ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯನ್ನು ಅವರ ಪತ್ನಿ ಆಲಿಯಾ ʼಬೇಜವಾಬ್ದಾರಿ ತಂದೆʼ ಎಂದು ಕರೆದಿದ್ದಾರೆ. ಅಲ್ಲದೆ, ಸಿದ್ದಿಕಿ ತಮ್ಮ ಅಪ್ರಾಪ್ತ ಮಗಳನ್ನು ತನ್ನ ʼಪುರುಷ ಮ್ಯಾನೇಜರ್ʼ ಜೊತೆ ಏಕಾಂಗಿಯಾಗಿ ಕಳುಹಿಸಿದ್ದ, ಆ ಮ್ಯಾನೇಜರ್ ನನ್ನ ಮಗಳ ಜೊತೆ ʼಅನುಚಿತ ರೀತಿಯಲ್ಲಿ ಹಲವಾರು ಬಾರಿ ತಬ್ಬಿಕೊಂಡಿದ್ದʼ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ವೈಯಕ್ತಿಕ ಜೀವನದ ವಿಷಯಕ್ಕೆ ಬಂದಾಗ ಬಹಳ ಸಮಯದಿಂದ ಸುದ್ದಿಯಲ್ಲಿದ್ದಾರೆ. ಅವರ ವಿರುದ್ಧ ಪತ್ನಿ ಆಲಿಯಾ ಗಂಭೀರ ಆರೋಪ ಮಾಡಿದ್ದಾರೆ. ಇದುವರೆಗೂ ಈ ಬಗ್ಗೆ ಸಿದ್ದಿಕಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇತ್ತೀಚೆಗೆ ಅವರು ಈ ವಿಷಯದ ಬಗ್ಗೆ ಮೌನ ಮುರಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಅವರು ಇದನ್ನು ಪೋಸ್ಟ್ ಮಾಡಿದ್ದು, ಇದು ಆರೋಪವಲ್ಲ, ಆದರೆ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Nawazuddin Siddiqui : ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಆರೋಪ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನವಾಜುದ್ದೀನ್ ತನ್ನನ್ನು ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ ಎಂದು ಆಲಿಯಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಅಲಿಯಾ ಸಿದ್ದಿಕಿ ತನ್ನ ಪತಿಯ ಮನೆಯವರ ಕುರಿತು ಸೆನ್ಸೇಷನಲ್ ಮಾಹಿತಿ ಬಹಿರಂಗಗೊಳಿಸಿದ್ದು, ನವಾಜ್ ಅವರ ಕುಟುಂಬ ಸದ್ಯಸರು ತಮಗೆ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.