ಮಾಡಾಳ್ಗೆ ಜಾಮೀನು.. ಕೋರ್ಟ್ ತೀರ್ಮಾನವನ್ನು ವಿಶ್ಲೇಷಣೆ ಮಾಡಲ್ಲ, ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕೆಂಡ, ಲೋಕಾಯುಕ್ತವನ್ನು ನಿಷ್ಕ್ರಿಯ ಮಾಡಿದ್ದೇ ಕಾಂಗ್ರೆಸ್, ಎಲ್ಲಾ ಕೇಸ್ ACBಗೆ ರೆಫರ್ ಮಾಡಿದ್ದೇಕೆ ಕಾಂಗ್ರೆಸ್..?
ಬೆಂಗಳೂರಿನ ನಾಗರಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಗಮನವನ್ನು ನೀಡಲಾಗಿದ್ದು, ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೊಮ್ಮಾಯಿ ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ ಎಂದು ದಾವಣಗೆರೆಯಲ್ಲಿ ಬೊಮ್ಮಾಯಿ ಬಗ್ಗೆ ಸುರ್ಜೇವಾಲಾ ಕಿಡಿಕಾರಿದ್ದಾರೆ.. ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ. ರಾಜ್ಯಕ್ಕೆ ಬಂದಾಗ ಮೋದಿ ಇದರ ಬಗ್ಗೆ ಒಂದು ಮಾತಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಆಪಾದನೆ ಮಾಡುವ ಮನಸ್ಸು ಮೊದಲು ಶುದ್ಧವಾಗಿರಬೇಕು. ಬಿಸ್ಕತ್ತು, ಟೂತ್ ಪೇಸ್ಟ್ , ಜಲಸಂಪನ್ಮೂಲದಲ್ಲೂ ಭ್ರಷ್ಟಾಚಾರ. ಈ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಕೈ ಇದೆ ಎಂದು ಕೈ ಪ್ರತಿಭಟನೆಗೆ ಮುಂದಾಗಿರುವ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ರು.
ಕಾನ್ವೆಂಟ್ ಅಂತ ಹೇಳಿದರೆ ಇಂಗ್ಲೀಷ್ ಕಲಿಸೋದಷ್ಟೆ. ಕಾನ್ವೆಂಟ್ ಬೋರ್ಡ್ ಹಾಕಿದರೆ ಶಾಲೆಗೆ ಸಾಲು ಹಚ್ತಾರೆ. ಹೀಗಾಗಿ ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದು ಶಿಗ್ಗಾಂವಿಯ ಶಾಲಾ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.
BJP ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷಿ ಕೇಳುತ್ತಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಇದೇ ಸಾಕ್ಷಿ. ಸಿಎಂ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ..
ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯದಲ್ಲಿ ಲೂಟಿ ಮಾಡಿದ್ರು. ಹಾಸ್ಟೆಲ್ ವಿದ್ಯಾರ್ಥಿಗಳ ಹಾಸಿಗೆಯಲ್ಲೂ ದುಡ್ಡು ಹೊಡೆದ್ರು. ಕಾಂಗ್ರೆಸ್ನವರು 5 ವರ್ಷ ಪೂರ್ತಿ ಲೂಟಿನೇ ಲೂಟಿ ಮಾಡಿದ್ರು ಎಂದು ಬಿಜೆಪಿಯ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಆರೋಪ ಮಾಡಿದ್ರು.
ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ. ನೌಕರರೊಂದಿಗೆ ಸಂಧಾನ ಸಭೆ ನಡೆಸಿದ ಬೊಮ್ಮಾಯಿ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ತಡರಾತ್ರಿ ತುರ್ತು ಸಭೆ. ಸಚಿವರಾದ ಅಶೋಕ್, ಸುಧಾಕರ್, ಆರಗ, ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿ.
ಅಮಿತ್ ಶಾ ಚುನಾವಣಾ ಏಜೆಂಟ್ ಎಂಬ ಮಾತಿಗೆ ಸಿಎಂ ಕಿಡಿ. ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಆಕ್ರೋಶ. ಹಾಗಾದ್ರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರಾ ಎಂದು ಸಿಎಂ ಪ್ರಶ್ನೆ. ಅನುಭವಿ ಮಾಜಿ ಸಿಎಂ ಒಬ್ಬರು ಈ ರೀತಿ ಮಾತನಾಡೋದು ಸರಿಯಲ್ಲ ಎಂದ ಬೊಮ್ಮಾಯಿ.
ಶಿಗ್ಗಾಂವಿ ಸವಣೂರು ವಿಧಾನಸಭೆ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಮೂರು ಬಾರಿ ಸ್ಪರ್ಧಿಸಿ. ಒಂದು ಬಾರಿ ಶಾಸಕನಾಗಿದ್ದ ಅಜಂಪೀರ್ ಖಾದ್ರಿ ಅವರಿಗೆ ಹಿನ್ನಡೆಯಾಗುತ್ತಿದೆ. ಶಶಿಧರ ಯಲಿಗಾರ ಟಿಕೆಟ್ ನೀಡಿ ಅಂತಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ..
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಆರೋಗ್ಯ ಸುಧಾರಣೆಗಾಗಿ ಸುಮಾರು 720 ಕೋಟಿ ಮೀಸಲಿರಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, 202 ಕೋಟಿ ರೂ. ವೆಚ್ಚದಲ್ಲಿ ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.
Karnataka budget 2023 : 10,000 ವಸತಿರಹಿತ ಮೀನುಗಾರರಿಗೆ ವಸತಿ ನಿರ್ಮಾಣ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ. ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಮತ್ಸ ಸಿರಿ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ.
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮೂಲಕ PPP ಮಾದರಿಯಲ್ಲಿ ವಿಮಾನನಿಲ್ದಾಣ ಅಭಿವೃದ್ಧಿಪಡಿಸಿಲಾಗುವುದು.
ಕುಟುಂಬಕ್ಕಾಗಿ ಶ್ರಮಿಸುವ ಮಹಿಳೆಯರಿಗಾಗಿ ಶ್ರಮ ಶಕ್ತಿ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ಸರ್ಕಾರವು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಗಳ ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.