ಬಜರಂಗದಳ ಬ್ಯಾನ್ ಮಾಡುವ ಪ್ರಣಾಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಈ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ರು. ಅಲ್ಲದೇ ಬಿಜೆಪಿ ಕಟ್ಟಿದ ನನಗೆ ಪಕ್ಷ ಮೋಸ ಮಾಡಿದೆ. ಬಿ.ಎಲ್.ಸಂತೋಷ್ ನನ್ನ ಟಿಕೆಟ್ ತಪ್ಪಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇನ್ನು ಈ ಕುರಿತು ನಮ್ಮ ಪ್ರತಿನಿಧಿ ವಿಶ್ವನಾಥ್ ಹರಿಹರ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.
ಇಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ನಮೋ ಎಂಟ್ರಿ. ಬಿಜೆಪಿ ಅಭ್ಯರ್ಥಿ ಪರ ಮತ ಬೇಟೆ ನಡೆಸಲಿರೋ ಮೋದಿ. ಜಿಲ್ಲೆಯ 5 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಪರ ಮೋದಿ ಮತಬೇಟೆ. ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗರಿಗೆದರಿದ ಚುನಾವಣಾ ಕಾವು. ನಗರದ ಸತ್ಯಂ ಶಾಲೆ ಎದುರುಗಡೆ ಮೈದಾನದಲ್ಲಿ ಬಹಿರಂಗ ಸಭೆ. ಬಹಿರಂಗ ಸಭೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ.
PM Modi In Tumkur: ತುಮಕೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರು ಮತ್ತು ಗ್ರಾಮೀಣ ಪ್ರದೇಶಗಳೆರಡೂ ದಾಖಲೆ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿವೆ’ ಎಂದು ಹೇಳಿದರು.
ಬಹುಮತದ ಸೀಟುಗಳನ್ನು ಗೆಲ್ಲುವುದೇ ನಮ್ಮ ಗುರಿ. 120 ದಾಟಿ 130 ಕ್ಷೇತ್ರಗಳವರೆಗೆ ಗೆಲ್ಲುವುದು ನಮ್ಮ ಗುರಿ. ಟ್ವಿಟರ್ ಸಂವಾದದಲ್ಲಿ ಬಿ.ಎಲ್.ಸಂತೋಷ ಹೇಳಿಕೆ. ಸಂತೋಷ, ಬಿಜೆಪಿ ರಾಷ್ಟ್ರೀಯ ಸಂಘಟನೆಯ ಪ್ರ.ಕಾರ್ಯದರ್ಶಿ. ಟ್ವಿಟರ್ ಸಂವಾದದಲ್ಲಿ BJP ಕಾರ್ಯಕರ್ತರ ಜೊತೆ ಸಂವಾದ.
ಕಲಘಟಗಿ ಅಳ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಂತೋಷ್ ಲಾಡ್ ಕಲಘಟಗಿಯ ಕಣ್ಣವಿ ಹೊನ್ನಾಪುರ, ಯರಿಕೊಪ್ಪ ಹಾಗೂ ಗ್ರಾಮಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ್ರು. ಹೀರೆ ಮಲ್ಲಿಗವಾಡ ಗ್ರಾಮದಲ್ಲಿ ಬೈಕ್ ರ್ಯಾಲಿ ಮೂಲಕ ಗ್ರಾಮಸ್ಥರು ಸ್ವಾಗತ ಮಾಡಿದರು. ಪಕ್ಷದ ನೂರಾರು ಕಾರ್ಯಕರ್ತರೂ ಲಾಡ್ಗೆ ಸಾಥ್ ನೀಡಿದರು.
ಇಂದು ಚಾಮರಾಜನಗರದ ಅಖಾಡಕ್ಕೆ ಕಿಚ್ಚ ಸುದೀಪ್ ಎಂಟ್ರಿ. ಜಿಲ್ಲೆಯ ನಾಲ್ಕೂ ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ. ನಾಯಕ ಸಮುದಾಯ, ಕಿಚ್ಚನ ಅಭಿಮಾನಿಗಳಿಗೆ ಬಿಜೆಪಿ ಗಾಳ. ಜಿಲ್ಲಾದ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸುದೀಪ್. ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರಲ್ಲಿ ಪ್ರಚಾರ
Karnataka Assembly Election: ಗುಂಡ್ಲುಪೇಟಯಲ್ಲಿ ಚುನಾವಣಾ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಎಂಟ್ರಿ ಕೊಟ್ಟ ಸುದೀಪ್, ಸಚಿವ ವಿ. ಸೋಮಣ್ಣ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜಮಾಯಿಸಿ ಕಿಚ್ಚ ಸುದೀಪ್ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಿ ತಪ್ಪು ಮಾಡಿದ್ದೇವೆ ಎಂದು ನಾಗಮಂಗಲದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ಮುಖಂಡ ಹೆಚ್. ಡಿ. ಕುಮಾರಸ್ವಾಮಿ, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎಂಬುದನ್ನೂ ಸ್ವತ ಸಿದ್ಧರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಈಗಲಾದರೂ ಸತ್ಯ ಹೊರಬಂದಿದೆ ಎಂದು ವ್ಯಂಗ್ಯ ವಾಡಿದರು.
Karnataka Assembly Election: ಭಾನುವಾರ ನೀಟ್ ಪರೀಕ್ಷೆಯ ನಡುವೆಯೂ ಪ್ರಧಾನಿ ಮೋದಿ ರೋಡ್ ಶೋ ವಿಚಾರದ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರಿಂದ ಬರುತ್ತಿರುವ ಟೀಕೆಗಳ ಬಗ್ಗೆ ನನಗೆ ಮಾಹಿತಿ ಇದೆ. ರೋಡ್ ಶೋ ಗಳಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು - ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
Karnataka Assembly Election: ಶಿವಣ್ಣ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಗುಮಾನಿಗಳಿಗೆ ಬ್ರೇಕ್ ಹಾಕಿರುವ ಶಿವಣ್ಣ ತಾನು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇದೆಲ್ಲದರ ನಡುವೆ ಡಾ. ರಾಜ್ ಕುಮಾರ್ ಅವರ ಪುತ್ರ, ಕನ್ನಡದ ಕಣ್ಮಣಿ, ಕರುನಾಡಿನ ನಲ್ಮೆಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರ ಸಹೋದರ ಡಾ. ಶಿವರಾಜ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರ ಬಗ್ಗೆ ಅಭಿಮಾನಿಯೊಬ್ಬರು ಮಾಡಿರುವ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕೋಲಾರ ಕುರುಕ್ಷೇತ್ರ
ಚಿನ್ನದ ನಾಡು ಕೋಲಾರಿನಲ್ಲಿ ಆರು ಕ್ಷೇತ್ರಗಳಿದ್ದು, ಅದರಲ್ಲಿ ಶ್ರೀನಿವಾಸಪುರ,ಮುಳಬಾಗಿಲು ಮತ್ತು ಕೋಲಾರ ಹೈವೋಲ್ಟ್ ಕ್ಷೇತ್ರಗಳಾಗಿದ್ದರೆ, ಕೆಜಿಎಫ್ ಮಾಲೂರು ಮತ್ತು ಬಂಗಾರ ಪೇಟೆ ಕ್ಷೇತ್ರಗಳೂ ಕೂಡ ಸಾಕಷ್ಟು ಕುತೂಹಲ ಕೆರಳಿಸಿವೆ. ಅದರಲ್ಲಿ ಬಂಗಾರಪೇಟೆಯ SC ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರದ್ದೇ ಮೇಲುಗೈ ಇದ್ದರೆ, ಮುಸ್ಲಿಂ ಬಾಹುಳ್ಯದ ಕೋಲಾರ ಕ್ಷೇತ್ರದಲ್ಲಿ ಯಾವುದೇ ಮುಸ್ಲಿಂ ಪ್ರಾತಿನಿಧ್ಯ ಇಲ್ಲ,ಇನ್ನೂ ಮಾಲೂರು ಕ್ಷೇತ್ರದಲ್ಲಿ ನಾಲ್ವರಲ್ಲಿ ಯಾರು ಗೆಲ್ಲಬಹುದು ಎಂದು ಹೇಳುವುದು ಈಗಲೇ ಕಷ್ಟ ಸಾಧ್ಯ ಇನ್ನೂ ಶ್ರೀನಿವಾಸಪುರದಲ್ಲಿ ರೆಡ್ಡಿ v/s ಸ್ವಾಮಿ ಕದನವಂತೂ ಚುನಾವಣೆಯನ್ನು ಕಾವೇರುವಂತೆ ಮಾಡಿದೆ.
ಕೋಲಾರ ಜಿಲ್ಲಾ ಕುರುಕ್ಷೇತ್ರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.