Nepal Political Crisis - ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಇಂದು ನೇಪಾಳ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಎರಡು ದಿನಗಳಲ್ಲಿ ಶೇರ್ ಬಹದ್ದೂರ್ ದೆವುಬಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡುವಂತೆ ನೇಪಾಳ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನೇಪಾಳ ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿರುವ ಸಿಪಿಎನ್-ಯುಎಂಎಲ್ ನೇತಾರರಾಗಿರುವ ಕೆಪಿ ಶರ್ಮಾ ಓಲಿಯವರನ್ನು ಪ್ರಧಾನ ಮಂತ್ರಿಯಾಗಿ ಮತ್ತೆ ನಿಯುಕ್ತಿ ಮಾಡುತ್ತಿರುವುದಾಗಿ ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಹೇಳಿಕೆ ಹೊರಡಿಸಿದ್ದಾರೆ.
Nepal PM KP Sharma Oli Removed From His Party - ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ ಮತ್ತು ಕಮ್ಯುನಿಸ್ಟ್ ಪಕ್ಷವು ಎರಡು ತುಂಡುಗಳಾಗಿ ವಿಭಜನೆಯಾಗುತ್ತಿದೆ ಎಂಬ ಊಹಾಪೋಹಗಳ ನಡುವೆ, ಎದುರಾಳಿ ಬಣವು ಹಂಗಾಮಿ ಪ್ರಧಾನಿ ಕೆ.ಪಿ.ಶರ್ಮಾ ಒಲಿಯನ್ನು ಉಚ್ಚಾಟಿಸಿರುವುದಾಗಿ ಘೋಷಿಸಿದೆ.
ಭಾರತೀಯರ ಹಿಂದೂ ಆರಾಧ್ಯ ದೈವ ಶ್ರೀರಾಮನ ಕುರಿತು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಇದೀಗ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರುತ್ತಿದ್ದು, ವಿವಾದ ಶಮನಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಪ್ರಧಾನಿ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಲಿ, ಭಾರತವು 'ನಕಲಿ ಅಯೋಧ್ಯೆಯನ್ನು' ನಿರ್ಮಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳನ್ನು ಅತಿಕ್ರಮಿಸಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಳೆದ ವಾರ ಭಾರತಕ್ಕೆ ಹೆಚ್ಚುತ್ತಿರುವ ತೊಂದರೆಗಳಿಗೆ ದೂಷಿಸಿದ್ದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಮಂಗಳವಾರ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರ ತೀವ್ರ ದಾಳಿಯನ್ನು ಎದುರಿಸಿದ್ದು, ಪ್ರಧಾನಿ ತಕ್ಷಣವೇ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
ನೇಪಾಳದ ಸಂಸತ್ತು ತನ್ನ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತೆರವುಗೊಳಿಸಿದೆ, ಆ ಮೂಲಕ ಇದು ಕಾಠ್ಮಂಡು ಮತ್ತು ನವದೆಹಲಿ ನಡುವಿನ ಸಂಬಂಧಗಳಲ್ಲಿ ಶಾಶ್ವತ ಬಿಕ್ಕಟ್ಟನ್ನು ಸೃಷ್ಟಿಸಿದೆ.
ನೇಪಾಳದ ನಕ್ಷೆಯನ್ನು ಬದಲಾಯಿಸಲು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಮುಂದಿಟ್ಟಿರುವ ಸಾಂವಿಧಾನಿಕ ತಿದ್ದುಪಡಿಯನ್ನು ತಡೆಹಿಡಿಯಲಾಗಿದೆ ಎಂದು ಈ ಬೆಳವಣಿಗೆಗೆ ಸಂಬಂಧಿಸಿದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.