Virat Kohli Retirement: ಯಾವುದೇ ಕ್ರೀಡೆಯಾಗಿರಲಿ, ಆಟಗಾರರಿಗೆ ಫಿಟ್ನೆಸ್ ಬಹಳ ಮುಖ್ಯ. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಫಿಟ್ ಆಗಿ ಕಾಣುವ ಆಟಗಾರರಲ್ಲಿ ಒಬ್ಬರು. ಈ ಸ್ಟಾರ್ ಆಟಗಾರ ಡಯಟ್ ಮತ್ತು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಎಷ್ಟೇ ಫಿಟ್ ಆಗಿದ್ದರೂ ಯಾವುದೇ ಕ್ರಿಕೆಟಿಗನಿಗೆ ನಿವೃತ್ತಿ ಅನಿವಾರ್ಯ.
ICC T20 World Cup: ಸೆಮಿಫೈನಲ್ ತಲುಪುವ ತಂಡಗಳ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ. ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಅವರು ಭಾರತ ಮತ್ತು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದಿರುವುದು ಇಲ್ಲಿ ವಿಶೇಷ.
Michael Vaughan Statement: ಮೊದಲ ಇನ್ನಿಂಗ್ಸ್’ನಲ್ಲಿ 190 ರನ್’ಗಳ ಪ್ರಬಲ ಮುನ್ನಡೆ ಸಾಧಿಸಿದ್ದರೂ, ಕೊಹ್ಲಿ ಇಲ್ಲದೆ ಆಡುತ್ತಿರುವ ಭಾರತ, ಸ್ಪಿನ್ ಸ್ನೇಹಿ ಪರಿಸ್ಥಿತಿಯಲ್ಲಿ 28 ರನ್’ಗಳ ಸೋಲನ್ನು ಎದುರಿಸಬೇಕಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇದು ಹೈದರಾಬಾದ್’ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಸೋಲು.
michael vaughan : ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾಘನ್ ಅವರು ಭಾರತ ತಂಡದ ಸಾಧನೆ ಬಗ್ಗೆ ಅಭಿಪ್ರಾಯ ತಿಳಿಸಿದ್ಧಾರೆ. ಪಾಕ್ ಮತ್ತು ಆಸಿಸ್ ಟೆಸ್ಟ್ ಪಂದ್ಯದ ವೇಳೆ ಮಾತನಾಡಿದ ಅವರು, ಭಾರತು ಕಳೆದ ಕೆಲವು ವರ್ಷಗಳಿಂದ ಏನ್ನು ಸಾಧಿಸಲ್ಲ, ಹಾಗೂ ಅವರಲ್ಲಿರುವ ಕೌಶಲ್ಯಗಳಿಗೆ ಅವರು ಹೆಚ್ಚಿನದನ್ನೇ ಸಾಧಿಸ ಬೇಕು ಎಂದರು.
Hardik Pandya vs Michael Vaughan: ಟೀಂ ಇಂಡಿಯಾವನ್ನು ತೆಗಳುವ ಸಂದರ್ಭದಲ್ಲಿ, “ನಾನು ಭಾರತೀಯ ಕ್ರಿಕೆಟ್ ಅನ್ನು ನಡೆಸುತ್ತಿದ್ದರೆ, ನನ್ನ ಹೆಮ್ಮೆಯನ್ನು ಬಿಟ್ಟು ಇಂಗ್ಲೆಂಡ್ ತಂಡದಿಂದ ಕಲಿಯಲು ಪ್ರಯತ್ನಿಸುತ್ತೇನೆ” ಎಂದು ಮೈಕೆಲ್ ವಾನ್ ಹೇಳಿದ್ದರು. “ಹೆಮ್ಮೆ ಬಿಟ್ಟು ಐಸಿಸಿ ಟೂರ್ನಿಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ಇಂಗ್ಲೆಂಡ್ನಿಂದ ಬಿಸಿಸಿಐ ಕಲಿಯಬೇಕು” ಎಂದು ಮೈಕಲ್ ವಾನ್ ಹೇಳಿದ್ದರು. ಇದೀಗ ಮೈಕಲ್ ವಾನ್ ಅವರ ಈ ಕಾಮೆಂಟ್ ಗೆ ಹಾರ್ದಿಕ್ ಪಾಂಡ್ಯ ತಕ್ಕ ಉತ್ತರ ನೀಡಿದ್ದಾರೆ.
ಮೊದಲ ಋತುವಿನಲ್ಲಿಯೇ ಗುಜರಾತ್ ಟೈಟಾನ್ಸ ತಂಡಕ್ಕೆ ಐಪಿಎಲ್ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯ ಬಗ್ಗೆ ಈಗ ಮೆಚ್ಚುಗೆಯ ಸುರಿಮಳೆಗಳೇ ಹರಿದು ಬರುತ್ತಿವೆ, ಹೌದು ಈಗ ಮಾಜಿ ಕ್ರಿಕೆಟ್ ಆಟಗಾರರು ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ.
DRS ವಿಷಯವಾಗಿ ವಿರಾಟ್ ಕೊಹ್ಲಿ ನಡೆದುಕೊಂಡಿರುವ ರೀತಿಗೆ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದು, ಮುಂದೆ ಈ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಅಂತಾ ಸಲಹೆ ನೀಡಿದ್ದಾರೆ.
ಶುಕ್ರವಾರದಂದು ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾವು ಭಾರತವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ.
ಇಂಗ್ಲೆಂಡ್ನ ಮಾಜಿ ನಾಯಕ ಮೈಕೆಲ್ ವಾನ್ ಅವರು ಇಲ್ಲಿ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶವಿಲ್ಲ, ಆದರೆ ಸೆಪ್ಟೆಂಬರ್ನಲ್ಲಿ ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ನಲ್ಲಿ ಆಟಗಾರರು ವೈಯಕ್ತಿಕವಾಗಿ ಕೆಲವು ಸಕಾರಾತ್ಮಕ ಅಂಶಗಳನ್ನು ಪಂದ್ಯದ ಮೂಲಕ ಪಡೆಯಬಹುದು ಎಂದು ಹೇಳಿದರು.
ಮೈಕೆಲ್ ವಾಘನ್ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಜೀನಿಯಸ್ ಕ್ಯಾಪ್ಟನ್ ಯಾರೆಂದು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಮತ್ತು ಅದರ ಆಟಗಾರರ ವಿರುದ್ಧದ ತೀಕ್ಷ್ಣವಾದ ಟೀಕೆಗಳಿಗೆ ಮೈಕೆಲ್ ವಾಘನ್ ಆಗಾಗ ಹೆಸರುವಾಸಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಮತ್ತೊಂದು ಸಂಗತಿ ಬಗ್ಗೆ ಮಾತನಾಡಿದ್ದಾರೆ.
ಅಬುಧಾಬಿಯಲ್ಲಿ ಸೋಮವಾರ ನಡೆದ ಐಪಿಎಲ್ 2020 ರಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಗೆ ಅರ್ಹತೆ ಪಡೆಯಿತು.
ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ 242 ರನ್ ಗಳಿಸಿತು, ಕಡ್ಡಾಯವಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪ್ರಭಾವಶಾಲಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಲು ಭಾರತ ತಂಡ ವಿಫಲವಾಗಿದೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ, ನಂಬರ್ ಒನ್ ಶ್ರೇಯಾಂಕಿತ ಭಾರತೀಯ ಟೆಸ್ಟ್ ತಂಡವು ನ್ಯೂಜಿಲೆಂಡ್ನಲ್ಲಿ ಎರಡು ಟೆಸ್ಟ್ ಸರಣಿಯನ್ನು 0-1 ಅಂತರದಲ್ಲಿ ಹಿಂದುಳಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.