ನಟ ಧ್ರುವ ಸರ್ಜಾ ಕೂಡಾ ಚುನಾವಣಾ ಪ್ರಚಾರ ಅಖಾಡಕ್ಕಿಳಿಯಲಿದ್ದಾರೆ.. ಇದೇ ತಿಂಗಳ 28ರಿಂದ0ಸ್ನೇಹಿತರ ಪರ ಧ್ರುವ ಸರ್ಜಾ ಮತಬೇಟೆ ನಡೆಸಲಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಕ್ಯಾಂಪೇನ್ ಮಾಡಲಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕ್ಷಮೆ ಕೇಳಿಲ್ಲ. ನಾವು ಕೇಳು ಅಂತ ಕೂಡ ಹೇಳಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಮ್ಮ ಗುರಿ ಒಂದೇ ಚುನಾವಣೆ ಗೆಲ್ಲಬೇಕು. ಶೆಟ್ಟರ್ ಕ್ಷಮೆಯ ಪ್ರಮೇಯವೇ ಬಂದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಜಗಳೂರಿನಲ್ಲಿ ರಾಮಚಂದ್ರ ಗೆದ್ದೇ ಗೆಲ್ತಾರೆ ಎಂದು ಜಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.. 140 ಸೀಟು ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ 65 ರಿಂದ 70 ಸ್ಥಾನ ದಾಟೋದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ..
ಕರ್ನಾಟಕ ಚುನಾವಣೆ 2023, ಕರ್ನಾಟಕ ಚುನಾವಣೆ ವಿಡಿಯೋ 2023, ದಾವಣಗೆರೆ ಜಗಳೂರಿನಲ್ಲಿ ರಾಜಾಹುಲಿ BSY ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ SV ರಾಮಚಂದ್ರ BSY ಪರ ಪ್ರಚಾರ ನಡೆಸಿದ್ದಾರೆ. ಜಗಳೂರು ಪಟ್ಟಣದ ಗಾಂಧಿ ಸರ್ಕಲ್ನಿಂದ ರೋಡ್ ಶೋ ಮಾಡಿದ್ದಾರೆ..
ತೇರದಾಳ ಕ್ಷೇತ್ರದಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.. ರಬಕವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಪ್ರಚಾರ ನಡೆಸಿದ್ದು ಈ ವೇಳೆ ʻಲಿಂಗಾಯತʼ ಅಸ್ತ್ರ ಪ್ರಯೋಗಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.