ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಇದನ್ನೂ ಓದಿ: 13 ವರ್ಷಗಳ ಬಳಿಕ… ಗವಾಸ್ಕರ್, ಸೆಹ್ವಾಗ್ ಕೂಡ ಮಾಡಲು ಸಾಧ್ಯವಾಗದ ಆ ವಿಶೇಷ ದಾಖಲೆ ಬರೆದ ಜೈಸ್ವಾಲ್!

ವಿರಾಟ್ ಗೆ ಈಗ 34 ವರ್ಷ ವಯಸ್ಸಾಗಿದ್ದು, ಟೀಂ ಇಂಡಿಯಾಕ್ಕೆ ಹಲವು ವರ್ಷಗಳ ಕಾಲ ತಮ್ಮ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಾಗಲೇ ಆಯ್ಕೆ ಸಮಿತಿ ವಿರಾಟ್ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರೆಂಬ ಹುಡುಕಾಟವನ್ನು ಮುಂದುವರೆಸಿದೆ. ಈ ವೇಳೆ ಆಟಗಾರನೊಬ್ಬ ಎಲ್ಲರ ಗಮನ ಸೆಳೆದಿದ್ದಾನೆ.

ವಿರಾಟ್‌ ರಂತೆಯೇ ಈ ಆಟಗಾರ ದೆಹಲಿಯ ನಿವಾಸಿ. ಅಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾನೆ. ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಭಾರತದ ಅಂಡರ್-19 ತಂಡದಲ್ಲಿ ಆಡಿದ್ದಾನೆ. ವಿರಾಟ್‌ ಅವರಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಹೌದು. ಈಗ ನೀವು ಈ ಆಟಗಾರ ಯಾರೆಂದು ಯೋಚಿಸುತ್ತಿರಬಹುದು.. ಈ ಆಟಗಾರ ಬೇರಾರು ಅಲ್ಲ, 20 ನೇ ವಯಸ್ಸಿನಲ್ಲಿ ಭಾರತ ಎ ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಯಶ್ ಧುಲ್. ಅಜೇಯ ಶತಕದಿಂದಾಗಿ ಉದಯೋನ್ಮುಖ ಏಷ್ಯಾ ಕಪ್‌ ನಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.

ಉದಯೋನ್ಮುಖ ಏಷ್ಯಾಕಪ್‌ ನ ಬಿ ಗುಂಪಿನ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ಯಶ್ ಧುಲ್ ಟಾಸ್ ಗೆದ್ದು ಯುಎಇ ಎ ತಂಡವನ್ನು ಬ್ಯಾಟಿಂಗ್‌ ಗೆ ಕಳುಹಿಸಿದರು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಯುಎಇ ತಂಡ 50 ಓವರ್‌ ಗಳನ್ನು ಆಡಿದರೂ 9 ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ವಿ ಚಿದಂಬರಂ (46) ಮತ್ತು ಆರಂಭಿಕ ಆರ್ಯನ್ಶ್ ಶರ್ಮಾ (38) ಕೊಡುಗೆ ನೀಡಿದರು. ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ 4 ವಿಕೆಟ್ ಪಡೆದಿದ್ದಾರೆ. ಇದಾದ ಬಳಿಕ ನಾಯಕ ಯಶ್ (108*) ಅವರ ಅಜೇಯ ಶತಕದ ನೆರವಿನಿಂದ ಭಾರತ ಎ ತಂಡ 26.3 ಓವರ್‌ ಗಳಲ್ಲಿ ಗುರಿ ತಲುಪಿತು. ಯಶ್ ಅವರ ಇನ್ನಿಂಗ್ಸ್‌ ನಲ್ಲಿ 20 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು.

ಇದನ್ನೂ ಓದಿ: ಈ ರಾಶಿಯವರ ಕೈಹಿಡಿದು ಮುನ್ನಡೆಸುವನು ಬುಧದೇವ: ಹಣದ ಮಳೆ ಗ್ಯಾರಂಟಿ-ಹೆಜ್ಜೆಹೆಜ್ಜೆಗೂ ಯಶಸ್ಸು ಬೆನ್ನೇರಲಿದೆ!

ದೇಶೀಯ ಕ್ರಿಕೆಟ್‌ ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿರುವ ವಿರಾಟ್ ಅವರಂತೆ, ಯಶ್ ಧುಲ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 4 ಶತಕ ಮತ್ತು 4 ಅರ್ಧ ಶತಕಗಳ ಸಹಾಯದಿಂದ ಒಟ್ಟು 1145 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಬ್ಯಾಟಿಂಗ್ ಸರಾಸರಿ 49.78 ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ದ್ವಿಶತಕ ಗಳಿಸಿದ್ದಾರೆ ಮತ್ತು ಅವರ ಅತ್ಯುತ್ತಮ ಸ್ಕೋರ್ 200 (ನಾಟೌಟ್) ಆಗಿದೆ. ಎ ಲಿಸ್ಟ್ ನಲ್ಲಿಯೂ 8 ಪಂದ್ಯಗಳಲ್ಲಿ ಶತಕದ ನೆರವಿನಿಂದ 299 ರನ್ ಗಳಿಸಿದ್ದಾರೆ. ತಮ್ಮ ಒಟ್ಟಾರೆ T20 ವೃತ್ತಿಜೀವನದಲ್ಲಿ, ಯಶ್ 12 ಪಂದ್ಯಗಳ 11 ಇನ್ನಿಂಗ್ಸ್‌ ಗಳಲ್ಲಿ 3 ಅರ್ಧ ಶತಕಗಳ ಸಹಾಯದಿಂದ 379 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News