ಬ್ರಿಸ್ಟಲ್ನ ಕೌಂಟಿ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ಆಮಿ ಜಾನ್ಸ್ ಫೀಲ್ಡಿಂಗ್ ಆಯ್ದುಕೊಂಡರು. ಭಾರತ 8 ವಿಕೆಟ್ಗೆ 122 ರನ್ ಗಳಿಸಿತ್ತು. ನಂತರ ಆಂಗ್ಲರ ತಂಡ 18.2 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವು ಸಾಧಿಸಿತು.
ICC Women World Cup 2022: ಹೋಳಿ ಹಬ್ಬದ ಒಂದು ದಿನ ನಂತರ ಮಹಿಳಾ ವಿಶ್ವಕಪ್ ಕ್ರಿಕೆಟ್ ನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಬಂದಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ, ಭಾರತ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದೆ.
ಇತ್ತೀಚಿಗೆ ಬಿಡುಗಡೆಯಾದ ಮಹಿಳಾ ಏಕದಿನ ಬ್ಯಾಟ್ಸ್ಮನ್ ಶ್ರೇಯಾಂಕದಲ್ಲಿ ಭಾರತದ ಹರ್ಮನ್ಪ್ರೀತ್ ಕೌರ್ 20 ನೇ ಸ್ಥಾನವನ್ನು ಗಳಿಸಿದರೆ, ನಾಯಕಿ ಮಿಥಾಲಿ ರಾಜ್ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ, ಈಗ ಮಹಿಳಾ ಕ್ರಿಕೆಟಿಗರಾದ ಹರ್ಮನ್ಪ್ರೀತ್ ಕೌರ್ ಅವರಿಗೂ ಕೂಡ ಕೋವಿಡ್ -19 ಪಾಸಿಟಿವ್ ಕಂಡು ಬಂದಿದೆ.
ಐಸಿಸಿ ಮಹಿಳಾ ವಿಶ್ವಕಪ್ ಟಿ-20ಯ ಫೈನಲ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಸ್ಥಾನವನ್ನು ಭದ್ರಪಡಿಸಿದೆ. ಈ ಹಿನ್ನೆಲೆಯಲ್ಲಿ ಹರ್ಮನ್ ಪ್ರೀತ್ ಕೌರ್ ತಂಡಕ್ಕೆ ಹಲವು ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
2020 ರ ಫೆಬ್ರವರಿ 21 ರಿಂದ 2020 ರ ಮಾರ್ಚ್ 8 ರವರೆಗೆ ನಡೆಯಲಿರುವ ಮುಂಬರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಟಿ 20 ವಿಶ್ವಕಪ್ನಲ್ಲಿ 15 ಸದಸ್ಯರ ಮಹಿಳಾ ತಂಡವನ್ನು ಭಾರತದ ಆಲ್ರೌಂಡರ್ ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಮತ್ತೊಂದೆಡೆ, ಭಾರತೀಯ ಓಪನರ್ ಸ್ಮೃತಿ ಮಂದಾನಾ, ಉಪನಾಯಕಿನಾಗಿ ಆಯ್ಕೆಯಾಗಿದ್ದಾರೆ.
ಆಂಟಿಗುವಾದ ನಾರ್ತ್ ಸೌಂಡ್ನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕೇವಲ 1 ರನ್ ನಿಂದ ಸೋಲನ್ನು ಅನುಭವಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.