Puneeth Nivasa: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ದಂತ ಕಥೆಯಾಗಿದ್ದಾರೆ. ಅವರನ್ನು, ಅವರ ಆದರ್ಶಗಳನ್ನು ನೆನಪಿಸುವ ಅನೇಕ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. 'ಪುನೀತ್ ನಿವಾಸ' ಎಂಬ ಹೆಸರಿಟ್ಟುಕೊಂಡು ಚಲನಚಿತ್ರವೊಂದನ್ನು ಪ್ರಾರಂಭಿಸಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ ಶುಭ ಹಾರೈಕೆಯೂ ಈ ಚಿತ್ರಕ್ಕಿದೆ.
Gana kannada Movie: ದೇಶದೆಲ್ಲೆಡೆ ಜನವರಿ 26 ಗಣರಾಜ್ಯೋತ್ಸವದ ಸಂಭ್ರಮ. ಇದೇ ಸಂಭ್ರಮದ ಹೊಸ್ತಿಲಲ್ಲಿ ಅಂದರೆ ಜನವರಿ 31ರಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ "ಗಣ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ.
Just Married: "ಜಸ್ಟ್ ಮ್ಯಾರೀಡ್" ತಂಡ "ಕೇಳೋ ಮಚ್ಚಾ" ಎಂಬ ಎರಡನೇ ಗೀತೆಯನ್ನು ಇಂದು ಘೋಷಿಸಿದೆ. "ಅಭಿಮಾನಿಯಾಗಿ ಹೋದೆ" ಎಂಬ ಮಾಧುರ್ಯ ಪ್ರಧಾನ ಗೀತೆಯ ನಂತರ ಇದೀಗ ಒಂದು ಪಾರ್ಟಿ ಗೀತೆಯನ್ನು ಘೋಷಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರಲ್ಲಿ ಕುತೂಹಲವನ್ನು ಸೃಷ್ಟಿಸಿದೆ. a
UI cinema: ಡಿಸೆಂಬರ್ 20ಕ್ಕೆ ರಿಲೀಸ್ ಆಗುತ್ತಿರೋ UI ಸಿನಿಮಾ ಟೈಟಲ್ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. UI ಅಂದ್ರೆ ನಾನು ನೀನು ಅಲ್ಲವೇ ಅಲ್ಲ. UI 2022ರಲ್ಲಿ ಸೆಟ್ಟೇರಿದ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಅವರ ಡ್ರೀಮ್ ಪ್ರಾಜೆಕ್ಟ್ ಅಂದ್ರೆ ತಪ್ಪಿಲ್ಲ. ಬಹಳ ಎಫರ್ಟ್ ಹಾಕಿ, ನಿದ್ದೆ ಬಿಟ್ಟು ಸಿನಿಮಾ ಮಾಡಿದ್ದಾರೆ ಉಪ್ಪಿ ಅಂಡ್ ಟೀಮ್.
Unlock Raghava: ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ "ಅನ್ ಲಾಕ್ ರಾಘವ" ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.
Actor Arjun Sarja: ಕನ್ನಡ ಸಿನಿರಂಗದ ಖ್ಯಾತ ನಟ ಅರ್ಜುನ್ ಸರ್ಜಾ ಅವರು ಬರೀ ನಟರಾಗಿ ಮಾತ್ರವಲ್ಲದೇ ರ್ದೇಶಕನಾಗಿ, ನಿರ್ಮಪಕಾರಾಗಿ, ಸ್ಕ್ರೀನ್ ರೈಟರ್, ಡಿಸ್ಟಿಬ್ಯೂಟರ್, ವಿಲನ್ ಆಗಿ, ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.. ಇದೀಗ ಅವರ ಅಪಾರ ಸಾಧನೆಗೆ ಹಿರಿಮೆಯ ಗರಿಯೊಂದು ಸೇರ್ಪಡೆಯಾಗಿದೆ..
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ಕಬ್ಜ ಸಿನಿಮಾದ ಕಮರ್ಷಿಯಲ್ ಸಾಂಗ್ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ನಿರ್ದೇಶಕ ಆರ್. ಚಂದ್ರು ತವರೂರು ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು ಕಬ್ಜ ಸಿನಿಮಾದ ಸಾಂಗ್ ಬಿಡುಗಡೆಯಾಗಲಿದೆ. ಕನ್ನಡದ ಹೆಮ್ಮೆಯ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ ಇದೆ.
ಈ ಬೆನ್ನಲ್ಲೇ ಡಿಫರೆಂಟ್ ಟೈಟಲ್ ಹಾಗೂ ಡಿಫರೆಂಟ್ ಕಥೆಯುಳ್ಳ ಸಿನಿಮಾಗಳು ನಮ್ಮ ಚಿತ್ರರಂಗದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿವೆ. ಈ ಪೈಕಿ 'ತ್ರಿಕೋನ' ಸಿನಿಮಾ ಕೂಡ ಸಾಕಷ್ಟು ಹೋಪ್ ಇಟ್ಟುಕೊಂಡು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.
ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಾರಾಂತ್ಯದಲ್ಲಿ ಕಲೆಕ್ಷನ್ ಭಾರಿ ಏರಿಕೆಯಾಗಿದೆ. ವಿಶ್ವಾದ್ಯಂತ ಮೆಚ್ಚುಗೆ ಗಳಿಸಿರುವ ಈ ಸಿನಿಮಾ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿಕೊಂಡಿದೆ.
ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ನಟ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ನೊಂದಿಗೆ ಪೈಪೋಟಿ ನೀಡಲಿದೆ. ಎರಡೂ ಸಿನಿಮಾಗಳು ಪೈಪೋಟಿಗೆ ಕಾರಣವಾಗಿದ್ದಕ್ಕೆ ಯಶ್ ಬಳಿ ಅಮೀರ್ ಕ್ಷಮೆ ಕೇಳಿದ್ದಾರೆ.
ಈಗ ರಾಜ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದ್ರೆ ಈಗ ಅವರಿಗೆ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿದೆ. ಈ ಬಾರಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರೂ ದಾಖಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.