ಒಂದು ಲಕ್ಷ ರೂ.ವರೆಗಿನ ಎಸ್ಬಿಐನ ಉಳಿತಾಯ ಠೇವಣಿಗಳ ಬಡ್ಡಿದರ ಪರಿಷ್ಕರಿಸುವುದಾಗಿ ಹೇಳಿರುವ ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ, ಶೇ.3.50 ಇದ್ದ ಬಡ್ಡಿದರವನ್ನು ಶೇ.3.25ಕ್ಕೆ ಇಳಿಕೆ ಮಾಡಿದೆ.
ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ವಿಧಿಸುವ ದಂಡವನ್ನು ಶೇ. 80ರಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಆನ್ಲೈನ್ ವಹಿವಾಟು ನಡೆಸುವವರಿಗೆ ನೆಫ್ಟ್(NEFT) ಮತ್ತು ಆರ್ಟಿಜಿಎಸ್(RTGS) ವಹಿವಾಟುಗಳು ಅಗ್ಗವಾಗಲಿವೆ.
ನಿಮ್ಮ ಖಾತೆಯು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ಇದ್ದರೆ, ನೀವು ಈ ಸುದ್ದಿಯನ್ನು ಓದಬೇಕು. ವಾಸ್ತವವಾಗಿ, ಅಕ್ಟೋಬರ್ 1 ರಿಂದ ಎಸ್ಬಿಐ ಕೆಲವು ಸೇವಾ ಶುಲ್ಕವನ್ನು ಬದಲಾವಣೆ ಮಾಡುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೆಪ್ಟೆಂಬರ್ 4, 2019 ರಂದು ಹೊರಡಿಸಿದ ಅಧಿಸೂಚನೆಯ ಬಳಿಕ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವಲಯದ ಕಂಪನಿಗಳಿಗೆ ಲಾಭವಾಗಲಿದೆ.
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ದೇಶದ ದೊಡ್ಡ ಬ್ಯಾಂಕುಗಳು ಹೊಸ ಸೇವೆಗಳನ್ನು ಪ್ರಾರಂಭಿಸುತ್ತಿವೆ. ಡೆಬಿಟ್ ಕಾರ್ಡ್ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ, ಕೆನರಾ ಬ್ಯಾಂಕ್ 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಒಟಿಪಿಯನ್ನು ಕಡ್ಡಾಯಗೊಳಿಸಿದೆ.
ನಿಮ್ಮ ಖಾತೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಯಾವುದೇ ಶಾಖೆಯಲ್ಲಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ಶೀಘ್ರದಲ್ಲೇ ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಅನ್ನು ನಿಲ್ಲಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಗ್ರಾಹಕರು ತಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ YONO ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಎಸ್ಬಿಐ ಎಟಿಎಂ ಅಥವಾ ಯುನೋ ಕ್ಯಾಶ್ ಪಾಯಿಂಟ್ ಗಳಲ್ಲಿ ಎಟಿಎಂ ಕಾರ್ಡ್ ಬಳಸದೇ ಹಣ ಡ್ರಾ ಮಾಡಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.