Interesting Facts About China: ಚೀನಾ (China)ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಈ ದೇಶದ ಪದ್ಧತಿಗಳಿಂದ ಹಿಡಿದು ಅನೇಕ ನಿಯಮಗಳು ಮತ್ತು ನಿಬಂಧನೆಗಳು ಸಹ ಇತರ ದೇಶಗಳಿಗಿಂತ ಭಿನ್ನವಾಗಿವೆ.
ಚೀನಾ ಇನ್ನೂ ಕೂಡ ತನ್ನ ಚಟ ಬಿಟ್ಟಿಲ್ಲ. ಇದೀಗ LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ಚೀನಾ ಭಾರತದ ವಿಚಕ್ಷಣೆಗಾಗಿ ಡ್ರೋನ್ಗಳನ್ನು ಬಳಸುತ್ತಿದೆ. ಗಡಿ ವಿವಾದದ ನಂತರ ಚೀನಾ ತನ್ನ ಯಾವುದೇ ಸೈನ್ಯವನ್ನು ಎಲ್ಎಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿಲ್ಲ ಎಂಬುದೂ ಮುಂಚೂಣಿಗೆ ಬಂದಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಭಾರತೀಯ ಸೈನಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವುದರ ಮೂಲಕ ಮತ್ತು ಎಲ್ಎಸಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಒಟ್ಟುಗೂಡಿಸಿ ಲಡಾಖ್ ದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಭಾರತದ ಜೊತೆಗೆ ಚೀನಾ ಗಡಿ ವಿವಾದದಲ್ಲಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಯುದ್ಧಕ್ಕೆ ಸಿದ್ದರಾಗಿ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಕೇಳಿಕೊಂಡಿದ್ದಾರೆ ಎಂದು ಬುಧವಾರ ವರದಿಗಳು ತಿಳಿಸಿವೆ.
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಎಲ್ಎಸಿ ಬಳಿ ಪರಿಸ್ಥಿತಿಯನ್ನು ಉದ್ವಿಗ್ನತೆಯನ್ನು ಕಡಿತಗೊಳಿಸುವ ಸ್ಥಿತಿಯಲ್ಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಇದು ಪೂರ್ವ ಲಡಾಕ್ ವಲಯದಲ್ಲಿ ಸುಮಾರು 40,000 ಸೈನಿಕರನ್ನು ನಿಯೋಜಿಸುವುದನ್ನು ಮುಂದುವರೆಸಿದೆ.
ಗಲ್ವಾನ್ ಕಣಿವೆಯಲ್ಲಿ ತನ್ನ ಆಕ್ರಮಣಶೀಲ ಹಾಗೂ ಮೊಂಡು ಪ್ರವೃತ್ತಿಯನ್ನು ಮೆರೆಯುವ ಮೂಲಕ ಭಾರತದ ಭೂಮಿಯನ್ನು ಕಬಳಿಸಲು ಕುತಂತ್ರ ನಡೆಸಿದ್ದ ಡ್ರ್ಯಾಗನ್, ಭಾರತ ನೀಡಿರುವ ತಕ್ಕ ಉತ್ತರ ಮತ್ತು ಅಂತಾರಾಷ್ಟ್ರೀಯ ಒತ್ತಡ ಮುಂದೆ ಕೊನೆಗೂ ಮಂಡಿಯೂರಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.