ಮತದಾರರನ್ನ ಸೆಳೆಯಲು ಗಣಿಧಣಿ ಹೊಸ ಗೇಮ್. ಬೋರ್ವೆಲ್ ಕೊರಿಸಿ ಮತಕ್ಕೆ ಗಾಳ ಹಾಕಿದ ರೆಡ್ಡಿ. ಜನಾರ್ದನ ರೆಡ್ಡಿಯಿಂದ ಕೊಳವೆ ಬಾವಿ ರಾಜಕೀಯ. ಬೋರ್ವೆಲ್ ಕೊರೆಸಿ ಮತ ಸೆಳೆಯಲು ರೆಡ್ಡಿ ಪ್ರಯತ್ನ. ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಿಮಿಕ್.
ಜನಾರ್ದನ ರೆಡ್ಡಿಗೆ CBI ಶಾಕ್ ಅಂತ ವರದಿ ಬರ್ತಿದೆ. ಜನಾರ್ದನ ರೆಡ್ಡಿ CBI ಶಾಕ್ಗೆ ಹೆದರೋನು ಅಲ್ಲ, ಬೆದರೋನೂ ಅಲ್ಲ. ಇನ್ನು ಮುಂದೆ ನನ್ನಿಂದಲೇ ಬಹಳ ಜನ ಶಾಕ್ ಅನುಭವಿಸ್ತಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಾನು ಮಾಡಿದ ಅಭಿವೃದ್ಧಿ ಕಾರ್ಯ ಸ್ಪೀಡ್ ನೋಡಿ ಎಲ್ಲರಿಗೂ ಗಾಬರಿಯಾಗಿದೆ ಎಂದು ಕಲಬುರಗಿ ಸೇಡಂ ಪಟ್ಟಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಸಿಎಂ ಆಸೆ ಇಟ್ಟುಕೊಂಡವರು ಮೀನಿನಂತೆ ನನಗೆ ಬಲೆ ಹಾಕಿದ್ರು. ನನ್ನ ಮೇಲೆ ಸುಳ್ಳು ಕೇಸ್ಗಳನ್ನು ಹಾಕಿ ಮೋಸ ಮಾಡಿದ್ರು ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಒಬ್ಬ ದೊಡ್ಡ ದರೋಡೆಕೋರ. ಅವನ ವಿಚಾರ ಮಾತನಾಡಕ್ಕೂ ನಾಚಿಕೆಯಾಗುತ್ತೆ ಎಂದು KJP ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ವಾಗ್ದಾಳಿಸಿದ್ದಾರೆ. ಅವನ ಹತ್ರ ಕರ್ನಾಟಕದ ಮಣ್ಣು ಲೂಟಿ ಮಾಡಿದ ದುಡ್ಡಿದೆ. ರೆಡ್ಡಿ ಬಗ್ಗೆ ಜನರಿಗೆ ಗೊತ್ತಿದೆ ಅವರೇ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಕೈ, ದಳ, ಕೇಸರಿ ಪಕ್ಷಗಳ ಅಬ್ಬರದ ನಡುವೆ ರೆಡ್ಡಿ ಶಕ್ತಿ ಪ್ರದರ್ಶನ. ಇಂದು ಹಾನಗಲ್ನಲ್ಲಿ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ. ಹಾನಗಲ್ನಲ್ಲಿ ಜನಾರ್ದನ ರೆಡ್ಡಿ ಪಕ್ಷದ ಭಾವೈಕ್ಯತಾ ಸಮಾವೇಶ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬೃಹತ್ ಯಾತ್ರೆ.
Janardhana Reddy: ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ, ಗೆಲ್ಲುವ ಕಡೆಗಳಲ್ಲಿ ಮಾತ್ರ ಹೆಜ್ಜೆ ಇಡ್ತಿದ್ದೇನೆ. ಗೆಲ್ಲುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡ್ತೀನಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಗಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನನ್ನ ಸ್ನೇಹಿತ ಶ್ರೀರಾಮುಲು ಹಾಗೂ ನನ್ನ ಸಹೋದರರನ್ನು ಪಕ್ಷದ ವಿಚಾರವಾಗಿ ನಾನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಯಾದಗಿರಿ ಹೆಡಗಿಮುದ್ರಾ ಗ್ರಾಮದಲ್ಲಿ ಜನಾರ್ದನರೆಡ್ಡಿ ಹೇಳಿಕೆ ನೀಡಿದ್ದಾರೆ.
ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಗೆ ಕಾರ್ಯಕರ್ತರಿಗೆ ಕರೆ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು ಟ್ವಿಟರ್ ಹ್ಯಾಕ್ ಮಾಡಿರಬಹುದು.. ನಾನಂತೂ ವಾಟ್ಸಾಪ್, ಫೇಸ್ಬುಕ್ ನೋಡಲ್ಲ ಅಂದಿದ್ದಾರೆ.
ಗಣಿ ಜಿಲ್ಲೆ ಬಳ್ಳಾರಿ ರಾಜಕಾರಣದಲ್ಲಿ ಚಟುವಟಿಕೆ ಗರಿಗೆದರಿದೆ. ದೋಸ್ತಿ ರಾಮುಲು ಬುಟ್ಟಿಗೆ ಜನಾರ್ದನ ರೆಡ್ಡಿ ಕೈ ಹಾಕಿದಂತಿದೆ.. ಮಾಜಿ ಸಂಸದ ಸಣ್ಣ ಫಕೀರಪ್ಪ ಜೊತೆ ಜನಾರ್ದನ ರೆಡ್ಡಿ ಎಲೆಕ್ಷನ್ ಕುರಿತು ಮಾತುಕತೆ ನಡೆಸಿದ್ದಾರೆ.
ವಿಪಕ್ಷದವರು ಕೂಡಾ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿ ಅವರೂ ಒಳ್ಳೆಯ ಮಾತನಾಡಿದ್ದಾರೆ. ಇದರ ಅರ್ಥ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಹಾಲಿ & ಮಾಜಿ ಶಾಸಕರ ಸಂಬಂಧಿಕರು, ಪುತ್ರರಿಗೆ ಆಶ್ರಯ ಆಗುತ್ತಾ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಚರ್ಚೆ ಕೂಡ ಪ್ರಾರಂಭವಾಗಿದೆ. ಜೊತೆಗೆ ಜೆಡಿಎಸ್ನಿಂದ ಅಂತರ ಕಾಯ್ದುಕೊಂಡು ಶಾಸಕರತ್ತ ಇವರು ಸಂಪರ್ಕ ಮಾಡಲಿದ್ದಾರೆಂತೆ.
ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರು ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ನೂತನ ಪಕ್ಷಕ್ಕೆ ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ ಎಂದು ಹೆಸರಿಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿ ಪಕ್ಷ ಟಕ್ಕರ್ ನೀಡಲಿದೆ. ಕೊಪ್ಪಳ, ಗದಗ, ರಾಯಚೂರು, ಬಳ್ಳಾರಿ, ಯಾದಗಿರಿ ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಈ ಪಕ್ಷ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಹೊಸ ಪಕ್ಷ ಉದಯವಾದ ಹಿನ್ನೆಲೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ಮತಗಳಿಗೆ ಹೊಡೆತ ಬಿಳುವ ಸಾಧ್ಯತೆ ಇದೆ.
Janardhana Reddy New Political Party: ಸಂಕಷ್ಟದ ದಿನಗಳಲ್ಲಿ ಕುಟುಂಬವನ್ನು ಮುನ್ನಡೆಸಿದ್ದ ಪತ್ನಿ ಲಕ್ಷ್ಮಿ ಅರುಣಾ ಈಗ ಹೊಸ ರಾಜಕೀಯ ಪಕ್ಷ ಮುನ್ನಡೆಸುವ ವಿಚಾರದಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ. ಶೀಘ್ರವೇ ಹೊಸ ಪಕ್ಷದ ಚಿಹ್ನೆ ಮತ್ತು ಬಾವುಟ ಅಂತಿಮಗೊಳಿಸಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ರಾಜಕೀಯದಿಂದ ದೂರ ಸರಿದಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತೆ ಹೊಸ ಬಾಂಬ್ ಸಿಡಿಸಿ ರಾಜಕೀಯಕ್ಕೆ ರೀ ಎಂಟ್ರಿ ಕೊಡ್ತಿದ್ದಾರೆ. ಹೊಸ ಪಕ್ಷ ಕಟ್ಟೋದಾಗಿ ಹಿಂಟ್ ನೀಡಿರುವ ರೆಡ್ಡಿ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಅನುಮಾನ ಹುಟ್ಟಿಹಾಕಿದೆ. ಇದರ ಜೊತೆಗೆ ರಾಜ್ಯದ ಎಲ್ಲಾ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರ. ಜನಾರ್ದನ ರೆಡ್ಡಿ ನನಗೆ ಸಿಕ್ಕಿದ್ರು, ಮಾತನಾಡಿದ್ದೇನೆ. ನಾವೆಲ್ಲ ಮುಖಂಡರು ಅವರೊಂದಿಗೆ ಮಾತಾಡಿದ್ದೇವೆ ಎಂದು ಕೊಪ್ಪಳದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.