ಪ್ರಿಯತಮೆ ಚಿನ್ನದ ಆಸೆಗೆ ಬಿಬಿಎಂಪಿ ಅಧಿಕಾರಿಯೊಬ್ಬ ಲಕ್ಷ ಲಕ್ಷ ದೋಚಿರೋದು ಬಯಲಾಗಿದೆ. ಆಡಿಟ್ ವೇಳೆ ಬಿಬಿಎಂಪಿ SDA ಪ್ರಕಾಶ್ ಬಂಡವಾಳ ಬಟಾಬಯಲಾಗಿದೆ. ಒಂದು ವರ್ಷದಿಂದ ಪ್ರಿಯತಮೆಯ ಅಕೌಂಟ್ಗೆ ಹಣ ವರ್ಗಾವಣೆ ಮಾಡಿದ್ದು BBMP EE ರಾಜೇಂದ್ರ ನಾಯ್ಕ್ ಅವರ ವಿಚಾರಣೆಯಿಂದ ಅಕ್ರಮ ಬಯಲಾಗಿದೆ.
ಇದು ಬೆಂಗಳೂರಿನ ವಾಹನ ಸವಾರರು ನೋಡಲೇ ಬೇಕಾದ ಸುದ್ದಿ. ದಿನನಿತ್ಯ ಸಂಚಾರ ಮಾಡುವ ಬ್ರಿಡ್ಜ್ಗಳು ಎಷ್ಟು ಸೇಫ್..? ಅನ್ನೋ ಪ್ರಶ್ನೆ ಎದ್ದಿದೆ. ನೂತನವಾಗಿ ನಿರ್ಮಾಣವಾಗಿರೋ, 40 ಕೋಟಿ ವೆಚ್ಚದ ಉಕ್ಕಿನ ಸೇತುವೆ ಆತಂಕ ಸೃಷ್ಟಿಸಿದೆ.
ಜನರಿಗೆ ಬುದ್ಧಿ ಹೇಳುವ ಬಿಬಿಎಂಪಿ ಅಧಿಕಾರಿಗಳಿಂದಲೇ ಲೋಪ? ಬಿಬಿಎಂಪಿಯಿಂದಲೇ ಕೋಟಿ ಕೋಟಿ.. ಬಿಲ್ ಬಾಕಿ..!. ಜಲ ಮಂಡಳಿಗೆ ಬಿಬಿಎಂಪಿ ಕಟ್ಟಬೇಕಿದೆ ಬರೋಬ್ಬರಿ 6.40 ಕೋಟಿ ರೂಪಾಯಿ. 6.40 ಕೋಟಿ ಬಾಕಿ ಬಿಲ್, 12.80 ಕೋಟಿ ಬಡ್ಡಿ ಬಾಕಿ..!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಾರ್ಡ್ ಮೀಸಲಾತಿ ಪಟ್ಟಿಯ ಕರಡು ಪ್ರತಿಯ ಸಂಬಂಧ ಸಾವಿರಾರು ಆಕ್ಷೇಪಣೆಗಳು ಹರಿದು ಬರುತ್ತಿವೆ. ಕಾಂಗ್ರೆಸ್ ಜನಪ್ರತಿನಿಧಿಗಳು ಇರುವ ಕ್ಷೇತ್ರಗಳಲ್ಲೇ ಹೆಚ್ಚು ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.
ಗಣೇಶ ಚತುರ್ಥಿಗೆ ಬಿಬಿಎಂಪಿಯಿಂದ ಹಲವು ನಿಯಮಗಳಿವೆ. ಕಳೆದ ಬಾರಿಯ ನಿಯಮಗಳನ್ನೇ ಈ ಬಾರಿಯೂ ಮುಂದುವರೆಸುವ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಅಕ್ರಮ ಹಣಕಾಸು ಆರೋಪ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ.ಗೌರಮ್ಮ ದಂಪತಿಗೆ ಸೇರಿದ 3.35 ಕೋಟಿ ರೂ. ಮೌಲ್ಯ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಲು ಬಿಬಿಎಂಪಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಮುಂದಾಗಿದೆ. ಬಿಬಿಎಂಪಿ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವ್ಯಾಪಾರಸ್ಥರು ಇದು ಕಾನೂನುಬಾಹಿರ ಕೆಲಸ ಎಂದು ಅಧಿಕಾರಿಗಳ ವಿರುದ್ದ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ದಾಸರಹಳ್ಳಿ ವಲಯ ವ್ಯಾಪ್ತಿಯ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್ ತಯಾರಿಸುವ 2 ಕಾರ್ಖಾನೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 810 ಕೆ.ಜಿ.ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 5,000 ರೂ. ದಂಡವನ್ನು ವಿಧಿಸಲಾಗಿದೆ.
ರಾಜ್ಯ ರಾಜಧಾನಿಯಲ್ಲಿ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿಲ್ಲ. ಆದರೂ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನೆ ದಿನೆ ತಾರಕಕ್ಕೆ ಏರುತ್ತಿದೆ. ದಿನಕ್ಕೊಂದು ಹೇಳಿಕೆ, ದಿನಕ್ಕೊಂದು ಬೆಳವಣಿಗೆ ಆಗ್ತಿರೋ ಈ ಗಂಭೀರವಾದ ವಿಚಾರಕ್ಕೆ ಅಂತ್ಯ ಯಾವಾಗ ಅನ್ನೋದು ಸಾರ್ವಜನಿಕರಿಂದ ಪ್ರಶ್ನೆ ಎದ್ದಿತ್ತು. ಅದೆಲ್ಲದಕ್ಕೂ ಫುಲ್ ಸ್ಟಾಪ್ ಎಂಬಂತೆ ಪಾಲಿಕೆ ಅಧಿಕಾರಿಗಳು ಈದ್ಗಾ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 243 ವಾರ್ಡ್ಗಳ ಅಂತಿಮ ಡಿಲಿಮಿಟೇಶನ್ ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಅಧಿಸೂಚಿಸಿದ್ದು, ಪರಿಷತ್ ಚುನಾವಣೆಯನ್ನು ಎರಡು ವರ್ಷಗಳ ಕಾಲ ವಿಳಂಬಗೊಳಿಸಿದ್ದ ಕಸರತ್ತು ಪೂರ್ಣಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.