ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಬ್ಯಾಂಕಿಂಗ್ ಕ್ಷೇತ್ರ ತೀವ್ರ ಹಾನಿಗೊಳಗಾಗಿದೆ. ಕೇವಲ ಪುರಿ ನಗರದಲ್ಲಿಯೇ 273 ಎಟಿಎಂಗಳಲ್ಲಿ ಕೇವಲ 20 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿಯೂ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾನುವಾರ ಎರಡು ಬಾರಿ ಕರೆ ಮಾಡಿದರೂ ಸ್ವೀಕರಿಸದೆ, ಪ್ರಧಾನಿ ಕರೆಯನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಬಿಜು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಚಂಡಮಾರುತಪೀಡಿತ ಪ್ರದೇಶಗಳಾದ ಪುರಿ, ಖುರ್ದಾ, ಕಟಕ್, ಜಗತ್ಸಿಂಗ್ಪುರ್, ಜಾಜ್ಪುರ್, ಕೇಂದ್ರಪಾರಾ, ಭದ್ರಾಕ್ ಹಾಗೂ ಬಾಲಾಸೋರ್ನಲ್ಲಿ ಜಿಲ್ಲೆಗಳ ಸಮೀಕ್ಷೆ ನಡೆಸಿದರು.
ಫೋನಿ ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯನ್ನು ಮೊದಲೇ ಗ್ರಹಿಸಿದ ಭಾರತೀಯ ಹವಾಮಾನ ಇಲಾಖೆ ಕಾರ್ಯಕ್ಕೆ ವಿಶ್ವಸಂಸ್ಥೆಯ ವಿಪತ್ತು ಕಡಿತ ಏಜೆನ್ಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಅಧಿಕಾರಿಗಳಿಗೆ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸುಲಭವಾಗಿ ಮಾಡಲಾಯಿತು ಎಂದು ಆ ಸಂಸ್ಥೆ ಹೇಳಿದೆ.
ಮಂಚೇಶ್ವರ್ ನಲ್ಲಿರುವ ರೈಲ್ವೇ ಕೋಚ್ ರಪೇರಿ ವರ್ಕ್ಶಾಪ್ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆ ಇಂದು ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.