ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆ (ಸಿಎಫ್ವಿ) ಗೆ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಮೃತಪಟ್ಟ ತನ್ನ ಸೈನಿಕರ ದೇಹವನ್ನು ಪಡೆಯಲು ಪಾಕಿಸ್ತಾನ ಸೇನೆಯು ಬಿಳಿ ಧ್ವಜವನ್ನು ಎತ್ತಬೇಕಾಯಿತು. ಈ ಬಿಳಿ ಧ್ವಜವು ಶರಣಾಗತಿಯನ್ನು ಸೂಚಿಸುತ್ತದೆ ಅಥವಾ ಒಪ್ಪಂದವನ್ನು ಬಯಸುತ್ತದೆ.
ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು. ಪೂಂಚ್ನಲ್ಲಿ ಗುಂಡಿನ ದಾಳಿ ಜೊತೆಗೆ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ನಡೆಸಿದೆ.
ಪೂಂಚ್ ಮತ್ತು ರಾಜೌರಿಯಲ್ಲಿ ಪಾಕಿಸ್ತಾನವು ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಪಾಕಿಸ್ತಾನದ ಈ ಉದ್ಧಟತನಕ್ಕೆ ಭಾರತ ಸೂಕ್ತ ಉತ್ತರ ನೀಡಿದ್ದು, ಪ್ರತೀಕಾರವಾಗಿ ಭಾರತೀಯ ಮೂರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪೂಂಚ್ ಜಿಲ್ಲೆಯ ಕೃಷ್ಣ ಕಣಿವೆ, ಮೆಂದರ್ ಮತ್ತು ಮಂಕೋಟ್ ವಲಯದಲ್ಲಿ ಪ್ರಚೋದನೆಯಿಲ್ಲದೆ ಗುಂಡು ಹಾರಿಸುವ ಮೂಲಕ ಪಾಕಿಸ್ತಾನವು ಭಾರತೀಯ ಚೆಕ್ಪೋಸ್ಟ್ಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿದೆ. ಗುಂಡಿನ ಚಕಮಕಿಯಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ನಿರಂತರವಾಗಿ ಗಡಿರೇಖೆಯನ್ನು ಉಲ್ಲಂಘಿಸುತ್ತಿದೆ. ಸೋಮವಾರ ಕೂಡ ಪಾಕಿಸ್ತಾನ ರಾಜೌರಿಯಲ್ಲಿ ಗುಂಡಿನ ದಾಳಿ ನಡೆಸಿದೆ. ಗಡಿಯಲ್ಲಿ ನಡೆಸಿರುವ ಗುಂಡಿನ ದಾಳಿಯ ವೀಡಿಯೊವನ್ನು ಸುದ್ದಿ ಸಂಸ್ಥೆಯ ANI ಹಂಚಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ನಿಯಮವನ್ನು ಉಲ್ಲಂಘಿಸಿದೆ. ಶುಕ್ರವಾರ ಬೆಳಿಗ್ಗೆ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಮತ್ತೆ ತನ್ನ ಉದ್ಧಟತನ ಮೆರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.