ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ನಟರು, ನಿರ್ದೇಶಕರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಕ್ರೀಡಾಪಟುಗಳು, ಅನೇಕ ತಲೈವಾ ಅಭಿಮಾನಿಗಳು ಅವರ ಬರ್ತ್ ಡೇಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಸೂಪರ್ ಸ್ಟಾರ್, ನಟ ರಜನಿಕಾಂತ್ ಅವರು ತಮ್ಮ ಫೋಟೋ, ವ್ಯಕ್ತಿತ್ವ, ಹೆಸರು, ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬ್ರ್ಯಾಂಡ್ ಮತ್ತು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಸೂಪರ್ಸ್ಟಾರ್ಗಳಲ್ಲಿ ರಜಿನಿ ಒಬ್ಬರು. ಪಾಪ್ ಸಂಸ್ಕೃತಿಯ ಐಕಾನ್ ಆಗಿ ಅವರ ಹೋಲಿಕೆಯನ್ನು ಅನೇಕ ಬ್ರ್ಯಾಂಡ್ಗಳು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡ ರಜನಿಕಾಂತ್ ಅವರ ಕಾನೂನು ತಂಡವು ಇನ್ನು ಮುಂದೆ ಈ ರೀತಿ ಮಾಡದಂತೆ ಬ್ರ್ಯಾಂಡ್ಗಳಿಗೆ ಸೂಚನೆ ರವಾನಿಸಿದೆ.
ರಜನಿಕಾಂತ್ ದಶಕಗಳಿಂದ ಸಿನಿಮಾರಂಗವನ್ನು ಆಳುತ್ತಾ ಬಂದಿದ್ದಾರೆ. ಇನ್ನು ತಮಿಳು ಸಿನಿಮಾರಂಗದ ಇತಿಹಾಸದಲ್ಲಿ ನಟ ರಜನಿಕಾಂತ್ ಒಂದು ದಂತಕತೆ. ಸಲ್ಮಾನ್ ಖಾನ್ 125, ಶಾರುಕ್ ಖಾನ್ 100, ಅಕ್ಷಯ್ ಕುಮಾರ್ 135 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ನಟ ರಜನಿಕಾಂತ್ ತಮ್ಮ 169ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.