ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸಾಲು ಸಾಲು ಮೀಟಿಂಗ್. ಚುನಾವಣೆ ಲೆಕ್ಕಾ ಹಾಕಿ 175 ಅಭ್ಯರ್ಥಿಗಳ ಹೆಸರು ಫೈನಲ್. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಬಳಿಕ ಹೆಸರು ರಿವೀಲ್. ಮಧ್ಯಾಹ್ನ ನಡೆಯಲಿರುವ ಬಿಜೆಪಿ ನಾಯಕರ ಟಿಕೆಟ್ ಸಭೆ. ಸಭೆ ಬಳಿಕ ಸುದ್ದಿಗೋಷ್ಠಿ ಮಾಡಿ ಮೊದಲ ಪಟ್ಟಿ ಬಿಡುಗಡೆ.
Karnataka Assembly Election: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಖಾಸಗಿ ಫೋಟೋ ವೈರಲ್ ಆಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಟಿಕೆಟ್ ಕೈತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Karnataka Assembly Election: ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದ ವೇಳೆ, ಹಾಸನದ ವುಡ್ ಪೆಕ್ಕರ್ ಡಿಸ್ಟಿಲರಿಯಿಂದ ಸರಬರಾಜಾದ ಮದ್ಯದಲ್ಲಿ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂದಿದ್ದರಿಂದ 4,320 ಲೀಟರ್ ಮದ್ಯವನ್ನುವಶಕ್ಕೆ ಪಡೆದು ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ಕೇಸ್ ದಾಖಲಿಸಿದ್ದಾರೆ.
ಕಾಂಗ್ರೆಸ್ ಎರಡನೇ ಪಟ್ಟಿಗೆ ಕೌಂಟ್ಡೌನ್ ಶುರು. ಇಂದು ಬೆಳಗ್ಗೆ 11ಗಂಟೆ ಒಳಗೆ 2ನೇ ಪಟ್ಟಿ ರಿಲೀಸ್ ಸಾಧ್ಯತೆ. ದೆಹಲಿಯಲ್ಲೇ ಠಿಕಾಣಿ ಹೂಡಿರುವ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ಗೆ ʻಕೈʼ ಸರ್ಕಸ್. ಇಂದು ಮತ್ತೊಂದು ಸುತ್ತಿನ ಸಭೆ ಮಾಡಿ ಪಟ್ಟಿ ಫೈನಲ್.
ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಮುಗಿದಿದೆ. ಟಿಕೆಟ್ ಸಂಬಂಧ ಸ್ಕ್ರೀನಿಂಗ್ ಕಮಿಟಿ, ಸಿಇಸಿ ಸಭೆ ಆಗಿದೆ. ಮಧ್ಯಾಹ್ನ ಮತ್ತೊಂದು ಸಭೆ ನಡೆಸಿ ಚರ್ಚೆ ಮಾಡುತ್ತೇವೆ ಎಂದು ದೆಹಲಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ರು.
Assembly Election Congress Second List: ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುವ ಮೂಲಕ ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಕೈ ಟಿಕೆಟ್ ಫೈನಲ್ ಆದಂತಾಗಿದೆ. ಮೊದಲ ಪಟ್ಟಿಯಲ್ಲಿ ಚಾಮರಾಜನಗರದಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರುನಿಂದ ಹಾಲಿ ಶಾಸಕ ಆರ್.ನರೇಂದ್ರ ಹಾಗೂ ಗುಂಡ್ಲುಪೇಟೆಯಿಂದ ಗಣೇಶ್ ಪ್ರಸಾದ್ ಅವರನ್ನು ಘೋಷಣೆ ಮಾಡಲಾಗಿತ್ತು.
Karnataka Assembly Election: 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವು ಕ್ಷೇತ್ರಗಳಲಿ 15 ರಿಂದ 20 ಆಕಾಂಕ್ಷಿಗಳ ಪಟ್ಟಿ ಇತ್ತು. ಅವುಗಳನ್ನೆಲ್ಲ ಫಿಲ್ಟರ್ ಮಾಡಿ ಪ್ರತಿ ಕ್ಷೇತ್ರಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಿರುವ ರಾಜ್ಯ ಚುನಾವಣಾ ಕಮಿಟಿ ಬಹುತೇಕ ಎಲ್ಲಾ ಹಾಲಿ ಶಾಸಕರ ಹೆಸರನ್ನೂ ಕೂಡ ಈ ಪಟ್ಟಿಯಲ್ಲಿ ಸೇರಿಸಿದೆ.
Karnataka Politics : ಕಳೆದ ಮೂರು ನಾಲ್ಕು ದಿನಗಳ ಬೆಳವಣಿಗೆ ಗಮನಿಸಿದರೆ ಬಿಜೆಪಿಗೆ ಸಂಪೂರ್ಣ ಬಹುಮತ ದೊರೆಯಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲವು ಕ್ಷೇತ್ರದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಅಖಾಡಕ್ಕೆ ಬಿಜೆಪಿ ಸನ್ನದ್ಧವಾಗಿದೆ. ಏಪ್ರಿಲ್ 8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ..
Karnataka Assembly Eelection: ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ವಿ. ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ, ಟಿಕೆಟ್ ಗಾಗಿ ಓಡಾಡುತ್ತಿದ್ದ ವಿಜಯೇಂದ್ರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದ ಹೊಸ ಟರ್ನಿಂಗ್ ಪಾಯಿಂಟಾಗಿದ್ದು ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Karnataka Assembly Election: ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಪುತ್ರ ದರ್ಶನ್ ಗೆ ಟಿಕೆಟ್ ಕೊಟ್ಟಿದ್ದು ಅಧಿಕೃತವಾಗಿ ಇಂದಿನಿಂದ ಧ್ರುವ ಪುತ್ರ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
Karnataka Assembly Election: ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕೃಷ್ಣಯ್ಯ ಶೆಟ್ಟಿ ಮತ್ತು ಗಾಂಧಿನಗರ ಕ್ಷೇತ್ರದ ಹೆಸರನ್ನೊಳಗೊಂಡ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.
Congress candidate list: ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಸಂಬಂಧ ನಡೆಯಬೇಕಿದ್ದ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ಚುನಾವಣಾ ಸಮಿತಿ ಸಭೆ ನಾಳೆ ನಡೆಯಲಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಬಗ್ಗೆ ಪರಿಶೀಲನೆ ನಡೆಯಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಚ್ಚಿದ್ದ ಸೀರೆಗಳನ್ನು ಸುಟ್ಟು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನ ತಮ್ಮತ್ತ ಸೆಳೆದುಕೊಳ್ಳುವ ಉದ್ದೇಶದಿಂದ ಕುಕ್ಕರ್, ವಾಚ್, ಸೀರೆಗಳು ಸೇರಿದಂತೆ ನಾನಾ ಬಗೆಯ ಉಡುಗೊರೆಗಳನ್ನು ನೀಡುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆ ಚುರುಕು ಪಡೆದಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಸ್ಮಿತೆ ಮತ್ತೊಮ್ಮೆ ಭುಗಿಲೆದ್ದಿದೆ. ಹಾಲಿ ಶಾಸಕ ನಿಂಬಣ್ಣವರ್ ವಿರುದ್ಧ ತೊಡೆತಟ್ಟಿರುವ ಹದಿಮೂರು ಆಕಾಂಕ್ಷಿಗಳು ಬಿಜೆಪಿ ಟಿಕೆಟ್ಗಾಗಿ ವರಿಷ್ಠರ ಮನೆ ಬಾಗಿಲು ತಟ್ಟುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.