ಚುನಾವಣಾ ಕಣದಲ್ಲಿ ರೋಷಾವೇಶದಿಂದ ಹೋರಾಡಿ ಮೊದಲ ಬಾರಿ ಗೆದ್ದು ಬಂದವರ ಸಂಭ್ರಮ, ಹಿರಿಯರ ಸಂತೃಪ್ತಿ, ಹಳೆ ಮಿತ್ರರ ಸಮಾಗಮಕ್ಕೆ ವಿಧಾನಸಭೆ ಅಧಿವೇಶನ ಮೊದಲ ದಿನ ವೇದಿಕೆಯಾಗಿತ್ತು. ನಗು, ಹಾಸ್ಯ, ಪರಸ್ಪರ ಕಾಲೆಳೆಯುವಿಕೆಯ ಮಧ್ಯೆಯೇ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯಿತು.
ಫ್ರೀಡಂ ಪಾರ್ಕ್ನಲ್ಲಿ ಮತ್ತೆ ಸಾಲು ಸಾಲು ಪ್ರತಿಭಟನೆಗಳು ನಡೀತಿದೆ.. ರಾಜ್ಯದ ಮೂಲೆ ಮೂಲೆಯಿಂದ ವಿವಿಧ ಸಂಘಟನೆಯವರು ಆಗಮಿಸುತ್ತಿದ್ದು ವಿವಿಧ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.. ವಿವಿಧ ಸಂಘಟನೆಗಳ ಪ್ರತಿಭಟನೆ ಸರ್ಕಾರಕ್ಕೆ ತಲೆನೋವು ತಂದಿದೆ..
ಇಂದಿನಿಂದ ಹತ್ತು ದಿನಗಳ ಕಾಲ ಬಜೆಟ್ ಅಧಿವೇಶನ ಆರಂಭವಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ತೆರದಿಟ್ರು. ಆದ್ರೆ ಗವರ್ನರ್ ಭಾಷಣಕ್ಕೆ ವಿಪಕ್ಷ ನಾಯಕರು ಗೈರಾಗಿದ್ದು ಸದನವನ್ನು ಕಳೆಗುಂದುವಂತೆ ಮಾಡಿತ್ತು.
ಕರ್ನಾಟಕದ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕುರಿತಾಗಿ ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಕರ್ನಾಟಕ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಬಳಿಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ರಾಜ್ಯ ಸರ್ಕಾರಕ್ಕೂ 40% ಕಮಿಷನ್ ಆರೋಪಕ್ಕೂ ಬಿಡಲಾರದ ನಂಟು. ಇನ್ನೇನು ಎಲ್ಲವೂ ಮುಗೀತು ಅನ್ನುವಾಗ್ಲೇ ಮತ್ತೊಮ್ಮೆ ಮೈಕೊಡವಿ ಮೇಲೆದ್ದು ಬರ್ತಿದೆ. ಪದೇ ಪದೆ ಎದುರಾಗ್ತಿರೋ ಈ ಆರೋಪದಿಂದ ಹೊರಬರೋಕೆ ಸರ್ಕಾರ ವಿಲವಿಲ ಅಂತ ಒದ್ದಾಡ್ತಿದೆ.. ಆದ್ರೆ ಈ ಬಾರಿ ಸಚಿವರೊಬ್ಬರ ಮೇಲೆ ಗುತ್ತಿಗೆದಾರರ ಸಂಘ ನೇರ ಆರೋಪ ಮಾಡಿರೋದ್ರಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯು ಕಳೆದ 45 ವರ್ಷಗಳಿಂದ ಸುಮಾರು 10ಕ್ಕಿಂತಲೂ ಹೆಚ್ಚು ಜಿಲ್ಲೆಗಳ ಬಡರೋಗಿಗಳ ಆಶಾಕಿರಣವಾಗಿದೆ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಇಎಸ್ಐ, ರೇಲ್ವೆ, ಇಸಿಎಚ್ಎಸ್ ಯೋಜನೆಯಡಿ ಪ್ರತಿ ತಿಂಗಳು ಸುಮಾರು 200 ಕ್ಕೂ ಹೆಚ್ಚು ಬಡ ರೋಗಿಗಳು ಹಾಗೂ ವರ್ಷಕ್ಕೆ 2,000 ಬಡರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. 7 ಜನ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ. ನೇಮಕ ಮಾಡಲಾಗಿದೆ.
Egg In Mid-Day Meals: ಪ್ರಸ್ತುತ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಲಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಇದೀಗ ಈ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ವಿಸ್ತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ.
ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಬೇಕು ಎಂಬುದು ಹಲವರ ಕನಸು. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಬೆಂಗಳೂರಿನಿಂದ ಕಾಶಿಗೆ ತೆರಳಲು ಹೊಸ ರೈಲು ಸೇವೆ ಆರಂಭವಾಗಲಿದೆ. ಅದೇ 'ಭಾರತ್ ಗೌರವ್' ತೀರ್ಥಯಾತ್ರೆ ರೈಲು. ಈ ರೈಲಿನಲ್ಲಿ ಉತ್ತರ ಭಾರತದ ಪ್ರಮುಖ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬಹುದು.
Project Reward Implementation - ಭಾರತ ಸರ್ಕಾರ (Government Of India), ಕರ್ನಾಟಕ (Government Of Karnataka) ಮತ್ತು ಒಡಿಶಾ ರಾಜ್ಯ ಸರ್ಕಾರಗಳು (Government Of Odisha ) ಹಾಗೂ ವಿಶ್ವಬ್ಯಾಂಕ್ (World Bank) ಗಳು $115 ಮಿಲಿಯನ್ ಮೊತ್ತದ ಸಾಲ ಒಪ್ಪಂದಗಳಿಗೆ ಸಹಿ ಹಾಕಿವೆ, “ನವೀನ ಅಭಿವೃದ್ಧಿ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನವನ್ನು ಪುನರುಜ್ಜೀವನಗೊಳಿಸುವ ಯೋಜನೆಯ (Project REWARD) ಅನುಷ್ಠಾನಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂದರೆ, ಕೃಷಿ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆಗಾಗಿ ನಡೆಯುತ್ತಿರುವ ಪ್ರಾಜೆಕ್ಟ್ ರಿವಾರ್ಡ್ ಅಡಿಯಲ್ಲಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ನಡುವೆ $115 ಮಿಲಿಯನ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಕ್ಲಸ್ಟರ್ ಮತ್ತು ಬಿಗ್ ಕ್ಲಸ್ಟರ್ ಜೋನ್ ಗಳು ಜಾರಿಗೆ ಬರಲಿವೆ. 5 ಕ್ಕಿಂತ ಹೆಚ್ಚು ಕೇಸ್ ಗಳು ವರದಿಯಾದ್ರೆ ಕ್ಲಸ್ಟರ್ ಜೋನ್ ಎಂದು ಪರಿಗಣಿಸಲು ಆದೇಶ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.