ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಆಗಲಿದೆ. ಪ್ರತೀ ಲೀಟರ್ ಹಾಲು ಮೊಸರಿಗೆ ಎರಡು ರೂಪಾಯಿ ಹೆಚ್ಚಿಸಿ ಕೆಎಂಎಫ್ ಆದೇಶ ಹೊರಡಿಸಿದೆ. ಸಾಕಷ್ಟು ಚರ್ಚೆ ಬಳಿಕ ಕೆಎಂಎಫ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಈ ಹಿಂದೆ 3 ರುಪಾಯಿ ಹೆಚ್ಚಳ ಮಾಡಿದ್ದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ನಂದಿನಿ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ನಿನ್ನೆ ಸಂಜೆ ಮತ್ತೆ ಪರಿಷ್ಕರಿಸಲಾಗಿದೆ. ಈ ಎಲ್ಲ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ ₹1.50ರಷ್ಟು ಕಡಿಮೆ ಮಾಡಲಾಗಿದೆ. ಭಾನುವಾರ ಈ ಉತ್ಪನ್ನಗಳ ದರಗಳನ್ನು ₹1ರಿಂದ ₹3ರಷ್ಟು ಹೆಚ್ಚಿಸಲಾಗಿತ್ತು. ಗ್ರಾಹಕರಿಂದ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್ ಈ ಕ್ರಮ ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.