ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಫುಲ್ ಚಾರ್ಜ್‌ನಲ್ಲಿ ನೀಡುತ್ತೆ 110 ಕಿ.ಮೀ. ಮೈಲೇಜ್

Electric Scooter: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಒಲವು ಹೆಚ್ಚುತ್ತಿದೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಪ್ರಿಯರಿಗಾಗಿ ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಎಬ್ಲುಫಿಯೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ ಈ ಸ್ಕೂಟರ್ ಒಮ್ಮೆ ಫುಲ್ ಚಾರ್ಜ್‌ನಲ್ಲಿ 110 ಕಿ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Aug 23, 2023, 08:54 AM IST
  • ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ EbluFeo ಎಲೆಕ್ಟ್ರಿಕ್ ಸ್ಕೂಟರ್ ಅನ್ನು 99,999ರೂ.ಗಳಿಗೆ ಬಿಡುಗಡೆ ಮಾಡಿದೆ.
  • ಈ ಎಲೆಕ್ಟ್ರಿಕ್ ಸ್ಕೂಟರ್ 2.52 kWh Li-ion ಬ್ಯಾಟರಿಯನ್ನು ಹೊಂದಿದೆ
  • ಇದರ ಮೋಟಾರ್ 110 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, ಫುಲ್ ಚಾರ್ಜ್‌ನಲ್ಲಿ ನೀಡುತ್ತೆ 110 ಕಿ.ಮೀ. ಮೈಲೇಜ್ title=

Electric Scooter: ಪ್ರಸ್ತುತ, ಗಗನಕ್ಕೇರುತ್ತಿರುವ ತೈಲ ಬೆಲೆಯಿಂದಾಗಿ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳನ್ನು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಇದೀಗ, ಈ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಗ್ಗೆ ಇಟ್ಟಿದೆ. ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ EbluFeo ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. 

ಹೌದು,  ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ EbluFeo ಎಲೆಕ್ಟ್ರಿಕ್ ಸ್ಕೂಟರ್ ಅನ್ನು  99,999ರೂ.ಗಳಿಗೆ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 2.52 kWh Li-ion ಬ್ಯಾಟರಿಯನ್ನು ಹೊಂದಿದ್ದು, ಇದರ ಮೋಟಾರ್ 110 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

ಇದನ್ನೂ ಓದಿ- ಫ್ರಿಜ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟಿರಬೇಕುಷ್ಟು?ನಿಮಗೆ ಗೊತ್ತಿರದ ಮಾಹಿತಿ ಇದು !

ಮೂರು ಡ್ರೈವಿಂಗ್ ಮೋಡ್‌ಗಳು: 
ಇದರ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಮೂರು ಡ್ರೈವಿಂಗ್ ಮೋಡ್‌ಗಳಲ್ಲಿ ಎಂದರೆ ಎಕಾನಮಿ, ನಾರ್ಮಲ್ ಮತ್ತು ಪವರ್ ಎಂಬ ಮೂರು ಮೋಡ್‌ಗಳಲ್ಲಿ  ಲಭ್ಯವಿದೆ. 

ವ್ಯಾಪ್ತಿ: 
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ EbluFeo ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 110 ಕಿ.ಮೀ. ವರೆಗೂ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಇದರ ಗರಿಷ್ಠ ವೇಗ ಗಂಟೆಗೆ 60 ಕಿ.ಮೀ. ಇರಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. 

ಇದನ್ನೂ ಓದಿ- ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಏಕೆ ಕಾಣಿಸಿಕೊಳ್ಳುತ್ತೇ ಈ 'ಲಾಕ್' ಐಕಾನ್!

ಈ ಆರ್ಥಿಕ ವರ್ಷದಲ್ಲಿ 12,000 ರಿಂದ 15,000 ಸ್ಕೂಟರ್‌ಗಳನ್ನು ಮಾರುವ ಗುರಿ: 
ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ಕಂಪನಿಯು ತನ್ನ ರಾಯ್‌ಪುರ ಘಟಕದಲ್ಲಿ  ಪ್ರತಿ ತಿಂಗಳು ಸುಮಾರು 4,000 ಇ-ಸ್ಕೂಟರ್ ಘಟಕಗಳನ್ನು ಉತ್ಪಾದಿಸಬಹುದು. ಹಾಗಾಗಿ, ಈ ಆರ್ಥಿಕ ವರ್ಷದ ಅಂತ್ಯದ ವೇಳೆ ಒಟ್ಟು 12,000-15,000 ಯೂನಿಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹೈದರ್ ಖಾನ್ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News