ಎಲೆಕ್ಷನ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಲಕ್ಷ್ಮಣ ಸವದಿ ಅಲರ್ಟ್ ಆಗಿದ್ದಾರೆ.. ಅಥಣಿ ಬಿಜೆಪಿ ಟಿಕೆಟ್ಗಾಗಿ ಸವದಿ ಸಾಲು ಸಾಲು ಮೀಟಿಂಗ್ ಮಾಡಿದ್ದಾರೆ.. ಅಥಣಿಯಲ್ಲಿ ತಮ್ಮ ಬೆಂಬಲಿಗರ ಜೊತೆ ಸವದಿ ರಹಸ್ಯ ಸಭೆ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಈ ಬಾರಿ ಅದ್ದೂರಿ ಕರಗಕ್ಕೆ ಬೀಳುತ್ತಾ ಬ್ರೇಕ್..? ಅದ್ದೂರಿ ಕರಗ ಮಾಡಲು ಮುಂದಾಗಿದ್ದ ಸರ್ಕಾರ. ಅದ್ದೂರಿ ಕರಗಕ್ಕೆ ಚುನಾವಣಾ ಆಯೋಗ ಹಾಕುತ್ತಾ ಕಡಿವಾಣ..?
ಸೋಮಣ್ಣ ಪುತ್ರ ಅರುಣ್ಗೆ ವಿಧಾನಸಭೆಗೆ ಬಿಜೆಪಿ ಟಿಕೆಟ್ ಇಲ್ಲ. ಮೊದಲು ಪಕ್ಷದ ಕೆಲಸ ಮಾಡಲು ಹೈಕಮಾಂಡ್ ಸೂಚನೆ. ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಜಿಲ್ಲಾ ಜವಾಬ್ದಾರಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ.
ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದೆ.. ಸದ್ಯದಲ್ಲೇ ಗುಬ್ಬಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.. ಇಂದು ಸ್ಪೀಕರ್ ಹೆಗಡೆ ಕಾಗೇರಿಗೆ ರಾಜೀನಾಮೆ ಸಲ್ಲಿಸೋ ಸಾಧ್ಯತೆ ಇದೆ..
ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ ಮತ್ತು ರಾಜ್ಯ ಕೋರ್ ಕಮಿಟಿ ಸಭೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗಿಯಾಗಿದ್ದರು.
ನಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ಇದರಿಂದ ನಮ್ಮಆತ್ಮವಿಶ್ವಾಸ ಹೆಚ್ಚಾಗಿದೆ. ಅಮಿತ್ ಶಾ ಅವರ ಸಭೆಯಲ್ಲಿ ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಪ್ರಾಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ನಮ್ಮದು ಜನತಾ ಪ್ರಣಾಳಿಕೆಯಾಗಲಿದೆ ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದರು.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೀತಿದೆ.. ಅಳೆದು ತೂಗಿ ಟಿಕೆಟ್ ನೀಡಲು ʻಕೈʼ ಹೈಕಮಾಂಡ್ ನಿರ್ಧಾರ ಮಾಡಿದೆ.. ʻಕೈʼ ಟಿಕೆಟ್ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ನಮ್ಮ ಮನೆಗೆ ಮುಸ್ಲಿಂ ಸಮುದಾಯ ಮುಖಂಡರು ಬಂದಿದ್ದರು. ಮುಸ್ಲಿಂ ಮುಖಂಡರು ಟಿಕೆಟ್ ಕೇಳು ಅಂದ್ರೆ ʻಬಿʼ ಫಾರಂ ಕೇಳುತ್ತೇನೆ ಎಂದು ಅಥಣಿಯಲ್ಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.
ನಂಜನಗೂಡು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಮಹಾದೇವಪ್ಪ. ಧ್ರುವ ಪುತ್ರ ದರ್ಶನ್ಗೆ ನಂಜನಗೂಡು ಕ್ಷೇತ್ರದ ಟಿಕೆಟ್ ತ್ಯಾಗ. ನಾನು ನಂಜನಗೂಡು ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಧ್ರುವ ನಿವಾಸದಲ್ಲಿ ಮಾಜಿ ಸಚಿವ ಡಾ.ಹೆಚ್. ಸಿ. ಮಹಾದೇವಪ್ಪ ಹೇಳಿದ್ರು.
ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ವಿ.ಸೋಮಣ್ಣ. ದೆಹಲಿಯ ಕೃಷ್ಣ ಮೆನನ್ ರೋಡ್ನಲ್ಲಿರೋ ಮನೆಯಲ್ಲಿ ಭೇಟಿ. ಒಟ್ಟು 11 ನಿಮಿಷಗಳ ಕಾಲ ಮಾತುಕತೆ ನಡೆಸಿರೋ ನಾಯಕರು. ನಾನು ಎಲ್ಲವನ್ನ ಸರಿಪಡಿಸುವೆ, ಕೆಲಸ ಮಾಡಿ ಎಂದಿರೋ ಶಾ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದ ಸಚಿವ ಸೋಮಣ್ಣ.
ಆರ್. ಧ್ರುವನಾರಾಯಣ ಇತ್ತೀಚೆಗೆ ಹಠಾತ್ ನಿಧನ ಹಿನ್ನೆಲೆ ಧ್ರುವ ನಿವಾಸಕ್ಕೆ ಮಾಜಿ ಸಚಿವ ಡಾ. HC ಮಹದೇವಪ್ಪ ಭೇಟಿ. ಮಾಜಿ ಸಚಿವ ಮಹದೇವಪ್ಪಗೆ ಪುತ್ರ ಸುನಿಲ್ ಬೋಸ್ ಸಾಥ್. ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ ನಿವಾಸ. ಧ್ರುವ ಪುತ್ರನಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ ಮಹದೇವಪ್ಪ.
Karnataka Assembly Election 2023: ಮೊನ್ನೆಯಷ್ಟೇ (ಮಾರ್ಚ್ 14) ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದ ವಸತಿ ಸಚಿವ ವಿ. ಸೋಮಣ್ಣ, ನಿನ್ನೆ (ಮಾರ್ಚ್ 15) ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸುಮಾರು 11 ನಿಮಿಷಗಳ ಮಾತುಕತೆ ನಡೆಸಿದ್ದರು.
ನಮ್ಮ ಬಿಜೆಪಿಯಲ್ಲಿ ಸ್ವಲ್ಪ ಮೆಂಟಲ್ ಗಿರಾಕಿಗಳು ಇದ್ದಾರೆ. ಇಂತಹ ಗಿರಾಕಿಗಳ ವಿರುದ್ಧ ಜಿಲ್ಲಾಧ್ಯಕ್ಷರು ಕ್ರಮ ವಹಿಸಬೇಕು ಎಂದು ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಗುಡುಗಿದ್ರು.
ದಿಢೀರ್ ದೆಹಲಿ ಪ್ರವಾಸಕ್ಕೆ ತೆರಳಲು ಸೋಮಣ್ಣ ನಿರ್ಧಾರ. ಕುತೂಹಲ ಕೆರಳಿಸಿದ ಸಚಿವ ವಿ.ಸೋಮಣ್ಣ ದೆಹಲಿ ಭೇಟಿ. ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ. ಇತ್ತೀಚೆಗೆ ಪಕ್ಷದ ನಾಯಕರ ಬಗ್ಗೆ ಸೋಮಣ್ಣ ಅಸಮಾಧಾನ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ಚರ್ಚೆ. ರಾಜಕೀಯ ಪಡಸಾಲೆಯಲ್ಲಿ ಭಾರೀ ಜೋರಾಗಿ ನಡೀತಿದೆ ಚರ್ಚೆ. BYS ಪುತ್ರನ ಬಗ್ಗೆ ಸೋಮಣ್ಣ ಪುತ್ರ ಅರುಣ್ ಅಸಮಾಧಾನ. ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಡಲು ಸೋಮಣ್ಣ ನಿರ್ಧಾರ..?
ಮುಧೋಳದಲ್ಲಿ ಕಾರಜೋಳರನ್ನ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಬಿಜೆಪಿಯಲ್ಲಿ ಮೋದಿ , ಅಮಿತ್ ಶಾ ಅವರಂತಹ ನಾಯಕರಿದ್ದಾರೆ ಎಂದು BJP ಯಾತ್ರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು. ಮುಧೋಳದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಷಣ. ಕರ್ನಾಟಕವನ್ನ ಮಾದರಿ ರಾಜ್ಯವನ್ನಾಗಿಸೋ ಗುರಿ ಪ್ರಧಾನಿಗೆ ಇದೆ. ಹಣಬಲ, ತೋಳ್ಬಲದಿಂದ ಕಾಂಗ್ರೆಸ್ ಜಾತಿ ವಿಷ ಬೀಜ ಬಿತ್ತುತ್ತಿದೆ ಎಂದು ವಾಗ್ದಾಳಿ.
ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಕೊಡುವ ವಿಚಾರ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಮ್ಮದು ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಪಕ್ಷ. ಹೀಗಾಗಿ ಟಿಕೆಟ್ಗೆ ಪೈಪೋಟಿ ಇರುತ್ತೆ. ಏನೇ ಇದ್ರೂ ಕೇಂದ್ರ ನಾಯಕರು ಬಗೆಹರಿಸ್ತಾರೆ ಎಂದಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.