Budget 2023 for Education: ಕುತೂಹಲಕಾರಿಯಾಗಿ, ಸಚಿವಾಲಯದ ಅತಿ ದೊಡ್ಡ ಶಾಲಾ ಶಿಕ್ಷಣ ಯೋಜನೆಯಾದ ಸರ್ವ ಶಿಕ್ಷಾ ಅಭಿಯಾನಕ್ಕೆ ಕಳೆದ ವರ್ಷಕ್ಕೆ ಸಮಾನವಾದ ಮೊತ್ತವನ್ನು ನಿಗದಿಪಡಿಸಲಾಗಿದೆ. 2022-23 ರಲ್ಲಿ 37,383 ಕೋಟಿ ರೂ.ಗೆ ಹೋಲಿಸಿದರೆ 2022-23 ರಲ್ಲಿ 37,453 ಕೋಟಿ ರೂ. (ಬಜೆಟ್ ಅಂದಾಜು)ನೀಡಲಾಗಿತ್ತು.
Stock Market Update: ಸಂಸತ್ತಿನಲ್ಲಿ ಮಂಡನೆಯಾದ ಇಂದಿನ ಬಜೆಟ್ ಕುರಿತು ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಈ ಬಜೆಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಉಳಿದವರ ಪಾಲಿಗೆ ಬಜೆಟ್ ಭಾರಿ ನಿರಾಶೆ ತಂದಿದೆ. ಷೇರು ಮಾರುಕಟ್ಟೆಯ ಕುರಿತು ಹೇಳುವುದಾದರೆ, ಈ ಬಾರಿಯ ಬಜೆಟ್ ಷೇರು ಮಾರುಕಟ್ಟೆಯ ಪಾಲಿದೆ ನಿರಾಶೆ ತಂದಂತಿದೆ ಎಂಬುದು ಗೋಚರಿಸುತ್ತಿದೆ.
ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೇಂದ್ರ ಬಜೆಟ್ ಅನ್ನು ಟೀಕಿಸಿದರು ಮತ್ತು ಸರ್ಕಾರವು ಸಾಮಾನ್ಯ ಜನರ ಸಂಕಷ್ಟ ಸೇರಿದಂತೆ ದೇಶದ ಗಂಭೀರ ಆರ್ಥಿಕ ಪರಿಸ್ಥಿತಿಗಳನ್ನು ಪರಿಹರಿಸುತ್ತಿಲ್ಲ ಎಂದು ಹೇಳಿದರು.
Union Budget 1992: 1992 ಆದಾಯ ತೆರಿಗೆ ಸ್ಲ್ಯಾಬ್ ಗಳಿಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು, ಈ ಚಿತ್ರ ವೈರಲ್ ಆಗುತಿದ್ದಂತೆ ಜನರು ಅದನ್ನು ಇಂದಿನ ಬಜೆಟ್ ಗೆ ಹೋಲಿಕೆ ಮಾಡಲು ಆರಂಭಿಸಿದ್ದಾರೆ. ಹಾಗಾದರೆ ಬನ್ನಿ 30 ವರ್ಷಗಳ ಹಿಂದೆ ಯಾವ ಆದಾಯದ ಮೇಲೆ ಜನರು ತೆರಿಗೆ ಪಾವತಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳೋಣ,
ಕೇಂದ್ರ ಬಜೆಟ್ ಮಂಡನೆಗೆ ಕೌಂಟ್ಡೌನ್ ಶುರು. ಇಂದು ಬಹು ನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ. ಸಂಸತ್ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ. ಇಂದು ಬೆಳಗ್ಗೆ 11ಕ್ಕೆ ನಿರ್ಮಲಾ ಸೀತಾರಾಮನ್ರಿಂದ ಬಜೆಟ್ ಮಂಡನೆ. ಕಾಗದ ರಹಿತ ರೂಪದಲ್ಲಿ ಇರಲಿರೋ ಬಜೆಟ್.
Union Budget 2023: ಈ ಬಾರಿಯ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ಬಗ್ಗೆ ಸರ್ಕಾರದ ಬದ್ಧತೆ ಮತ್ತು ಸಕಾರಾತ್ಮಕ ಧೋರಣೆ ಕಂಡುಬಂದಿದೆ. ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ, ಹೆಚ್ಚಿನ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳತ್ತ ತಿರುಗಿಸಲು ಸರ್ಕಾರ ಪ್ರಯತ್ನಿಸಿದೆ.
Minister Sudhakar on Union Budget 2023 : ಸರ್ವಸ್ಪರ್ಶಿ ಬಜೆಟ್ ನೀಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಘೋಷಣೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತಪಡಿಸಿದರು.
Agriculture Budget 2023: ಕೃಷಿ ನಿರ್ವಹಣಾ ಯೋಜನೆ ಅಂದರೆ PM Pranaam ನಲ್ಲಿ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸುವ ಉದ್ದೇಶಕ್ಕಾಗಿ ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು. ಈ ಕ್ರಮವು ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ರಾಜ್ಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಪರ್ಯಾಯ ಪೋಷಕಾಂಶಗಳನ್ನು ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗುವುದು.
Budget 2023 Highlights : ಕೇಂದ್ರ ಬಜೆಟ್ನಲ್ಲಿ ಸಾಮಾನ್ಯ ಜನರ ನಿರೀಕ್ಷೆಗಳನ್ನು ಈಡೇರಿಸುವ ಅನೇಕ ಘೋಷಣೆಗಳನ್ನು ಮಾಡಲಾಗಿದೆ. ಹಣಕಾಸು ಸಚಿವರು ಮಂಡಿಸಿದ ಬಜೆಟ್ನ ಪ್ರಮುಖಾಂಶಗಳು ಇಲ್ಲಿವೆ.
Union Budget 2023: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ 2023ನೇ ಸಾಲಿನ ಬಜೆಟ್ ಮಂಡಿಸಿದ್ದಾರ. ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು 'ಪ್ರಧಾನ ಮಂತ್ರಿ ಪ್ರಣಾಮ್' ಯೋಜನೆಯನ್ನು ಆರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದೇ ವೇಳೆ ಗೋಬರ್ ಧನ ಯೋಜನೆಯ ಅಡಿ 500 ಹೊಸ ಪ್ಲಾಂಟ್ ಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಇಂದು ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದಿರುವುದು ವಿಶೇಷವಾಗಿತ್ತು.
Budget 2023 Update: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಆರ್ಥಿಕ ವರ್ಷ 2023-24ನೇ ಸಾಲಿನ ಆರ್ಥಿಕ ಆಯವ್ಯಯ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಅಥವಾ ಯಾವ ವಸ್ತುಗಳು ದುಬಾರಿಯಾಗಿವೆ.
Budget 2023 :ಪ್ಯಾನ್ ಕಾರ್ಡ್ಗೆ ಸಾಮಾನ್ಯ ಗುರುತಿನ ಸ್ಥಾನಮಾನವನ್ನು ನೀಡಲಾಗುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಘೋಷಣೆಯಿಂದ ಉದ್ಯಮಿಗಳಿಗೆ ಸಾಕಷ್ಟು ಲಾಭವಾಗಲಿದೆ.
Income Tax: ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ಈಗ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.
Education Budget 2023: ಔಷಧಿ ತಯಾರಿಕಾ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲಾಗುವುದು. ಇದರಲ್ಲಿ ಕೈಗಾರಿಕೋದ್ಯಮಿಗಳಿಂದ ಹೂಡಿಕೆ ನಿರೀಕ್ಷಿಸಲಾಗಿದೆ. ಹೊಸ ಕೋರ್ಸ್ಗಳನ್ನು ಆರಂಭಿಸಲಾಗುವುದು. ಈ ಹೊಸ ಕೋರ್ಸ್ಗಳನ್ನು ಇತ್ತೀಚಿನ ಸಂಶೋಧನೆಗಳ ಮೇಲೆ ಕೇಂದ್ರೀಕರಿಸಲಾಗುವುದು. ಇದಲ್ಲದೇ ಶಿಕ್ಷಕರ ತರಬೇತಿಯನ್ನು ಸುಧಾರಿಸಲಾಗುವುದು.
Railway Budget 2023: ಈ ಬಾರಿ ಭಾರತೀಯ ರೈಲ್ವೇಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ರೈಲ್ವೆ ಇಲಾಖೆಗೆ 9 ಪಟ್ಟು ಹೆಚ್ಚು ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.