ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ 26 ರನ್ಗಳಿಂದ ಹೀನಾಯ ಸೋಲು ಕಂಡಿದೆ.
ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದಿದ್ದು, ಭಾರತ 7 ವಿಕೆಟ್ಗಳ ಜಯ ಸಾಧಿಸಿದೆ. ಎರಡನೇ ಟಿ20ಯಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆಯುವ ಸಂಕಲ್ಪ ತೊಟ್ಟಿದ್ದಾರೆ.
ಜನವರಿ 22, ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ T20 ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಇಂದಿನ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
India vs south africa: ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ನಾಲ್ಕು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ವಿಧ್ವಂಸಕ ಶತಕಗಳನ್ನು ಬಾರಿಸಿ ದಕ್ಷಿಣ ಆಫ್ರಿಕಾವನ್ನು 135 ರನ್ಗಳ ಬೃಹತ್ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡ ನಾಲ್ಕು ಟಿ20 ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ಗ್ವಾಲಿಯಾರ್ನ ಮಾಧವ್ರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲಿ ಮಿಂಚಿನ ಆಟವಾಡಿ ಪ್ರವಾಸಿಗರ ಮೇಲೆ ಸವಾರಿ ನಡೆಸಿದ ಭಾರತದ ಟಿ20 ಕ್ರಿಕೆಟ್ ತಂಡ 7 ವಿಕೆಟ್ಗಳ ಭರ್ಜರಿ ಜಯ ದಕ್ಕಿಸಿಕೊಂಡಿತು.
India vs Bangladesh T20I Series: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ-20 ಸರಣಿಗೆ ಬಿಸಿಸಿಐ ಶೀಘ್ರದಲ್ಲೇ ಟೀಂ ಇಂಡಿಯಾವನ್ನು ಪ್ರಕಟಿಸಬಹುದು. ಈ ಬಾರಿ ಅದರಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು.
IND vs SL: ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ.
Scott Styris: ನಾಯಕ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಪರಿಗಣಿಸುವುದು ತಪ್ಪು ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರೀಸ್ ಹೇಳಿದ್ದಾರೆ. ಹೆಚ್ಚುವರಿ ಬೌಲಿಂಗ್ ಆಯ್ಕೆಗಳಾಗಿ ಅರೆಕಾಲಿಕ ಬೌಲರ್ಗಳಿಗಿಂತ ಆಲ್ರೌಂಡರ್ಗಳನ್ನು ಪ್ರಯತ್ನಿಸಲು ಸ್ಕಾಟ್ ಸ್ಟೈರೀಸ್ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಸಲಹೆ ನೀಡಿದ್ದಾರೆ.
Rohit Sharma photo tampering: ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ವಿರುದ್ಧ ದೊಡ್ಡ ಆರೋಪವೊಂದು ಕೇಳಿಬಂದಿದೆ. ಫೋಟೊ ಟ್ಯಾಂಪರಿಂಗ್ ಮಾಡಿರುವ ಆರೋಪದಲ್ಲಿ ಫ್ಯಾನ್ಸ್ನಾಯಕನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು ಮಾಡಿದ್ದಾರೆ.
India clean sweep sri lanka: ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸವನ್ನು ಅದ್ದೂರಿಯಾಗಿ ಆರಂಭಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡವನ್ನು ಅಳಿಸಿ ಹಾಕಿದೆ. ಸೂಪರ್ ಓವರ್ ತಲುಪಿದ ಕೊನೆಯ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ರೋಚಕ ಜಯ ದಾಖಲಿಸಿ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.
IND VS SL 3rd T20 : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾರತ ತಂಡ ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು ಭಾರತ ತಂಡ ಸೂಪರ್ ಓವರ್ ನಲ್ಲಿ ಆಡುವ ಮೂಲಕ ಗೆಲುವನ್ನು ಸಾಧಿಸಿತು.
Shreyas Iyer: ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮೋಜು ಮಸ್ತಿ ಮಾಡಿದ್ದಾರೆ. ಆಗಸ್ಟ್ 2ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಗೆ ತಂಡದಲ್ಲಿರುವ ಅಯ್ಯರ್ ತಮ್ಮ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದೆ. ಈ ಸಮಯದಲ್ಲಿ ಅನೇಕ ಹುಡುಗಿಯರಿಂದ ಸುತ್ತುವರೆದಿರುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೊಗಳಲ್ಲಿ ನೋಡಬಹುದು.ಈ ಕಾರಣದಿಂದಾಗಿ ಈ ಬಲಗೈ ಬ್ಯಾಟ್ಸ್ಮನ್ ಎಲ್ಲರ ಗಮನ ಸೆಳೆದಿದ್ದಾರೆ.
IND vs SL: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಅಬ್ಬರ ಮುಂದುವರೆದಿದೆ. ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಎದುರಾಳಿ ತಂಡದ ಬೆವರಿಳಿಸಿದೆ. ಭಾನುವಾರ ನಡೆದ ಮೂರು ಟಿ20 ಸರಣಿಯ ಎರಡನೇ ಟಿ20 ಪಂದ್ದಯಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅಡಿ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
Riyan Parag: ಟೀಂ ಇಂಡಿಯಾದ ಯುವ ಆಲ್ರೌಂಡರ್ ರಿಯಾನ್ ಪರಾಗ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೂರು ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ರಯಾನ್ ಪರಾಗ್ ಬೌಲಿಂಗ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ್ದರು. ರಿಯಾನ್ ಪರಾಗ್ 8 ಎಸೆತಗಳನ್ನು ಎಸೆದು ಮೂರು ವಿಕೆಟ್ ಪಡೆದರು.
IND vs SL: ಶ್ರೀಲಂಕಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ 24 ಗಂಟೆಗಳೊಳಗೆ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸಂಜೆ 7 ಗಂಟೆಗೆ ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬ್ಯೂ ಬಾಯ್ಸ್ ಪಡೆ ಎದುರಿಸಲಿದೆ. ಇದೇ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.
IND vs SL: ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಉತ್ತಮ ಆಟವಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 58 ರನ್ ಕಲೆಹಾಕಿ ತಂಡದಕ್ಕೆ ಭಾರಿ ಮೊತ್ತ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದರು.
Ravi Shastri on Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಅವರ ಅಧಿಕಾರದಲ್ಲಿ ಟೀಂ ಇಂಡಿಯಾ ಉತ್ತಮ ಫಲಿತಾಂಶಗಳನ್ನು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದೆ ಇರುವ ದೊಡ್ಡ ಕೆಲಸವೆಂದರೆ ಆಟಗಾರರನ್ನು ಸಮನ್ವಯಗೊಳಿಸುವುದು ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs SL: ಶ್ರೀಲಂಕಾ ಹಾಗೂ ಭಾರತ ತಂಡದ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಭಾರತ ವಿರುದ್ಧ ಮುಂಬರುವ ಮೂರು ಟಿ20 ಫಂದ್ಯಗಳ ಸರಣಿಗೆ ಶ್ರೀಲಂಕಾ ಪ್ಲೇಯಿಂಗ್ XI ಪಟ್ಟಿಯನ್ನು ಪ್ರಕಟಿಸಿದೆ. ಜುಲೈ 27ರಿಂದ ಪಲ್ಲಕೆಲೆ ಮೈದಾನದಲ್ಲಿ ಆರಂಭವಾಗಲಿರುವ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಹೊಸ ನಾಯಕ ಎಂಟ್ರಿ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.