ಎದುರುದಾರ ಕೆನರಾ ಬ್ಯಾಂಕಿನವರು ತಮ್ಮ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣೆ ಸಲ್ಲಿಸಿದ್ದರು. ದೂರುದಾರರು ವೈಯಕ್ತಿಕವಾಗಿ ಖಾತೆಯನ್ನು ಹೊಂದಿರಲಿಲ್ಲ. ಅದು ಪಾಲುದಾರಿಕೆ ಸಂಸ್ಥೆಯ ಕರೆಂಟ್ ಅಕೌಂಟ ಆಗಿತ್ತು, ಸದರಿ ಖಾತೆ ಕರೆಂಟ್ ಅಕೌಂಟ್ ಆಗಿದ್ದರಿಂದ ಬ್ಯಾಂಕ್ ನಿಗದಿತ ಶುಲ್ಕವನ್ನು ವಿಧಿಸುತ್ತಿತ್ತು
ಖಾತೆಯಿಂದ ಹಣವನ್ನು ವರ್ಗಾಹಿಸಲು ತಾವು ಯಾವುದೇ ತೆರನಾದ ಪ್ರಕ್ರಿಯೆಗಳನ್ನು ಪಾಲಿಸದೇ ಅವರ ಗಮನಕ್ಕೆ ಬಾರದಂತೆ ವರ್ಗಾವಣೆಗೊಂಡಿದ್ದರ ಮೊತ್ತದ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್ಮನ್ಗೆ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಪರಿಹಾರ, ನ್ಯಾಯ ಸಿಕ್ಕಿರಲಿಲ್ಲ.
HD Kumaraswamy : ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಸಂದಾಯವಾಗುವವರೆಗೆ ದೂರುದಾರರಿಗೆ ಕೊಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಎದುರುದಾರ ಮ್ಯಾಗಮಾ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.
ಮೊಬೈಲ್ನಲ್ಲಿ ತಯಾರಿಕಾ ದೋಷವಿರುವ ಕಾರಣ ಮೊಬೈಲ್ ಖರೀದಿಯ ಮೊತ್ತ ರೂ.40,800/-ಗಳನ್ನು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಆದ ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಹಾಗೂ ರೂ.2.000/-ಗಳ ವೆಚ್ಚಗಳನ್ನು ಎದುರುದಾರರು ನೀಡಲು ನಿರ್ದೇಶಿಸಬೇಕೆಂದು ವಿನಂತಿಸಿರುತ್ತಾರೆ.
ಧಾರವಾಡ ತಾಲ್ಲೂಕಿನ ನಾರಾಯಣಪುರದ ವಾಸಿ ಮಾರುತಿ ಶಾನಬಾಗ್ ಎಂಬುವವರು ದಿ:22/12/2023 ರಂದು ರೂ.10,000/- ಕಿಮ್ಮತ್ತಿನ ಆಯುರ್ವೇದಿಕ್ ಆಹಾರ ಸಾಮಾನುಗಳನ್ನು ಮುಂಬೈಯಲ್ಲಿರುವ ಸಂತೋಷ ಎಂಬುವವರಿಗೆ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್ನವರ ಮುಖಾಂತರ ಸರ್ವಿಸ್ ಚಾರ್ಜ ಪಾವತಿಸಿ ಪಾರ್ಸಲ್ ಕಳುಹಿಸಿದ್ದರು. ಆದರೆ ಅದು ಸಂತೋಷ ಅವರಿಗೆ ತಲುಪಿರಲಿಲ್ಲ.
ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್ಸ್ ಪ್ರೆ.ಲಿ. ಚೆನ್ನೈ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.
ಕಟ್ಟಡದ ಕೆಲಸ ಮುಗಿದ ಮೇಲೆ ಉಭಯೇತರರಿಗೆ ಬರಬೇಕಾದ ಭಾಗಗಳನ್ನು ಇಬ್ಬರೂ ಹಂಚಿಕೊಂಡರು. ಆದರೆ ರೂ.40 ಲಕ್ಷ ಮೇಲೆ ಶೇ8% ರಂತೆ ಬಡ್ಡಿ ಕೊಟ್ಟಿಲ್ಲ. ಹಾಗೂ ಕಟ್ಟಡದ ಕಾಮಗಾರಿ ಅಪೂರ್ಣವಾಗಿದೆ ಅಂತಾ ಹೇಳಿ ಎದುರುದಾರ/ಬಿಲ್ಡರ್ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ:02/12/2021 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಗೋಕಾಕ ಜಿಲ್ಲೆಯ ವಿದ್ಯಾನಗರದ ಬಸವರಾಜ ಇಳಿಗೇರ್ ಇವರು ರೂ.18,00,000/- ಹಣ ಸಂದಾಯ ಮಾಡಿ ಹುಬ್ಬಳ್ಳಿಯ ಗೋಲ್ಡನ್ ಹೈಟ್ಸ್ ಅಪಾರ್ಟಮೆಂಟ್, ಕಾರವಾರ ರೋಡನಲ್ಲಿ ಪ್ಲ್ಯಾಟ್ ಖರೀದಿಸಿದ್ದರು.
ಹುಬ್ಬಳ್ಳಿಯ ನವನಗರದ ಬಸವಣ್ಣೆಪ್ಪ ಗುಮಗೋಳ ಅನ್ನುವವರು 2021-2022ನೇ ಹಿಂಗಾರು ಸಾಲಿನಲ್ಲಿ ತಮ್ಮ ಜಮೀನಿನಲ್ಲಿನ ಮಾವಿನ ಬೆಳೆಗೆ ಎಸ್.ಬಿ.ಆಯ್ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ವಿಮೆಗೆ ತಗಲುವ ವಿಮಾಕಂತಿನ ಹಣ ರೂ.10,116.80 ಪೈಸೆ ಗಳನ್ನು ವಿಮಾ ಕಂಪನಿಯ ಅಧಿಕೃತ ಏಜಂಟರಾದ ನವನಗರದ ಹುಬ್ಬಳ್ಳಿಯ ಜೀವನ ಆಧಾರ ಸಹಾಯವಾಣಿ ಕೇಂದ್ರದ ಮೂಲಕ ಭರಿಸಿದ್ದರು.
ಹುಬ್ಬಳ್ಳಿಯ ಜೆ.ಪಿ.ನಗರ, ಗೋಕುಲ ರಸ್ತೆ ನಿವಾಸಿ ವಿನಯ ಹಂಜಿಎಂಬುವವರುತಮ್ಮ ಪತ್ನಿ ಶ್ರೀಮತಿ. ರೇಖಾಳ ಹೆರಿಗೆಗಾಗಿ ದಿ:10/12/2019ರಂದು ಎದುರುದಾರ ಹುಬ್ಬಳ್ಳಿಯ ಜನತಾ ಬಜಾರ ಹತ್ತಿರದ ಸಿಟಿ ಕ್ಲಿನಿಕ್ ಮಲ್ಟಿ ಸ್ಪೆಶಾಲಿಟಿಆಸ್ಪತ್ರೆಗೆ ದಾಖಲಿಸಿದ್ದರು.
ಧಾರವಾಡದ ಮಹೇಂದ್ರಕರ ಚಾಳ ನಿವಾಸಿ ಕಾರ್ತಿಕ ಎಲಿಗಾರ ಎಂಬುವವರು ಕಾಲೇಜ ವಿದ್ಯಾರ್ಥಿಯಾಗಿದ್ದು ಗಿಟಾರ್ ವಾದ್ಯ ಕಲಿಯುತ್ತಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮತ್ತು ಗಿಟಾರ ಕಲಿಯಲು ಸಹಾಯವಾಗಲೆಂದು ಆನ್ಲೈನ್ ಮೂಲಕ ಪ್ಲಿಪ್ಕಾರ್ಟ್ನಿಂದ ದಿ:22/09/2022 ರಂದು ರೂ.54,019/- ಮೌಲ್ಯದ ಆಪಲ್ ಐಫೋನ್ ಖರೀದಿಸಿದ್ದರು.
ಗದಗ, ಶಿರಟ್ಟಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 22 ಜನದೂರುದಾರರು ಹುಬ್ಬಳ್ಳಿಯ ಆಶೀರ್ವಾದ್ ಡೆವಲ್ಪರ್ಸ್ಜತೆ ಧಾರವಾಡದ ಸತ್ತೂರಿನಲ್ಲಿ ಪ್ಲಾಟ್ ಖರೀದಿಸಲು 2012 ನೇ ಇಸ್ವಿಯಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಎಲ್ಲ ದೂರುದಾರರು ಖರೀದಿ ಒಪ್ಪಂದದ ಮುಂಗಡ ಹಣವನ್ನು ಆಶೀರ್ವಾದ ಡೆವಲ್ಪರ್ಸ್ 2010 ರಿಂದ 2012 ಇಸ್ವಿವರೆಗೆ ಸಂದಾಯ ಮಾಡಿದ್ದರು.
ನವಲಗುಂದ ತಾಲ್ಲೂಕು ಮೊರಬ್ ಗ್ರಾಮದ ವಾಸಿ ಶಿಲ್ಪಾ ಹೊಳಲ್ ಅನ್ನುವವರ ಗಂಡ ಮಂಜುನಾಥ ಹೊಳಲ್ ರವರು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸ್ಟೇಟ್ ಬ್ಯಾಂಕ್ನಲ್ಲಿ ರೂ.2,10,000/-ಗಳ ಗೋಲ್ಡ್ ಲೋನ್ ತೆಗೆದುಕೊಂಡಿದ್ದರು. ಅಲ್ಲದೇ ಮಂಜುನಾಥರವರು ರೂ.5,60,000/- ವೈಯಕ್ತಿಕ ಸಾಲವನ್ನು ಅದೇ ಬ್ಯಾಂಕ್ನಿಂದ ಪಡೆದಿದ್ದರು. ಸಾಲ ಕೊಟ್ಟ ಸ್ಟೇಟ್ ಬ್ಯಾಂಕ್ನವರು ಆ ಎರಡರ ವೈಯಕ್ತಿಕ ಸಾಲಗಳ ಮೇಲೆ ಎಸ್ಬಿಆಯ್ ಜನರಲ್ ಇನ್ಸುರೆನ್ಸ್ ಮಾಡಿಸಿದ್ದರು. ನಂತರ ಮಂಜುನಾಥ ರೂ.2,10,000/- ಗೋಲ್ಡ್ ಲೋನ್ ಹಣ ಬ್ಯಾಂಕಿಗೆ ಮರು ಪಾವತಿಸಿದ್ದರು. ಈ ಮಧ್ಯದಲ್ಲಿ ಆತ ದಿ.28/01/2022 ರಂದು ಮಂಜುನಾಥ ಹೊಳಲ್ ನಿಧನ ಹೊಂದಿದ್ದರು.
ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ಇಟಿಗಟ್ಟಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದ ಇಟಿಗಟ್ಟಿ ಲೇಔಟನಲ್ಲಿ, ಹುಬ್ಬಳ್ಳಿಯ ಅಧ್ಯಾಪಕ ನಗರ ನಿವಾಸಿ ನಾಗರತ್ನ ಮುಂಡರಗಿ ಮತ್ತು ಧಾರವಾಡದ ಸತ್ತೂರ ನಿವಾಸಿ ಮೋಹನ ಡೊಂಬರ ಎಂಬುವವರು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್ಜೊತೆ ಪ್ಲಾಟ ನಂ.9, 10 ಮತ್ತು 11ರ ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಒಂದೊಂದು ಸೈಟಿಗೆ ರೂ.5,63,600/- ರೂಪಾಯಿ ಹಣ ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಕೇಶ್ವಾಪುರ ನಗರದ ನೂತನ್ಜೈನ್ ಹಾಗೂ ಕಮಲೇಶ ಬಗ್ರೆಚಾ ಇಬ್ಬರೂ ದೂರುದಾರರು ಒಂದೇ ಕುಟುಂಬದವರಾಗಿದ್ದು, ಎದುರು ದಾರರಾದ ಸಿಲ್ವರ್ ಬ್ರಿಕ್ ಬಿಲ್ಡರ್ ಮತ್ತು ಡೆವಲ್ಪರ್ನ ಮಾಲೀಕ ಅವಿನಾಶ ಸವಣೂರರವರು ಹುಬ್ಬಳ್ಳಿಯ ಬೆಂಗೇರಿ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಲಕ್ಸೋಎನ್ಟಿಗೊ ಅಪಾರ್ಟಮೆಂಟನಲ್ಲಿ ತಲಾ ಒಂದು ಪ್ಲ್ಯಾಟ್ ಖರೀದಿಸಿದ್ದರು. ಅದಕ್ಕೆ ಇಬ್ಬರೂ ದೂರುದಾರರು ಎದುರು ದಾರರಿಗೆ ಮುಂಗಡವಾಗಿ ರೂ.28,09,000/- ಮತ್ತು ರೂ.23,79,000/- ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಗೋಕುಲ್ ರಸ್ತೆಯ ವ್ಯಾಪಾರಿ ಮಹಾಂತೇಶ ಬಾಟ್ಲಿ ಎಂಬುವವರು ಪ್ರತಿಕ್ಷಾ ಇಂಜಿನಿಯರಿಂಗ್ ವಕ್ರ್ಸನ ಮಾಲೀಕರಾಗಿದ್ದಾರೆ. ಅವರು ತಮ್ಮ ಉದ್ಯೋಗಕ್ಕಾಗಿ ಎದುರುದಾರ ಸಿಎನ್ಸಿ ಮಶೀನಿನ ಉತ್ಪಾದಕರಾದ ಮಹಾರಾಷ್ಟ್ರ ಸತಾರದ ಅಭಿಜಿತ್ ಇಕ್ವಿಪ್ಮೆಂಟ್ಸ್ ಕಂಪನಿಯವರಿಂದ 27/05/2022 ರಂದು ಹೊಸ ಸಿಎನ್ಸಿ ಟ್ಯೂನಿಂಗ್ ಮಶೀನ ಖರೀದಿಸಿದ್ದರು. ಅದರ ಬೆಲೆ ರೂ.11 ಲಕ್ಷ ಇತ್ತು. ಆ ಹಣ ಪಡೆದ ಎದುರುದಾರ ದೂರುದಾರರಿಗೆ ಸಿಎನ್ಸಿ ಟ್ಯೂನಿಂಗ್ ಮಶೀನ ಪೂರೈಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.