ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಬುಧವಾರ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯದಲ್ಲಿ ತಕ್ಷಣದ ಪರಿಹಾರ ಕ್ರಮಗಳಿಗಾಗಿ 1,000 ಕೋಟಿ ರೂ.ಪರಿಹಾರವನ್ನು ಘೋಷಿಸಿದ್ದಾರೆ.
ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಅನೇಕ ಜಿಲ್ಲೆಗಳಲ್ಲಿ ಈಗ ತೌಕ್ತೆ ಚಂಡಮಾರುತದ ಪರಿಣಾಮ ಗೋಚರಿಸುತ್ತದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಎರಡು ಉತ್ತರ ಭಾರತದ ಹಲವೆಡೆ ಮಳೆಯ ಮುನ್ಸೂಚನೆ ನೀಡಿದೆ.
ಭಾರತೀಯ ನೌಕಾಪಡೆಯ ಐಎನ್ಎಸ್ ಕೊಚ್ಚಿ ಮತ್ತು ಐಎನ್ಎಸ್ ಕೋಲ್ಕತಾ 111 ಜನರನ್ನು ರಕ್ಷಿಸಿದ್ದು, ಕಡಲಾಚೆಯ ನೆರವು ಹಡಗು (ಒಎಸ್ವಿ) 'ಗ್ರೇಟ್ಶಿಪ್ ಅಹಲ್ಯ' 17 ಜನರನ್ನು ರಕ್ಷಿಸಿದೆ ಮತ್ತು ಒಎಸ್ವಿ 'ಓಷನ್ ಎನರ್ಜಿ' 18 ಜನರನ್ನು ರಕ್ಷಿಸಿದೆ.
Cyclone Tauktae: ಮಹಾರಾಷ್ಟ್ರದ ಕೊಂಕಣ್ ಕ್ಷೇತ್ರ ತೌಕ್ತೆ ಚಂಡಮಾರುತದ ರೌದ್ರ ನರ್ತನಕ್ಕೆ ನಲುಗಿ ಹೋಗಿದೆ. ಚಂಡಮಾರುತಕ್ಕೆ ಸಂಭವಿಸಿದ ವಿವಿಧ ಘಟನೆಗಳಲ್ಲಿ ಒಟ್ಟು ಆರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಮೂರು ನಾವಿಕರು ನಾಪತ್ತೆಯಾಗಿದ್ದಾರೆ.
Astrology Prediction - ದೇಶದಲ್ಲಿ ಇತ್ತೀಚಿಗೆ ಬಂದ ಭೂಕಂಪ, ಚಂಡಮಾರುತ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಕುರಿತು ಮಾಡಲಾಗಿದ್ದ ಜೋತಿಷಿಗಳ ಭವಿಷ್ಯವಾಣಿ ಸುದ್ದಿ ನಿಜ ಎಂದು ಸಾಬೀತಾಗಿದೆ. ಏಪ್ರಿಲ್ ತಿಂಗಳಿನಲ್ಲಿ ನಮ್ಮ ಸಹಯೋಗಿ ವೆಬ್ ಸೈಟ್ ಆಗಿರುವ Zee ನ್ಯೂಸ್ ಗುರು ಗ್ರಹದ ರಾಶಿ ಪರಿವರ್ತನೆಯ ಕುರಿತು ಈ ಸುದ್ದಿ ಬಿತ್ತರಿಸಿತ್ತು.
Cyclone Tauktae: ಇತ್ತೀಚಿನ ಹವಾಮಾನ ಮುನ್ಸೂಚನೆ (ಐಎಂಡಿ ಮುನ್ಸೂಚನೆ) ಪ್ರಕಾರ, ಚಂಡಮಾರುತ ಸೋಮವಾರ ಮಧ್ಯಾಹ್ನ ಗುಜರಾತ್ ತೀರಕ್ಕೆ ಅಪ್ಪಳಿಸಬಹುದು. ಆ ಸಮಯದಲ್ಲಿ, ಚಂಡಮಾರುತದ ವೇಗ ಗಂಟೆಗೆ 180 ಕಿ.ಮೀ. ಇರಲಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.