Automatic vs Manual: ಹೊಸದಾಗಿ ಕಾರ್ ಖರೀದಿಸುವ ಬಗ್ಗೆ ಯೋಚಿಸುವಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡುತ್ತವೆ. ಅದರಲ್ಲಿ ಬಜೆಟ್, ಯಾವ ಕಂಪನಿ ಕಾರ್ ಖರೀದಿಸಬೇಕು ಎಂಬುದರ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಖರೀದಿಸಬೇಕೆ ಅಥವಾ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಇವೆರಡರಲ್ಲಿ ಯಾವ ಕಾರ್ ಖರೀದಿಸಬೇಕು ಎಂಬುದು ಹಲವರಲ್ಲಿ ತೀವ್ರ ಗೊಂದಲವನ್ನು ಉಂಟು ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ವಯಂಚಾಲಿತ ಕಾರುಗಳ ಟ್ರೆಂಡ್ ಹೆಚ್ಚಾಗಿದೆ.
ವಾಸ್ತವವಾಗಿ, ಸ್ವಯಂಚಾಲಿತ ಎಂದರೆ ಆಟೋಮ್ಯಾಟಿಕ್ ಕಾರಿನ ಬಗ್ಗೆ ಯೋಚಿಸುವಾಗ ಅದರ ಬಜೆಟ್ ಬಿಟ್ಟು ಹೆಚ್ಚಾಗಿ ಬೇರೆ ಯಾವ ವಿಚಾರವೂ ಮನಸ್ಸಿಗೆ ಬರುವುದಿಲ್ಲ. ಅದೇ ಆಟೋಮ್ಯಾಟಿಕ್ ಕಾರಿನ ಬಗ್ಗೆ ಯೋಚಿಸುವಾಗ ಇದು ಐಷಾರಾಮಿ, ಪ್ರೀಮಿಯಂ, ಇದರಲ್ಲಿರುವ ಸೌಕರ್ಯ ಇತ್ಯಾದಿ ವಿಷಯಗಳು ತಲೆಗೆ ಬರುತ್ತವೆ. ಅದೇನೇ ಇರಲಿ ನೀವು ಹೊಸ ಕಾರ್ ಖರೀದಿಸಲು ಯೋಚಿಸುತ್ತಿದ್ದರೆ ಸ್ವಯಂಚಾಲಿತ ಕಾರು ಅಥವಾ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆಯಾಗಿರಲಿದೆ. ನೀವು ಇದನ್ನು ಹೇಗೆ ನಿರ್ಧರಿಸಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ಪಡೆಯಬಹುದು.
ಸ್ವಯಂಚಾಲಿತ (ಆಟೋಮ್ಯಾಟಿಕ್ ) ಕಾರುಗಳ ವೈಶಿಷ್ಟ್ಯ:
ಆಟೋಮ್ಯಾಟಿಕ್ ಕಾರುಗಳಲ್ಲಿ ನೀವು ಗೇರ್‌ಗಳನ್ನು ನೋಡಬಹುದು. ಆದಾಗ್ಯೂ, ಈ ಗೇರ್ ಗೇರ್‌ಗಳನ್ನು ನೋಡಬಹುದು. ಚಾಲಕರು ಇದನ್ನು ಅನುಸರಿಸಿದರಷ್ಟೇ ಸಾಕು. ಅರ್ಥಾತ್, ಮ್ಯಾನುಯಲ್ ಕಾರುಗಳಂತೆ ನೀವು ಪದೇ ಪದೇ ಗೇರ್ ಬದಲಾಯಿಸುವ ಆಗತ್ಯವಿಲ್ಲ ಬದಲಿಗೆ ಗೇರ್ ಅನ್ನು ಒಮ್ಮೆ ಡ್ರೈವ್ ಮೋಡ್‌ನಲ್ಲಿ ಇರಿಸಿ ಕಾರ್ ಡ್ರೈವಿಂಗ್ ಮುಂದುವರೆಸಬಹುದು.
ಇದನ್ನೂ ಓದಿ- ಈ ಬಾರಿ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವುದು ಈ SUV!ಗ್ರಾಹಕರು ಮುಗಿ ಬಿದ್ದು ಖರೀದಿಸಿರುವ ಕಾರು ಇದು
ಸ್ವಯಂಚಾಲಿತ ಕಾರುಗಳು ನಗರ ರಸ್ತೆಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಅದರಲ್ಲೂ ಬೆಂಗಳೂರಿನಂತಹ ಸಂಚಾರ ದಟ್ಟಣೆ ಇರುವ ನಗರಗಳಲ್ಲಿ ಕಾರ್ ಡ್ರೈವ್ ಮಾಡಲು ಆಟೋಮ್ಯಾಟಿಕ್ ಕಾರುಗಳು ಅತ್ಯುತ್ತಮ ಆಯ್ಕೆಯಾಗಿದೆ. ನೀವು ಆರಾಮದಾಯಕ ಡ್ರೈವ್ ಬಯಸಿದರೆ, ಇದಕ್ಕಾಗಿ ಸ್ವಯಂಚಾಲಿತ (ಆಟೋಮ್ಯಾಟಿಕ್ ) ಕಾರು ಅತ್ಯುತ್ತಮ ಆಯ್ಕೆಯಾಗಿದೆ.
ಆಟೋಮ್ಯಾಟಿಕ್ ಕಾರುಗಳ ದುಷ್ಪರಿಣಾಮಗಳು:
ಆಟೋಮ್ಯಾಟಿಕ್ ಕಾರುಗಳ ಚಾಲನೆಯಲ್ಲಿ ನೀವು ಶಕ್ತಿಯ ಕೊರತೆಯನ್ನು ಅನುಭವಿಸಬಹುದು. ನೀವು ಯಾವುದೇ ಹೆದ್ದಾಗಿಗಳು ಇಲ್ಲವೇ, ಗುಡ್ಡಗಾಡು ಪ್ರದೇಶಗಳಲ್ಲಿ ಕಾರ್ ಚಾಲನೆ ಮಾಡುವಾಗ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಇದನ್ನೂ ಓದಿ- ರೈಲ್ವೆ ನಿಲ್ದಾಣದಲ್ಲಿ ಹಳದಿ ಬೋರ್ಡ್ ಮೇಲೆ PH ಎಂದು ಏಕೆ ಬರೆದಿರುತ್ತಾರೆ ಗೊತ್ತಾ..?
ಮ್ಯಾನುಯಲ್ ಕಾರ್ ವೈಶಿಷ್ಟ್ಯ:
ಮ್ಯಾನುಯಲ್ ಕಾರಿನಲ್ಲಿ ನೀವು ಸರಿಯಾದ ಗೇರ್‌ಬಾಕ್ಸ್ ಅನ್ನು ನೋಡುತ್ತೀರಿ. ನೀವು ಯಾವ ರಸ್ತೆಯಲ್ಲಿ ಚಲಾಯಿಸುತ್ತೀರಿ, ಅದಕ್ಕೆ ತಕ್ಕಂತ ವೇಗ, ಅವಶ್ಯಕತೆಗೆ ಅನುಗುಣವಾಗಿಯೇ ನೀವು ಗೇರ್ ಬದಲಾಯಿಸಬೇಕಾಗುತ್ತದೆ. ನಗರಗಳಲ್ಲಿ ಪದೇ ಪದೇ ಗೇರ್ ಅನ್ನು ಬದಲಾಯಿಸಬೇಕಾಗುತ್ತದೆ. ಇದರಲ್ಲಿ ನೀವು ಕ್ಲಚ್ ಮತ್ತು ಗೇರ್ ಸಂಯೋಜನೆಯನ್ನು ಮಾಡುವುದು ತುಂಬಾ ಮುಖ್ಯ. ಹಾಗಾಗಿ ಇದು ನಿಮಗೆ ಆರಾಮದಾಯಕ ಡ್ರೈವಿಂಗ್ ಅನುಭವವನ್ನು ನೀಡುವುದಿಲ್ಲ.
ಆದಾಗ್ಯೂ, ಪವರ್ ಡ್ರೈವ್ ವಿಷಯಕ್ಕೆ ಬಂದಾಗ ಮ್ಯಾನುಯಲ್ ಕಾರುಗಳು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಯಾವುದೇ ರಸ್ತೆಗಳಲ್ಲಿ ಅದು ಮೆಟ್ರೊ ನಗರವೇ ಇರಲಿ ಇಲ್ಲವೇ, ಹೆದ್ದಾರಿ, ಗುಡ್ಡಗಾಡೇ ಆಗಿರಲಿ ಎಲ್ಲಾ ರಸ್ತೆಗಳಲ್ಲೂ ಚಾಲನೆಗೆ ಯೋಗ್ಯವಾದ ಕಾರುಗಳಿವು.
ನೀವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ದೈನಂದಿನ ಜೀವನದಲ್ಲಿ ಕಾರ್ ಬಳಸುವವರಾಗಿದ್ದರೆ ಹಾಗೂ ಆರಾಮದಾಯಕ ಡ್ರೈವಿಂಗ್ ಬಯಸಿದರೆ ಇದಕ್ಕಾಗಿ ಆಟೋಮ್ಯಾಟಿಕ್ ಕಾರುಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಆದರೆ, ನೀವು ನಗರ ಪ್ರದೇಶಗಳಿಂದ ಹೆಚ್ಚಾಗಿ ಹೊರಗಿನ ಪ್ರಯಾಣಕ್ಕಾಗಿ ಕಾರು ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ಇದಕ್ಕೆ ಮ್ಯಾನುಯಲ್ ಕಾರುಗಳು ಬೆಸ್ಟ್ ಆಯ್ಕೆಯಾಗಿರಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.