Khalistani Leader Amrit Pal Singh: ಅಮೃತಸರ ಜಿಲ್ಲೆಯ ಜಲ್ಲುಪುರ್ ಖೈರಾ ಗ್ರಾಮದಲ್ಲಿ ವಾಸವಾಗಿದ್ದ ಅಮೃತ್ ಪಾಲ್, ಕಳೆದ ತಿಂಗಳು ತನ್ನ ಹೇಳಿಕೆಯೊಂದರಲ್ಲಿ ಸಿಖ್ಖರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮುಂದುವರಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಬಂದ ಪರಿಸ್ಥಿತಿಯೇ ಬರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದ!
ಪ್ರಧಾನಿ ಮೋದಿಯವರ ಭದ್ರತೆಗೆ ಸಂಬಂಧಿಸಿದಂತೆ ಈ ಸಂಪೂರ್ಣ ನಿರ್ಲಕ್ಷ್ಯ ಪ್ರಕರಣದಲ್ಲಿ ಪಂಜಾಬ್ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಮೇ 29 ರಂದು ಸಿಧು ಮೂಸೆವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಧು ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಸ್ವಂತ ಕಾರಿನಲ್ಲಿ ಚಿಕ್ಕಮ್ಮನನ್ನು ಭೇಟಿಯಾಗಲು ಹೋಗುತ್ತಿದ್ದಾಗ, ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಶೂಟರ್ಗಳು ದಾಳಿ ನಡೆಸಿ ಮುಸೇವಾಲಾ ಅವರ ವಾಹನದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಪಂಜಾಬ್ ಪೊಲೀಸ್ ನ ಹೆಡ್ ಕಾನ್ಸ್ ಟೇಬಲ್ ಒಬ್ಬರು, ಮೊಟ್ಟೆಯ ಟ್ರೇಯಿಂದ ಒಂದೊಂದೇ ಮೊಟ್ಟೆಯನ್ನು ಜೇಬಿಗೆ ಇಳಿಸುತ್ತಿದ್ದರು. ಈ ಪೊಲೀಸಪ್ಪನನ್ನು ಪ್ರೀತ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ರಾಜ್ಯವ್ಯಾಪಿ ಸಹಾಯ ಸಂಖ್ಯೆ 100, 112 ಮತ್ತು 181 ಅನ್ನು ಡಯಲ್ ಮಾಡುವ ಮೂಲಕ ಈ ಸೇವೆಯನ್ನು ಬಳಸಬಹುದು. ಈ ಸಂಖ್ಯೆಗಳಿಗೆ ಡಯಲ್ ಮಾಡಿದರೆ ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಸಂಪರ್ಕ ಹೊಂದುತ್ತಾರೆ.
ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಎಂ) ಗೆ ಸೇರಿದ ಕನಿಷ್ಠ ಅರ್ಧ ಡಜನ್ ಭಯೋತ್ಪಾದಕರು ಫಿರೋಜ್ಪುರ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಪ್ರವೇಶಿಸಿದ್ದಾರೆ. ಈಗ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಪಂಜಾಬ್ ಪೊಲೀಸರ ಗುಪ್ತಚರ ಇಲಾಖೆ ತಿಳಿಸಿದೆ ಎಂದು ಐಎಏನ್ಎಸ ವರದಿ ಮಾಡಿದೆ.
ದೆಹಲಿಯ ಒಂದು ಮೆಟ್ರೋ ನಿಲ್ದಾಣದ ಸಮೀಪದಲ್ಲಿ ಪೋಲೀಸರು ಮತ್ತು ದುಷ್ಕರ್ಮಿಗಳ ನಡುವೆ ಶೂಟ್ ಔಟ್ ನಡೆದಿದ್ದು. ಆ ಪ್ರಕರಣವು ನೈಋತ್ಯ ದೆಹಲಿಯ ದ್ವಾರಕಾ ಮಾಡ್ ಬಳಿ ನಡೆದಿದೆ. ದೆಹಲಿ ಪೊಲೀಸ್ ಮತ್ತು ಪಂಜಾಬ್ ಪೋಲಿಸ್ ಜಂಟಿ ತಂಡದ ಕಾರ್ಯಾಚರಣೆಯ ಸಮಯದಲ್ಲಿ 30 ಸುತ್ತುಗಳ ಗುಂಡಿನ ದಾಳಿ ಸಂಭವಿಸಿವೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.