ಬೆಂಗಳೂರು: ಎಲ್ಲೆಲ್ಲೂ ಅಕ್ರಮ, ಅವ್ಯವಹಾರ, ಲೂಟಿ, ಕಲೆಕ್ಷನ್, ಕಮಿಷನ್ ಮತ್ತು ಕಾಸಿಗಾಗಿ ಪೋಸ್ಟಿಂಗ್! ಕರ್ನಾಟಕವನ್ನು ಹಗಲು ದರೋಡೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯರ #ATMSarkara ಸರ್ಕಾರಿ ನೌಕರಿಯನ್ನೂ ಮಾರಾಟ ಮಾಡುತ್ತಿದೆ. ಪರೀಕ್ಷೆಗಳಲ್ಲಿ ಬ್ಲೂಟೂತ್, ಒಎಂಆರ್ ಶೀಟ್ ತಿದ್ದುಪಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ವಾಮಮಾರ್ಗದಲ್ಲಿ ಹುದ್ದೆ ನೀಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಪರೀಕ್ಷೆಯಲ್ಲಿ ಅಕ್ರಮ ನಡೆದರೂ ಸಚಿವ ಪ್ರಿಯಾಂಕ್ ಖರ್ಗೆ ಸಾಹೇಬರು ತನ್ನ ಅಪ್ತರನ್ನು ರಕ್ಷಣೆ ಮಾಡುವುದಕ್ಕಾಗಿಯೇ ಸಿಬಿಐ ತನಿಖೆಗೆ ಕೊಡುವುದಿಲ್ಲವೆಂದು ಕಡ್ಡಿ ತುಂಡು ಮಾಡಿ ಹೇಳಿದ್ದಾರೆ. ಅಲ್ಲಿಗೆ ಅಕ್ರಮ ಸಾಬೀತಾಯಿತು..!’ ಎಂದು ಕುಟುಕಿದೆ.
ಎಲ್ಲೆಲ್ಲೂ ಅಕ್ರಮ, ಅವ್ಯವಹಾರ, ಲೂಟಿ, ಕಲೆಕ್ಷನ್, ಕಮಿಷನ್, ಕಾಸಿಗಾಗಿ ಪೋಸ್ಟಿಂಗ್..!
ಕರ್ನಾಟಕವನ್ನು ಹಗಲು ದರೋಡೆ ಮಾಡುತ್ತಿರುವ @siddaramaiah ಅವರ #ATMSarkara ಸರ್ಕಾರಿ ನೌಕರಿಯನ್ನೂ ಮಾರಾಟ ಮಾಡುತ್ತಿದೆ. ಪರೀಕ್ಷೆಗಳಲ್ಲಿ ಬ್ಲೂಟೂತ್, ಒಎಂಆರ್ ಶೀಟ್ ತಿದ್ದುಪಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ವಾಮಮಾರ್ಗದಲ್ಲಿ ಹುದ್ದೆ… pic.twitter.com/XfM2NVASYf
— BJP Karnataka (@BJP4Karnataka) November 2, 2023
‘ಕಳೆದ 5 ತಿಂಗಳಲ್ಲಿ 4 ಬಾರಿ ಕಾಂಗ್ರೆಸ್ ಹೈಕಮಾಂಡ್ ತನ್ನ ಏಜೆಂಟರನ್ನು ಕರ್ನಾಟಕಕ್ಕೆ ಕಳುಹಿಸಿರುವುದು ಕಲೆಕ್ಷನ್ ಮಾಡಿ ಕೊಂಡೊಯ್ಯುವುದಕ್ಕೇ ಹೊರತು ಇನ್ನೇನಕ್ಕೂ ಅಲ್ಲ. ನಿಗಮ ಮಂಡಳಿಗಳಿಂದ ಬರಬೇಕಾದ ಕಲೆಕ್ಷನ್ ಪ್ರಮಾಣವನ್ನು ರಣದೀಪ್ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ ಅವರು ನಿಗದಿಪಡಿಸಿ ಹೋಗಿದ್ದು, ಮುಂದಿನ ತಿಂಗಳು ಮತ್ತೆ ಕಲೆಕ್ಷನ್ಗೆ ಈ ಏಜೆಂಟರು ಬರಲಿದ್ದಾರೆ. ಕಲೆಕ್ಷನ್ ಸರಿಯಾಗಿ ಸಂದಾಯವಾದರೆ ಹೈ ಕಮಾಂಡ್ಗೆ ಅಷ್ಟೇ ಸಾಕು ಎಂಬುದು ಕಾಂಗ್ರೆಸ್ ಶಾಸಕರಿಗೆಲ್ಲ ತಿಳಿದಿರುವ ಕಾರಣ ಒಳಜಗಳಗಳು ಅಭಾದಿತವಾಗಿ ಮುಂದುವರಿಯಲಿವೆ’ ಎಂದು ಬಿಜೆಪಿ ಕುಟುಕಿದೆ.
ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಹೈಕಮಾಂಡ್ ತನ್ನ ಏಜೆಂಟರನ್ನು ಕರ್ನಾಟಕಕ್ಕೆ ಕಳುಹಿಸಿರುವುದು ಕಲೆಕ್ಷನ್ ಮಾಡಿ ಕೊಂಡೊಯ್ಯುವುದಕ್ಕೇ ಹೊರತು ಇನ್ನೇನಕ್ಕೂ ಅಲ್ಲ.
ನಿಗಮ ಮಂಡಳಿಗಳಿಂದ ಬರಬೇಕಾದ ಕಲೆಕ್ಷನ್ ಪ್ರಮಾಣವನ್ನು ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರು ನಿಗದಿಪಡಿಸಿ ಹೋಗಿದ್ದು, ಮುಂದಿನ ತಿಂಗಳು ಮತ್ತೆ ಕಲೆಕ್ಷನ್ಗೆ ಈ… pic.twitter.com/4s4MAemi3l
— BJP Karnataka (@BJP4Karnataka) November 2, 2023
ಇದನ್ನೂ ಓದಿ: ರಸ್ತೆ ದಾಟುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು..!
‘ರಾಜ್ಯದಲ್ಲಿ ಸಿದ್ದರಾಮಯ್ಯನವರಂತಹ ಅಸಮರ್ಥ ಮುಖ್ಯಮಂತ್ರಿಯ ಕಾರಣದಿಂದಾಗಿ ಅನ್ನದಾತನ ಬದುಕು ನರಕವಾಗಿದೆ. ಬರ ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿರುವ ಕಾರಣಕ್ಕೆ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ. ರಾಜ್ಯದಲ್ಲಿ ಗ್ರಹಣ ಹಿಡಿಸಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ವಿದ್ಯುತ್ ಕೊಡುತ್ತಿಲ್ಲ, ಬರ ಪರಿಹಾರ ಕೊಡುತ್ತಿಲ್ಲ ಆದರೆ ಜೀವಗಳನ್ನು ಮಾತ್ರ ಬಲಿ ಪಡೆಯುತ್ತಲೇ ಇದೆ’ ಎಂದು ಬಿಜೆಪಿ ಕಿಡಿಕಾರಿದೆ.
ಬರದ ಸಂದರ್ಭದಲ್ಲಿಯೇ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ, ರೈತ ವಿರೋಧಿ @INCKarnataka ಸರ್ಕಾರ.
ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡದೆ ಲೋಡ್ ಶೆಡ್ಡಿಂಗ್ ಹೇರಿರುವ ಕಾಂಗ್ರೆಸ್, ಈಗ ಕೃಷಿ ಪಂಪ್ಸೆಟ್ಗಳಿಗೆ ನೀಡುತ್ತಿದ್ದ ಉಚಿತ ಮೂಲಸೌಕರ್ಯ ಯೋಜನೆಯನ್ನೇ ರದ್ದುಗೊಳಿಸಿದೆ.
ಸಿಎಂ @siddaramaiah ರವರೇ, ಕರ್ನಾಟಕದಲ್ಲಿ… pic.twitter.com/yuhmyTYf0w
— BJP Karnataka (@BJP4Karnataka) November 2, 2023
‘ಬರದ ಸಂದರ್ಭದಲ್ಲಿಯೇ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ. ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ನೀಡದೆ ಲೋಡ್ ಶೆಡ್ಡಿಂಗ್ ಹೇರಿರುವ ಕಾಂಗ್ರೆಸ್, ಈಗ ಕೃಷಿ ಪಂಪ್ಸೆಟ್ಗಳಿಗೆ ನೀಡುತ್ತಿದ್ದ ಉಚಿತ ಮೂಲಸೌಕರ್ಯ ಯೋಜನೆಯನ್ನೇ ರದ್ದುಗೊಳಿಸಿದೆ. ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕದಲ್ಲಿ ರೈತರಿಗೆ ವರವಾಗಿದ್ದ ಯೋಜನೆಗಳನ್ನು ಶಾಪಗಳನ್ನಾಗಿ ಪರಿವರ್ತಿಸುವುದೇ ನಿಮ್ಮ ಅಸಲಿ ಕರ್ನಾಟಕ ಮಾಡೆಲ್ಲಾ..!’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಪರೀಕ್ಷೆಗಳಲ್ಲಿಯೂ ಅವ್ಯಾಹತವಾಗಿ ಕಲೆಕ್ಷನ್ ನಡೆಸುವುದೇ ಕಾಂಗ್ರೆಸ್ ಸರ್ಕಾರದ 6ನೇ ಅವಾಸ್ತವಿಕ ಗ್ಯಾರಂಟಿ! ಅಭ್ಯರ್ಥಿಯ ಒಎಂಆರ್ ಶೀಟ್, ಪ್ರಶ್ನೆಪತ್ರಿಕೆ ಪ್ಯಾಟರ್ನ್ ಹಾಗೂ ಅಭ್ಯರ್ಥಿಯ ಮೂಲ ಫೋಟೋ ಪರಿಶೀಲಿಸದೆ, ಪರೀಕ್ಷಾ ಮೇಲ್ವಿಚಾರಕರು ಹಾಲ್ ಟಿಕೆಟ್ ಮೇಲೆ ಸಹಿ ಮಾಡುತ್ತಾರೆಂದರೆ, ಕೆಇಎ ನಡೆಸಿದ ಪರೀಕ್ಷೆ ಇನ್ನು ಯಾವ ಮಟ್ಟದಲ್ಲಿ ಅಕ್ರಮದ ಕೂಪವಾಗಿದೆ ಎಂಬುದು ಅರಿವಾಗುತ್ತದೆ. ಸಿಎಂ ಸಿದ್ದರಾಮಯ್ಯನವರೇ, ಪರೀಕ್ಷೆಯಲ್ಲಿ ಅಕ್ರಮ ನಡೆಸಿದವರ ಮೇಲೆ ಇನ್ನಾದರೂ ಕ್ರಮ ಕೈಗೊಳ್ಳುತ್ತೀರೋ ಅಥವಾ "ಅವರು ನಮ್ಮವರೇ" ಎಂದು ಸುಮ್ಮನಾಗುತ್ತೀರೋ..?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಬಂದ್ ಆಗಲಿವೆ ಪಡಿತರ ಅಂಗಡಿಗಳು..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.