ಸಂಡೂರು ಉಪ ಚುನಾವಣೆ ಗೆಲ್ಲಲು ಸಭೆ ನಡೆಸಿದ್ದೇವೆ
ಉಪ ಚುನಾವಣೆಯಲ್ಲಿ ಬಂಗಾರು ಹನುಮಂತು ಗೆಲ್ತಾರೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ಭ್ರಷ್ಟಾಚಾರ ಹೆಚ್ಚು
ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ
ವಾಲ್ಮೀಕಿ ನಿಗಮದ 21 ಕೋಟಿ ಹಣ ಚುನಾವಣೆಗೆ ಬಳಕೆ
ನಾಗೇಂದ್ರ ಜೈಲಿಗೆ ಹೋಗಿದ್ದು ವಾಲ್ಮೀಕಿ ಹಗರಣದಿಂದ
ಡಸ್ಟ್ ಬಿನ್ ನಲ್ಲಿಯೇ ಅತ್ಯಂತ ಕಳಪೆ ಡಸ್ಟ್ ಬಿನ್ ನಾಗೇಂದ್ರ
ಬಿಜೆಪಿಗರ ಕಾಲದಲ್ಲಿ ಜಾರಿ ನಿರ್ದೇಶನಾಲಯ ಮಧ್ಯ ಪ್ರವೇಶ ಮಾಡಲಿಲ್ಲ. ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂ.ಗಳನ್ನು ನುಂಗಿಹಾಕಿದ್ದಾರೆ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಲ್ಲಿ 47 ಕೋಟಿ ರೂ.ಗಳಿಗೂ ಹೆಚ್ಚು ಹಣ ತಿಂದು ಜೈಲಿಗೆ ಹೋದವರು ಯಾವ ಪಕ್ಷವರು ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಸದನದಲ್ಲಿ ಸದಸ್ಯರು ಮಾತನಾಡುವಾಗ ಅವರನ್ನು ಒತ್ತಾಯಪೂರ್ವಕವಾಗಿ ಸ್ಪೀಕರ್ ಕೂರಿಸುತ್ತಿದ್ದಾರೆ. ಇದು ಸದನಕ್ಕೆ ಅಥವಾ ಸ್ಪೀಕರ್ಗೆ ಗೌರವ ತರುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿಲ್ಲ. ಸ್ಪೀಕರ್ ಸದನ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು..
B Nagendra case : ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಮತ್ತು ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಜಾರಿ ನಿರ್ದೇಶನಾಲಯವು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
Assembly Session 2024: "ನನ್ನ ಹೆಸರು ಹೇಳಿ ಆಪಾದನೆ ಮಾಡಲಾಗಿದೆ, ಸಾಕ್ಷಿ ನೀಡಬೇಕು" ಎಂದು ಅಶ್ವತ್ಥ್ ನಾರಾಯಣ್ ಹೇಳಿದಾಗ, “ಮಾಡಬಾರದ್ದು ಮಾಡಿರುವ ನಿಮ್ಮದನ್ನು ತೆಗೆಯುತ್ತೇವೆ, ಮಾತನಾಡುತ್ತೇವೆ ತಡೆಯಿರಿ” ಎಂದು ಡಿಕೆಶಿ ಗುಡುಗಿದರು.
Valmiki crop scam news : ನಾಗೇಂದ್ರ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಕಳೆದ ಒಂದು ವರ್ಷದ ಹಣದ ವ್ಯವಹಾರದ ವಿವರಗಳನ್ನ ಪಡೆದಿರುವ ಇ.ಡಿ ಅಧಿಕಾರಿಗಳು, ಅವುಗಳನ್ನ ಮುಂದಿಟ್ಟು ಪ್ರಶ್ನಿಸುತ್ತಿದ್ದಾರೆ. ಆದರೆ ನಾಗೇಂದ್ರ ಅವರು ಮಾತ್ರ 'ತನಗೇನು ಗೊತ್ತಿಲ್ಲ, ವಕೀಲರೊಂದಿಗೆ ಮಾತನಾಡಬೇಕು'ಎಂದು ಉತ್ತರಿಸುತ್ತಿದ್ದಾರೆ.
ನಾಗೇಂದ್ರ ಬಂಧನ ಮಾಡಿ, ರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ. ಆ ಬಳಿಕ ಬೆಳಗ್ಗೆ 7 ಗಂಟೆ ವೇಳೆಗೆ ಯಲಹಂಕದಲ್ಲಿರೋ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಧೀಶರಾದ ಸಂತೋಷ್ ಗಜಾನನ ಹೆಗ್ಡೆಯವರ ಮನೆಯಲ್ಲಿ ನಾಗೇಂದ್ರನನ್ನ ಇಡಿ ಹಾಜರುಪಡಿಸಿದೆ. ಆ ಬಳಿಕ ಇಡಿ ಪರವಾಗಿ ಪಿಪಿ ಪ್ರಸನ್ನ ಕುಮಾರ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಲಾಗಿತ್ತು.
ಜುಲೈ 10 ರಂದು ವಾಲ್ಮೀಕಿ ನಿಗಹ ಹಗರಣ ಸಂಬಂಧ ಬಳ್ಳಾರಿ, ರಾಯಚೂರು, ಬೆಂಗಳೂರು ಸೇರಿದಂತೆ ಒಟ್ಟು 18 ಕಡೆ ಇಡಿ ದಾಳಿ ನಡೆಸಿತ್ತು.. ಅದ್ರಲ್ಲಿ ನ್ಯೂ ಬಿಇಎಲ್ ನಲ್ಲಿರುವ ನಾಗೇಂದ್ರ ಫ್ಲಾಟ್ ಕೂಡ ಒಳಗೊಂಡಿತ್ತು.. ದಾಳಿ ವೇಳೆ ಫ್ಲಾಟ್ ನಲ್ಲಿಯೇ ಇದ್ದ ನಾಗೇಂದ್ರ ಇಡಿ ಬೆವರಿಳಿಸಿತ್ತು..
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ, ಶಾಸಕ ಹಾಗೂ ನಿಗಮ ಅಧ್ಯಕ್ಷ ಬಸವನಗೌಡ ದದ್ದಲ್ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ... ನೋಡಿ..
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರಕಾರವಿದು. ನೀವು ಈ ಸರಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಕೇಳಿದರು.
ದೇವರಾಜ ಅರಸು ಸಮಾಜದ ತಳವರ್ಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮೇಲಕ್ಕೆತ್ತುವ, ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಿದರು. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದರು- ಸಿಎಂ ಸಿದ್ದರಾಮಯ್ಯ
ಮನೆಯ ಯಜಮಾನಿಯು ಕಾರ್ಯಕ್ರಮದ ದಿನದಂದು ಅವರ ಮನೆಯ ಮುಂದೆ ರಂಗೋಲಿ ಹಾಕಬೇಕು. ಮನೆಯ ಮುಂದೆ ರಂಗೋಲಿಯಲ್ಲಿ 'ನಾನು ಗೃಹಲಕ್ಷ್ಮೀ, ಮನೆಯ ಯಜಮಾನಿ' ಎಂದು ಬರೆಯುವಂತೆ ಸಚಿವ ಬಿ.ನಾಗೇಂದ್ರ ತಿಳಿಸಿದರು.
ಬಣಜಿಗ ಸಮಾಜ ಹಿಂದಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ತಮ್ಮ ಸಮಾಜಕ್ಕೆ ದಕ್ಕೆಯಾದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಗುಣ ಅವರಲ್ಲಿದೆ. ಬಣಜಿಗ ಸಮುದಾಯದ 2ಎ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸುತ್ತೆನೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು.
ದುರಸ್ತಿಯಾಗಿರುವ ಏರ್ಕ್ರಾಫ್ಟ್ ಗಳನ್ನು ಕೂಡಲೇ ಸರಿಪಡಿಸಿ ಒಟ್ಟು 6 ಏರ್ ಕ್ರಾಫ್ಟ್ಗಳ ಹಾರಾಟಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಬಿ.ನಾಗೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.