ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದು. ಇನ್ನು 13 ತಿಂಗಳ ಕಾಲ ಅದೇ ರಾಶಿಯಲ್ಲಿ ಇರಲಿದ್ದಾನೆ. ಈ ನಡುವೆ ಗುರುವಿನ ಅ ನಡೆಯಲ್ಲಿ ಬದಲಾವಣೆಗಳಾಗಬಹುದು. ಗುರುವಿನ ಸಂಕ್ರಮಣವನ್ನು ವರ್ಷದ ಅತ್ಯಂತ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ. ನಿನ್ನೆಯಷ್ಟೇ ಗುರು ತನ್ನ ನಕ್ಷತ್ರವನ್ನು ಬದಲಿಸಿದ್ದಾನೆ.
Guru Transit Effect : ಸಂಪತ್ತು, ಸಮೃದ್ಧಿ, ಸಂತಾನಭಾಗ್ಯ, ವಿವಾಹ ಭಾಗ್ಯದ ಅಂಶವಾದ ಗುರುವಿನ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರ ಜಾತಕದಲ್ಲಿ ಕೋಟಿ ಗಳಿಸುವ ಯೋಗ ರೂಪುಗೊಳ್ಳಲಿದೆ.
ಜಾತಕದಲ್ಲಿ ಗುರುವು ಬಲವಾಗಿದ್ದರೆ, ಮನದ ಆಸೆ ಚಿಟಕಿಯಲ್ಲಿ ನೆರವೇರುತ್ತದೆ. ಮಾಡಿದ ಕೆಲಸ ಕೈಗೂಡುತ್ತದೆ ಎಂದು ಹೇಳಲಾಗುತ್ತದೆ. ಗುರು ದೆಸೆ ಇದ್ದಾಗ ಯಾವ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ.
ಜಾತಕದಲ್ಲಿ ಗುರುವು ಬಲವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರ ಪ್ರಯೋಜನಗಳನ್ನು ಪಡೆಯುತ್ತಾನೆ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ. ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಗುರುವು ಪ್ರತಿ ವರ್ಷ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗುರುವು 2024 ರಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.