BY Vijayendra Slams Congress government: ಆದಾಯದ ಮೂಲಗಳನ್ನೆಲ್ಲ ಈಗಾಗಲೇ ದುಪ್ಪಟ್ಟು ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಸರ್ಕಾರ ಈಗ ಸರ್ಕಾರಿ ಆಸ್ತಿಗಳ ಮೇಲೂ ಕಣ್ಣು ಹಾಕಲು ಹೊರಟಿರುವುದನ್ನು ನೋಡಿದರೆ 'ಈ ಹಿಂದೆ ಚಿನ್ನ ಅಡವಿಟ್ಟು ದೇಶ ಮುನ್ನಡೆಸುವ ಸ್ಥಿತಿಗೆ ತಲುಪಿದ್ದ ಘಟನೆಯನ್ನು ನೆನಪಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
Congress Loots Karnataka: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನಾಳೆ (ಜೂನ್ 20) ಸೈಕಲ್ ಜಾಥಾ ಬಿಜೆಪಿ ಕಚೇರಿ ಜಗನ್ನಾಥ ಭವನದಿಂದ ವಿಧಾನಸೌಧದವರೆಗೆ ನಡೆಯಲಿದೆ.
Congress Loots Karnataka: ಪರೀಕ್ಷೆಯಲ್ಲಿ ಅಕ್ರಮ ನಡೆದರೂ ಸಚಿವ ಪ್ರಿಯಾಂಕ್ ಖರ್ಗೆ ಸಾಹೇಬರು ತನ್ನ ಅಪ್ತರನ್ನು ರಕ್ಷಣೆ ಮಾಡುವುದಕ್ಕಾಗಿಯೇ ಸಿಬಿಐ ತನಿಖೆಗೆ ಕೊಡುವುದಿಲ್ಲವೆಂದು ಕಡ್ಡಿ ತುಂಡು ಮಾಡಿ ಹೇಳಿದ್ದಾರೆ. ಅಲ್ಲಿಗೆ ಅಕ್ರಮ ಸಾಬೀತಾಯಿತು..! ಎಂದು ಬಿಜೆಪಿ ಟೀಕಿಸಿದೆ.
ಮೊದಲ ಹಂತದ ಸಾವಿರ ಕೋಟಿ ರೂ.ವನ್ನು ಹೈಕಮಾಂಡ್ಗೆ ಸಲ್ಲಿಸುವ ಸಮಯದಲ್ಲಿಯೇ, ಐಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್ನ ಕಲೆಕ್ಷನ್ ಕಳ್ಳಾಟ ಬಯಲಾಗಿದೆ. ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟವೆಂದು ಬಿಜೆಪಿ ಟ್ವೀಟ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.