ನವದೆಹಲಿ: ಹೋಳಿ ಹಬ್ಬ(Holi Festival)ಕ್ಕೂ ಮುನ್ನವೇ ರಿಯಾಯಿತಿ ನೀಡುವುದರ ಜೊತೆ ಜೊತೆಗೆ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಭಾರೀ ಹೊಡೆತ ನೀಡಿದೆ. 2022-23ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ ಕಂಪನಿಯು ತನ್ನ ಶ್ರೇಣಿಯಲ್ಲಿರುವ ಹೆಚ್ಚಿನ ಕಾರುಗಳ ಬೆಲೆ(Tata Price Hike)ಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಕಾರುಗಳಲ್ಲಿ ಟಾಟಾ ನೆಕ್ಸಾನ್, ಟಾಟಾ ಆಲ್ಟ್ರೋಜ್, ಟಾಟಾ ಪಂಚ್, ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಟಾಟಾ ಟಿಯಾಗೊ, ಟಾಟಾ ಟಿಗೋರ್ ಮುಂತಾದ ಕಾರುಗಳು ಸೇರಿವೆ. ವಿವಿಧ ಮಾದರಿಗಳ ಪ್ರಕಾರ ಬೆಲೆ(ata Price Increase)ಗಳನ್ನು ಹೆಚ್ಚಿಸುವ ಬದಲು ಕಂಪನಿಯು ಈ ಬಾರಿ ಎಲ್ಲಾ ಕಾರುಗಳ ಬೆಲೆಯನ್ನು 3 ಸಾವಿರ ರೂ.ನಷ್ಟು ಏರಿಕೆ ಮಾಡಿದೆ. ವೆರಿಯಂಟ್ ಗಳ ಪ್ರಕಾರ ಯಾವ ಕಾರಿನ ಬೆಲೆ ಎಷ್ಟು ಹೆಚ್ಚಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಟಾಟಾ ನೆಕ್ಸಾನ್
ಟಾಟಾ ನೆಕ್ಸಾನ್ ಪೆಟ್ರೋಲ್ ಮಾದರಿಯಲ್ಲಿ XE, XM, XM(S), XMA, XMA(S), XZ, XZ+, XZ+(O), XZ+ DT ಮತ್ತು XZ+ DT(O)ನಂತಹ Variants ಬೆಲೆಗಳು 3 ಸಾವಿರ ರೂ.ಗಳಷ್ಟು ಹೆಚ್ಚಾಗಿದೆ. XM, XM(S), XMA(S), XZ+, XZ+ (O), XZ+ Dark, XZ+ (O) Dark, XZA+ Dark, XZA+ DT, XZA+ DT(O) ಮುಂತಾದ ರೂಪಾಂತರಗಳ ಟಾಟಾ ನೆಕ್ಸಾನ್ ಡೀಸೆಲ್ Variants ಕಾರುಗಳ ಬೆಲೆ 3 ಸಾವಿರ ರೂ.ನಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: WhatsApp ನಲ್ಲಿ ಬರುತ್ತಿದೆ ಇದುವರೆಗಿನ ಅತ್ಯಂತ ಜಬರ್ದಸ್ತ್ ವೈಶಿಷ್ಟ್ಯ
ಟಾಟಾ ಹ್ಯಾರಿಯರ್
ಟಾಟಾ ಮೋಟಾರ್ಸ್ ಹ್ಯಾರಿಯರ್‌ನ XE, XM ಮತ್ತು XMZ Variants ಬೆಲೆಗಳನ್ನು 3 ಸಾವಿರ ರೂ.ಗಳಷ್ಟು ಹೆಚ್ಚಿಸಲಾಗಿದೆ. ಆದರೆ ಟಾಟಾ ಸಫಾರಿಯ XE, XM, XMA, XT, XT+, XT+ ಡಾರ್ಕ್, XTA+, XTA+ ಡಾರ್ಕ್, XZ, XZ+ 6S ಡಾರ್ಕ್, XZ+ ಡಾರ್ಕ್, XZ+ ಗೋಲ್ಡ್, XZ+ ಗೋಲ್ಡ್ 6S, XZA, XZA+ 6S ಡಾರ್ಕ್, XZA+ ಡಾರ್ಕ್ ಮತ್ತು XZA+ XZA + ಗೋಲ್ಡ್ 6S ನಂತಹ Variants ಬೆಲೆಗಳನ್ನು 3 ಸಾವಿರ ರೂ.ಗಳಷ್ಟು ಹೆಚ್ಚಿಸಲಾಗಿದೆ.
TATA Tiago & Tigor
ಟಾಟಾ ಮೋಟಾರ್ಸ್ ತನ್ನ ಅಗ್ಗದ ಕಾರು Tata Tiago XE, XT, XTA, XTO, XZ, XZ+ DT New, XZA+ DT New, XZA+ ಬೆಲೆಗಳನ್ನೂ ಹೆಚ್ಚಿಸಿದೆ. ಅದೇ ರೀತಿ Tata Tigor XE, XM, XMA, XZ, XZ + New, XZ + DT New, XZA + DT New ಮತ್ತು XZA + ನಂತಹ Variants ಸಹ 3 ಸಾವಿರ ರೂ.ನಷ್ಟು ದುಬಾರಿಯಾಗಿವೆ.
ಇದನ್ನೂ ಓದಿ: Dangerous Virus Mail: ನಿಮ್ಮ Inbox ನಲ್ಲೂ ಈ ಮೇಲ್ ಬಂದಿದೆಯಾ? ಈಗಲೇ ಎಚ್ಚೆತ್ತುಕೊಳ್ಳಿ
TATA ಪಂಚ್ & Altroz
ಇತ್ತೀಚೆಗೆ ಬಿಡುಗಡೆಯಾದ ಮೈಕ್ರೋ SUV ಟಾಟಾ ಪಂಚ್ ಸಹ ಬೆಲೆಗಳನ್ನು ಹೆಚ್ಚಿಸಿದೆ ಮತ್ತು ಈಗ Accomplish, Accomplish AMT, Accomplish Dazzle, Accomplish Dazzle AMT, Adventure, Adventure AMT, Adventure Rhythm, Adventure Rhythm AMT, Creative, Creative AMT, Creative IRA, Creative IRA AMT ಮತ್ತು Pure Variants 3 ಸಾವಿರ ರೂ.ನಷ್ಟು ದುಬಾರಿಯಾಗಿವೆ. ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾ ಆಲ್ಟ್ರೋಜ್ ಡೀಸೆಲ್ ಮಾದರಿಗಳಾದ XE, XE+, XM+, XT, XZ, XZ(O) ಮತ್ತು XZ+ ಜೊತೆಗೆ Altroz ಪೆಟ್ರೋಲ್ ಮಾದರಿಗಳಾದ XE+, XM+, XT, XT TC, XZ, XZ TC (O), XZ TC ಹಾಗೂ XZ (O), XZ +, XZ + Dark, XZ + TC ಮತ್ತು XZ + TC Dark ರೂಪಾಂತರಗಳ ಬೆಲೆಗಳನ್ನು 3 ಸಾವಿರ ರೂ.ನಷ್ಟು ಹೆಚ್ಚಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.