David Warner: ನಿವೃತ್ತಿಯಿಂದ ಯು-ಟರ್ನ್ ತೆಗೆದುಕೊಂಡ ಆಸ್ಟ್ರೇಲಿಯಾದ ಮಾಜಿ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ಗೆ ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಮಂಡಳಿ ಆಘಾತ ನೀಡಿದೆ. ಅವರನ್ನು ಮತ್ತೊಮ್ಮೆ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಆಸ್ಟ್ರೇಲಿಯಾದ ಆಯ್ಕೆಗಾರ ಜಾರ್ಜ್ ಬೈಲಿ ಸ್ಪಷ್ಟಪಡಿಸಿದ್ದಾರೆ. ODI ವರ್ಲ್ಡ್ ಕಪ್ 2023 ಗೆದ್ದ ನಂತರ, ಡೇವಿಡ್ ವಾರ್ನರ್ 50 ಓವರ್ ಫಾರ್ಮ್ಯಾಟ್ ಮತ್ತು T20 ವಿಶ್ವಕಪ್ 2024 ನೊಂದಿಗೆ ಕಿರು ಸ್ವರೂಪಕ್ಕೆ ವಿದಾಯ ಹೇಳಿದರು. ಈ ವರ್ಷದ ಆರಂಭದಲ್ಲಿ, ವಾರ್ನರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದರು.
David Warner: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಇದೀಗ ಪುನರಾಗಮನದ ಚಿಂತನೆಯಲ್ಲಿದ್ದಾರೆ. T20 ವಿಶ್ವಕಪ್ನ ಸೂಪರ್ 8 ಹಂತದಿಂದ ಆಸ್ಟ್ರೇಲಿಯಾ ತಂಡದಿಂದ ನಿರ್ಗಮಿಸಿದ ನಂತರ ವಾರ್ನರ್ ಸದ್ದಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದ ಅವರು ಮೆಗಾ ಟೂರ್ನಿಯ ಬಳಿಕ ತಮ್ಮ ನಿರ್ಧಾರವನ್ನು ದೃಢಪಡಿಸಿದ್ದರು.
India vs Australia T20, David Warner: ಆಸ್ಟ್ರೇಲಿಯ ತಂಡವು ನವೆಂಬರ್ 23ರಿಂದ ಭಾರತ ಆತಿಥ್ಯದಲ್ಲಿ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಆಡಲು ಡೇವಿಡ್ ವಾರ್ನರ್’ಗೆ ಅವಕಾಶ ಕಲ್ಪಿಸಲಾಗಿಲ್ಲ. ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್ ಸರಣಿಗೆ ಮುನ್ನ ವಾರ್ನರ್’ಗೆ ತವರಿಗೆ ಮರಳಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.