ಫೋನಿ ಚಂಡಮಾರುತದಲ್ಲಿ ಮನೆ ಕೊಚ್ಚಿ ಹೋದ ನಂತರ ಒಡಿಶಾದ ಕೇಂದ್ರಾರಾ ಜಿಲ್ಲೆಯ ದಲಿತ ವ್ಯಕ್ತಿಯೊಬ್ಬ ತನ್ನ ಕುಟುಂಬದೊಂದಿಗೆ ಶೌಚಾಲಯದಲ್ಲಿ ವಾಸಿಸುತ್ತಿರುವ ಸಂಗತಿ ಈಗ ಬೆಳಕಿಗೆ ಬಂದಿದೆ.
ಪುರಿ ಜಿಲ್ಲೆಯಲ್ಲಿ ಚಂಡಮಾರುತದಿಂದ ಬ್ಯಾಂಕಿಂಗ್ ಕ್ಷೇತ್ರ ತೀವ್ರ ಹಾನಿಗೊಳಗಾಗಿದೆ. ಕೇವಲ ಪುರಿ ನಗರದಲ್ಲಿಯೇ 273 ಎಟಿಎಂಗಳಲ್ಲಿ ಕೇವಲ 20 ಎಟಿಎಂಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿಯೂ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾನುವಾರ ಎರಡು ಬಾರಿ ಕರೆ ಮಾಡಿದರೂ ಸ್ವೀಕರಿಸದೆ, ಪ್ರಧಾನಿ ಕರೆಯನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.
ಫೋನಿ ಚಂಡಮಾರುತದಿಂದ ಉಂಟಾಗಬಹುದಾದ ಹಾನಿಯನ್ನು ಮೊದಲೇ ಗ್ರಹಿಸಿದ ಭಾರತೀಯ ಹವಾಮಾನ ಇಲಾಖೆ ಕಾರ್ಯಕ್ಕೆ ವಿಶ್ವಸಂಸ್ಥೆಯ ವಿಪತ್ತು ಕಡಿತ ಏಜೆನ್ಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಅಧಿಕಾರಿಗಳಿಗೆ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಸುಲಭವಾಗಿ ಮಾಡಲಾಯಿತು ಎಂದು ಆ ಸಂಸ್ಥೆ ಹೇಳಿದೆ.
ಮಂಚೇಶ್ವರ್ ನಲ್ಲಿರುವ ರೈಲ್ವೇ ಕೋಚ್ ರಪೇರಿ ವರ್ಕ್ಶಾಪ್ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆ ಇಂದು ಬೆಳಿಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫಾನಿ ಚಂಡಮಾರುತವು ಪ್ರಕೃತ ಬಂಗಾಲ ಕೊಲ್ಲಿಯ ಪಶ್ಚಿಮ ಮಧ್ಯದಲ್ಲಿ, ಒಡಿಶಾದ ಪುರಿಯಿಂದ ಸುಮಾರು 450 ನೈಋತ್ಯದಲ್ಲಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದೆ.
ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಭಾಗದತ್ತ ಫನಿ ಚಂಡುಮಾರುತ ಧಾವಿಸುತ್ತಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಫನಿ ಚಂಡಮಾರುತ ತೀವ್ರ ಸ್ವರೂಪವನ್ನು ಪಡೆದುಕೊಂಡು ಮಂಗಳವಾರ ಸಂಜೆ ತೀರಕ್ಕೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.