ಮಂಡ್ಯದಲ್ಲಿ ಗೃಹಜ್ಯೋತಿ ಯೋಜನೆಗೆ ಕೃಷ್ಟಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಸಚಿವ,ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರಿ ರೆಸ್ಪಾನ್ಸ್ ಸಿಕ್ತಿದೆ ಅಂತ ಹೇಳಿದ್ರು. ಅಲ್ಲದೇ ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರ ಮತ್ತು HDK ವಿರುದ್ಧ ಕಿಡಿ ಕಾರಿದ್ರು. ಹಾಗಾದ್ರೆ ಏನ್ ಹೇಳಿದ್ರು ನೋಡೋಣ ಬನ್ನಿ..
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದ ನಂತರ ಯಾರಿಗೆ ಎಷ್ಟರಮಟ್ಟಿಗೆ ಲಾಭ ಆಗಿದೆ ಗೊತ್ತಿಲ್ಲ. ಆದರೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಮಾತ್ರ ಭರ್ಜರಿ ಲಾಭ ಆಗತಾ ಇದೆ.
Good News: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಕೊಟ್ಟ ಮಾತಿನಂತೆ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹ ಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಫ್ರೀ ನೀಡಲಾಗುತ್ತಿದೆ.
ರಾಜ್ಯದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನ ಕಲ್ಪಿಸಿರುವ ಕೈ ಸರ್ಕಾರ, ಇದೀಗ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಮತ್ತೊಂದು ಬಗೆಯ ಹಣದ ಭಾಗ್ಯವನ್ನ ಕಲ್ಪಿಸುತ್ತಿದೆ. ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಮೂಲಕ ನಿಮ್ಮ ನಿಮ್ಮ ಖಾತೆಯನ್ನ ತುಂಬಿಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಅರೆರೆ... ಇದೇನಿದು ಹೊಸ ಯೋಜನೆ, ನಮ್ ಖಾತೆಗೆ ಇನ್ನೆಷ್ಟು ದುಡ್ ಬರುತ್ತೆ ಅಂದುಕೊಂಡ್ರಾ ಇಲ್ಲಿದೆ ನೋಡಿ ಪೂರ್ತಿ ವರದಿ..
ಗೃಹಜ್ಯೋತಿ ಯೋಜನೆಗೆ ಭರ್ಜರಿ.. ರೆಸ್ಪಾನ್ಸ್..!
ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ..!
ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆಯಲ್ಲಿ ಏರಿಕೆ
ಒಟ್ಟು 1ಕೋಟಿ 26ಲಕ್ಷಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ
ನಿನ್ನೆ ರಾತ್ರಿ 10ರ ವೇಳೆಗೆ 2 ಲಕ್ಷದ 13 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ
ಹೊಸ ಲಿಂಕ್ ಬಂದ ನಂತ್ರ ವೇಗವಾಗಿ ಕೆಲಸ ಮಾಡ್ತಿರೋ ಸರ್ವರ್
Griha Jyoti Scheme: ದಿನದಿಂದ ದಿನಕ್ಕೆ ಅರ್ಜಿದಾರರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಇದುವರೆಗೆ ಒಟ್ಟು 97, 09, 259 ಜನರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದು ಈ ಅರ್ಜಿ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಒಂದು ಕೋಟಿ ಮೀರುವ ಸಂಭವವಿದೆ.
ಒಟ್ಟು 95.74.185ಲಕ್ಷ ಜನರಿಂದ ಅರ್ಜಿ ಸಲ್ಲಿಕೆ ನಿನ್ನೆ ರಾತ್ರಿವರೆಗೆಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ.. ದ್ವಿಮುಖ ಆಗಿರುವ ನೊಂದಣಿದಾರರ ಸಂಖ್ಯೆ ಏಳು ಗಂಟೆ ವೇಳೆಗೆ ಒಟ್ಟು 2.61 759ಲಕ್ಷ ಅರ್ಜಿದಾರರಿಂದ ಅರ್ಜಿ ಸಲ್ಲಿಕೆ ಹೊಸ ಲಿಂಕ್ ಕೊಟ್ಟಿದಾಗಿಂದ ರಾಕೆಟ್ ವೇಗದಲ್ಲಿರುವ ಸರ್ವರ್
ಹಳೆಯ ವಿದ್ಯುತ್ ಬಿಲ್ ಪಾವತಿಗೆ ಮೂರು ತಿಂಗಳ ಕಾಲಾವಕಾಶ ಸೆಪ್ಟೆಂಬರ್ ಒಳಗೆ ಹಳೆಯ ವಿದ್ಯುತ್ ಬಿಲ್ ಪಾವತಿಸಲು ಅವಕಾಶ ಬಿಲ್ನ ಅವದಿ ತಿಂಗಳ 25ರಿಂದ ಮುಂದಿನ ತಿಂಗಳ 25ದರವೆಗೆ ಪರಿಗಣನೆ ʻಗ್ರಹಜ್ಯೋತಿʼ ನೋಂದಣಿ ವಿಳಂಬ ಮಾಡದಂತೆ ಇಂದನ ಇಲಾಖೆ ಮನವಿ
ಗೃಹಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ವಾರದಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಜನರು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಸ್ಕಾಂ ಮತ್ತು ಸ್ಥಳೀಯ ಎಸ್ಕಾಂ ಕಛೇರಿಗಳಿಗೆ ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹ ಜ್ಯೋತಿಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.ಅರ್ಜಿ ಸಲ್ಲಿಕೆ ಆರಂಭವಾದ ಎಂಟು ದಿನಗಳಲ್ಲಿ 51 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.ಮೊದಲ ದಿನದಿಂದ ಇಲ್ಲಿಯವರೆಗೆ ಒಟ್ಟು 51 ಲಕ್ಷದ 17 ಸಾವಿರದ 693 ಜನರಿಂದ ಅರ್ಜಿ ಸಲ್ಲಿಕೆಯಾಗಿವೆ.
ಗೃಹ ಜ್ಯೋತಿ ನೋಂದಣಿಗೆ ಗ್ರಾಮ ಒನ್, ಕರ್ನಾಟಕ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಹಣ ವಸೂಲಿ ಮಾಡುವ ಕೇಂದ್ರಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಹೊರೆಯನ್ನು ನಾವು ಯಾರ ಮೇಲೆಯೂ ಹಾಕುತ್ತಿಲ್ಲ, ಈ ವಿಚಾರವಾಗಿ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.