BSNL 5G Service: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಏರ್ಟೆಲ್, ಜಿಯೋ, ವಿಐ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇದೀಗ ತನ್ನ ಗ್ರಾಹಕರಿಗೆ 5ಜಿ ಇಂಟರ್ನೆಟ್ ಸೇವೆಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಬಳಕೆದಾರರು 5ಜಿ ಇಂಟರ್ನೆಟ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ಹೌದು, ಇತ್ತೀಚೆಗಷ್ಟೇ ದೇಶದಲ್ಲಿ 4ಜಿ ಸೇವೆ ನೆಟ್‌ವರ್ಕ್ (4G Network)ಆರಂಭಿಸಿ, ರೀಚಾರ್ಜ್ ಯೋಜನೆಗಳಲ್ಲಿ ಬದಲಾವಣೆ ಮಾಡುವ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಾದ ಭಾರತಿ ಏರ್ಟೆಲ್, ರಿಲಯನ್ಸ್ ಜಿಯೋ, ವೋಡಾಫೋನ್-ಐಡಿಯಾ ಕಂಪನಿಗಳಿಗೆ ಟಕ್ಕರ್ ನೀಡಿರುವ ಬಿಎಸ್‌ಎನ್‌ಎಲ್ ಇದೀಗ ಶೀಘ್ರದಲ್ಲೇ 5G ಸೇವೆ (5G Service) ಹೊರತರುವುದಾಗಿ ಪ್ರಕಟಿಸುವ ಮೂಲಕ ಈ ಕಂಪನಿಗಳ ನಿದ್ದೆಗೆಡಿಸಿದೆ.
A new wave of speed and connectivity is on its way.
Stay tuned......#BSNL #MTNL pic.twitter.com/S8AP9jbH9H— BSNL India (@BSNLCorporate) September 6, 2024
ಇದನ್ನೂ ಓದಿ- ಬಹು ನಿರೀಕ್ಷಿತ iPhone16 Series ಬಿಡುಗಡೆ: ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಐಫೋನ್ 16 ಲಭ್ಯ, ಇಲ್ಲಿದೆ ಫುಲ್ ಡೀಟೈಲ್ಸ್
ಈ ದಿನದಿಂದ ಬಿಎಸ್‌ಎನ್‌ಎಲ್ 5G ಸೇವೆ (BSNL 5G Service) ಆರಂಭದ ನಿರೀಕ್ಷೆ:
ಬಿಎಸ್‌ಎನ್‌ಎಲ್ 5G ಸೇವೆ (BSNL 5G Service)ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಬಿಎಸ್ಎನ್ಎಲ್ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್, 2025ರ ಜನವರಿಯಲ್ಲಿ ಈ ಸೇವೆ ಆರಂಭಿಸಿಸಲು ಸಿದ್ದತೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ, ತನ್ನ ಮೂಲಸೌಕರ್ಯವನ್ನು ಅಪ್ಡೇಟ್ ಮಾಡುವತ್ತ ಕಂಪನಿ ಗಮನ ಕೇಂದ್ರೀಕರಿಸಿದ್ದು ದು ಟವರ್ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ- Jio, Airtel, Viಗೆ ಕಠಿಣ ಸ್ಪರ್ಧೆ ಒಡ್ಡಿದ ಬಿಎಸ್‌ಎನ್‌ಎಲ್: 150ದಿನಗಳ ಪ್ಲಾನ್ ಬೆಲೆ ₹400ಕ್ಕಿಂತಲೂ ಕಡಿಮೆ
ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ ತನ್ನ 4G ಸೇವೆಯನ್ನೇ 5Gಗೆ ಪರಿವರ್ತಿಸಲು ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 4ಜಿ ಸೇವೆ ಲಭ್ಯವಿರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಬಿಎಸ್‌ಎನ್‌ಎಲ್ 5G ರೋಲ್ಔಟ್ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
Get ready for faster speed with low latency. 5G indigenous technology under testing.
Stay tuned for more updates. #BSNL #MTNL #5GTesting pic.twitter.com/STB1Y4vw7q— BSNL India (@BSNLCorporate) September 6, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.