Best-Selling Two-Wheeler Brands In April 2023 : ಕಳೆದ ಏಪ್ರಿಲ್ ತಿಂಗಳು ಭಾರತೀಯ ವಾಹನ ಉದ್ಯಮದ ಪಾಲಿಗೆ ಉತ್ತಮವಾಗಿತ್ತು. ವಾಹನ ತಯಾರಕರು ಪ್ರಯಾಣಿಕ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ವಿಭಾಗಗಳಲ್ಲಿ ವರ್ಷದಿಂದ ವರ್ಷಕ್ಕೆ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಹೀರೊ ಮೋಟೊಕಾರ್ಪ್ ಮಾರಾಟದಲ್ಲಿ ಕುಸಿತ ಕಂಡಿದ್ದರೂ, ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಮಾರಾಟವಾದ ವಾಹನಗಳನು ಗಮನಿಸಿದರೆ ಈ ಕಂಪನಿ ಮುಂಚೂಣಿಯಲ್ಲಿದೆ. ಬಜಾಜ್, ಟಿವಿಎಸ್ ಮತ್ತು ರಾಯಲ್ ಎನ್‌ಫೀಲ್ಡ್ ದೇಶೀಯ ಮಾರಾಟದಲ್ಲಿ ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಹೀರೋ ಮೋಟೋಕಾರ್ಪ್ ಈ ವಾಹನಗಳನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಹಾಗಿದ್ದರೆ ಏಪ್ರಿಲ್ 2023 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಬ್ರ್ಯಾಂಡ್‌ಗಳ ಕುರಿತು ಮಾಹಿತಿ ಪಡೆಯೋಣ.
ಹೀರೋ ಮೋಟೋಕಾರ್ಪ್ :
Hero MotoCorp ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 2023 ರಲ್ಲಿ 3,86,184 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದರೆ ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿ ನೋಡಿದರೆ ಹಿರೋ ಮೋಟೋ ಕಾರ್ಪ್ ಮಾರಾಟದಲ್ಲಿ 3.09% ನಷ್ಟು ಕುಸಿತವನ್ನು ದಾಖಲಿಸಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಅಂದರೆ ಏಪ್ರಿಲ್ 2022ರಲ್ಲಿ ಈ ಬೈಕ್ ನ 3,98,490 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
ಇದನ್ನೂ ಓದಿ : ನೀವೂ ಮ್ಯಾನುಯಲ್ ಕಾರ್ ಮಾಲೀಕರೇ? ಸದಾ ನೆನಪಿರಲಿ ಈ ನಾಲ್ಕು ವಿಷಯಗಳು
ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ :
ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಳೆದ ತಿಂಗಳು ಅಂದರೆ ಏಪ್ರಿಲ್ ೨೦೨೩ರಲ್ಲಿ 38,289 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 6.14% ಬೆಳವಣಿಗೆಯನ್ನು ತೋರಿಸುತ್ತದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್ 2022), ಈ ಬೈಕ್ ನ ಮಾರಾಟವು 3,18,732 ಯುನಿಟ್‌ಗಳಾಗಿತ್ತು.
ಟಿವಿಎಸ್ ಮೋಟಾರ್ ಕಂಪನಿ :
ಟಿವಿಎಸ್ ಮೋಟಾರ್ ಕಂಪನಿ ಏಪ್ರಿಲ್ 2023 ರಲ್ಲಿ 2,32,956 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಮಾರಾಟವು 29. 02 YoY ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್ 2022), ಅದರ ದೇಶೀಯ ಮಾರಾಟವು 1,96,596 ಯುನಿಟ್‌ಗಳಾಗಿತ್ತು.
ಇದನ್ನೂ ಓದಿ : Infinix Smart 7 HD: ಈ ಫೋನ್ ಬೆಲೆ ಜಸ್ಟ್ 5,999 ರೂ! ಅದ್ಭುತ ಫೀಚರ್-ಸೂಪರ್ ಸ್ಮಾರ್ಟ್ಫೋನ್
ಬಜಾಜ್ ಆಟೋ :
ಬಜಾಜ್ ಆಟೋ ಏಪ್ರಿಲ್ 2023 ರಲ್ಲಿ 1,81,828 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಅದರ ದೇಶೀಯ ಮಾರಾಟದಲ್ಲಿ 95.02% ರಷ್ಟು ದೊಡ್ಡ ಬೆಳವಣಿಗೆಯನ್ನು ದಾಖಲಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ (ಏಪ್ರಿಲ್ 2022) 93,233 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ರಾಯಲ್ ಎನ್‌ಫೀಲ್ಡ್ :
ಕಳೆದ ವರ್ಷ (ಏಪ್ರಿಲ್ 2022) ಇದೇ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ 53,852 ಯುನಿಟ್‌ಗಳಷ್ಟು ಮಾರಾಟವಾಗಿತ್ತು. ಈ ಸಂಖ್ಯೆಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಅತಿ ಹೆಚ್ಚು ಅಂದರೆ 68,881 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಕಂಪನಿ ಯಶಸ್ವಿಯಾಗಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ಅದರ ಮಾರಾಟದಲ್ಲಿ 27.91% ಹೆಚ್ಚಳವಾಗಿದೆ.
ಇದನ್ನೂ ಓದಿ : ನೆಲಕ್ಕೆ ಬಿದ್ದರೂ ಒಡೆಯದ NOKIA ಫೋನ್; ಒಮ್ಮೆ ಚಾರ್ಜ್ ಮಾಡಿದ್ರೆ 22 ದಿನ ಯೂಸ್ ಮಾಡಬಹುದು; ಬೆಲೆ ಕೂಡ ಅಗ್ಗ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.