ತೋತಾಪುರಿ ಸಿನಿಮಾ ನಿಜಕ್ಕೂ ಒಂದೊಳ್ಳೆ ಸಂದೇಶ ಸಾರೋ ಸಿನಿಮಾವಾಗಿದೆ. ಕಚಗುಳಿ ಇಡುವ ಸಂಭಾಷಣೆಯ ಜೊತೆಗೆ ಒಂದಷ್ಟು ಗಂಭೀರವಾದ ಹಾಗೂ ಇವತ್ತಿನ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಹ ಚಿತ್ರಣವಿದೆ.
ತೋತಾಪುರಿ ಸಿನಿಮಾ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿಯಿದ್ದು ಟ್ರೇಲರ್ ಮತ್ತು ಹಾಡುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಯಾವಾಗಪ್ಪ ಸಿನಿಮಾನಾ ತೆರೆಮೇಲೆ ನೋಡೋದು ಅಂತ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ನವರಸನಾಯಕ ಜಗ್ಗೇಶ್ ನಾಲ್ಕು ವರ್ಷಗಳ ನಂತರ ಮತ್ತೇ ತೋತಾಪುರಿ ಮೂಲಕ ನಿಮ್ಮನ್ನ ನಗಿಸಲು ಬರುತ್ತಿದ್ದಾರೆ.
ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ತೋತಾಪುರಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಡೇಟ್ ಅನೌನ್ಸ್ ಆಗಿರುವ ಕಾರಣ, ಅಭಿಮಾನಿಗಳು ಕುಣಿದಾಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಗಲಾಟೆಯಾಗಲು ಏಕೆ ಅವಕಾಶಕೊಡಬೇಕು ಎಂದಿದ್ದಾರೆ.
Jaggesh On Ravichandran: ಕನ್ನಡ ಚಿತ್ರರಂಗದ ಆಸ್ತಿ ನಮ್ಮ ರವಿಚಂದ್ರನ್.. ಪ್ರೀತಿಗೆ ಬ್ರಾಂಡ್ ಅಂಬಾಸಿಡರ್ ಅಂದ್ರೆ ಅದು ರವಿ ಸರ್ ಮಾತ್ರ. ಪ್ರೀತಿ ಹೇಗೆ ಮಾಡಬೇಕು ಅಂತ ತೋರಿಸಿಕೊಟ್ಟಿರೋದು ರವಿ ಮಾಮ. ಸ್ಯಾಂಡಲ್ವುಡ್ ಗೆ ಹಲವು ವಿಭಿನ್ನ ಸಿನಿಮಾಗಳನ್ನ ಕೊಡೋ ಮೂಲಕ ಜನಮನ ಗೆದ್ದ ನಟ ನಮ್ಮ ರವಿಚಂದ್ರನ್ ಎಂದು ಜಗ್ಗೇಶ್ ಹಾಡಿಹೊಗಳಿದ್ದಾರೆ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ದೈವ ಭಕ್ತರಾಗಿದ್ದರು. ಅದರಲ್ಲೂ ಮಂತ್ರಾಲಯದ ರಾಯರೆಂದರೆ ಅಪ್ಪುಗೆ ಇನ್ನಿಲ್ಲದ ಭಕ್ತಿ. ಇನ್ನು ಅಪ್ಪು ನಮ್ಮನ್ನು ಅಗಲುವ ಮುನ್ನ ರಾಯರ ದರ್ಶನವನ್ನು ಪಡೆದು ಬಂದಿದ್ದರು. ಯುವರತ್ನ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನವರಸ ನಾಯಕ ಜಗ್ಗೇಶ್ ಜೊತೆಗೂಡಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು ಬಂದಿದ್ದರು.
. ರಾಜ್ಯಸಭೆಯಲ್ಲಿ ಇಂದು ಕನ್ನಡದಲ್ಲಿಯೇ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿದ್ದ ಪೀಠದ ಸಮ್ಮುಖದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.