Bangladesh Violence: ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳ ಕೋಟಾ ಪದ್ದತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು 14ಮಂದಿ ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ.
ಬೇಲೂರು, ಸಕಲೇಶಪುರದಲ್ಲಿ ದಾಂದಲೆ ನಡೆಸಿದ್ದ 30 ಕಾಡಾನೆಗಳ ತಂಡ ಸದ್ಯ ಬೀಟಮ್ಮ ಗ್ಯಾಂಗ್ ಎಂತಲೇ ಪ್ರಸಿದ್ದಿಯಾಗಿದ್ದು, ಇದೀಗ ಈ ಗ್ಯಾಂಗ್ ಚಿಕ್ಕಮಗಳೂರು ನಗರ ಸಮೀಪದ ಅಂಬರ್ ವ್ಯಾಲಿ ಶಾಲೆಯ ಆವರಣಲ್ಲಿ ಬೀಡುಬಿಟ್ಟಿವೆ. ಈ ತಂಡದಲ್ಲಿ ನರಹಂತಕ ಒಂಟಿ ಸಲಗ ಭೀಮ ಕೂಡ ಇರುವುದು ಆತಂಕ ಹೆಚ್ಚಿಸಿದೆ.
ಎನ್ಐಟಿಕೆ ಬಳಿಯ ಟೋಲ್ ಗೇಟ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟಣೆ ವತಿಯಿಂದ ಇಂದಿನಿಂದ ಟೋಲ್ ಗೇಟ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಇದ್ದು, ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ, ಸಾರ್ವಜನಿಕರ ಸುರಕ್ಷತೆ ಕಾಪಾಡುವ ಮತ್ತು ಟೋಲ್ ಗೇಟ್ನ ಭದ್ರತೆಯ ಹಿತದೃಷ್ಠಿಯಿಂದ ಸೆಕ್ಷನ್ ಜಾರಿ ಮಾಡಲಾಗಿದೆ.
ಮುಂಬೈ ಪೊಲೀಸರು ನವೆಂಬರ್ 1 ರಿಂದ 15 ರವರೆಗೆ ನಾದರೆ 15 ದಿನಗಳವರೆಗೆ ನಗರದಾದ್ಯಂತ ಸೆಕ್ಷನ್ 144 (ನಿರ್ದಿಷ್ಟ ನ್ಯಾಯವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಆದೇಶ) ವಿಧಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಆಗಸ್ಟ್ 5ರವರೆಗೂ ನಿಷೇಧಾಜ್ಞೆ ವಿಸ್ತರಣೆ ಆಗಿದೆ. ಬೆಳ್ಳಾರೆ ಮತ್ತು ಮಂಗಳಪೇಟೆಯಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆ ಸಂಜೆ 6ಯಿಂದ ಮುಂಜಾನೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಆಗಸ್ಟ್ 5ರವರೆಗೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಾತ್ರಿ ನಿಷೇಧಾಜ್ಞೆ ಮುಂದುವರಿಯಲಿದೆ.
ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ‘ಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. #ಸರ್ವ_ಜನಾಂಗದ_ಶಾಂತಿಯ_ತೋಟ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ, ‘ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ಬಿಜೆಪಿ ಸರ್ಕಾರ ಮೈಮರೆತಿದ್ದು ಯಾಕೆ?’ ಎಂದು ಪ್ರಶ್ನಿಸಿದೆ.
Section 144 in the Mumbai: ಈ ಆದೇಶವು 2021 ರ ಡಿಸೆಂಬರ್ 30 ರಿಂದ ಗ್ರೇಟರ್ ಮುಂಬೈನ ಪೊಲೀಸ್ ಆಯುಕ್ತರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. 7 ಜನವರಿ 2022 ರ ವರೆಗೆ ಜಾರಿಯಲ್ಲಿರುತ್ತದೆ.
ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದೇಶದ ಕೆಲವು ರಾಜ್ಯಗಳಲ್ಲಿ ಕರೋನಾವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ರಾಜ್ಯಗಳಲ್ಲಿ ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಮತ್ತು ಕೇರಳ ಮುಂಚೂಣಿಯಲ್ಲಿವೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 39 ಸಾವಿರಕ್ಕೂ ಹೆಚ್ಚು ಕರೋನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ.
New Year Celebration: ಹೊಸ ವರ್ಷದ ಸಂಭ್ರಮಾಚರಣೆಯ ಮೊದಲು ಮುಂಬೈ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಬೆಳಿಗ್ಗೆ 11 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಬೈ ಮತ್ತು ಪುಣೆಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
New Year's Eve Party: ಕರೋನಾ ಅವಧಿಯಲ್ಲಿ ದೇಶದ ರಾಜಧಾನಿಯಲ್ಲಿ ಹೊಸ ವರ್ಷ ಆಚರಣೆಯ ಉತ್ಸಾಹ ಕಳೆಗುಂದುವ ಸಾಧ್ಯತೆ ಇದೆ. ಏಕೆಂದರೆ ದೆಹಲಿ ಪೊಲೀಸರು ಹೊಸ ವರ್ಷದ ಆಚರಣೆಗೆ ಹೊಸ ನಿಯಮಗಳನ್ನು ಘೋಷಿಸಿದ್ದಾರೆ ಮತ್ತು ನಿಯಮಗಳನ್ನು ಅನುಸರಿಸಲು ವಿಶೇಷ ಸಿದ್ಧತೆಗಳನ್ನು ಸಹ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.