Check IRCTC PNR On WhatsApp: ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ರೈಲ್ವೆ ಟಿಕೆಟ್ ಬುಕಿಂಗ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಗಮ ಪ್ರಯಾಣಕ್ಕಾಗಿ ಮೊದಲೇ ರೈಲ್ವೆ ಟಿಕೆಟ್ ಬುಕ್ಕಿಂಗ್ ಅತ್ಯಗತ್ಯವಾಗಿದೆ. ಕೆಲವೊಮ್ಮೆ ಟಿಕೆಟ್ ಬುಕ್ ಮಾಡಿದ ಕೂಡಲೇ ಬುಕ್ಕಿಂಗ್ ಕನ್ಫರ್ಮ್ ಆಗಿರುವುದಿಲ್ಲ. ಹಾಗಾಗಿ, ನೀವು ನಿಮ್ಮ ಪ್ರಯಾಣಕ್ಕೂ ಮೊದಲು ಪಿಎನ್‌ಆರ್ ಸ್ಥಿತಿ ಹೇಗಿದೆ ಎಂದು ಪರಿಶೀಲಿಸಬೇಕಾಗುತ್ತದೆ. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಿಲ್ಲ. ಇದೀಗ ನೀವು ನಿಮ್ಮ ವಾಟ್ಸಾಪ್ ನಲ್ಲಿಯೂ ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದೆಯೇ? ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
ಹೌದು, ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ +91 9881198000 ಸಂಖ್ಯೆಯನ್ನು ಐಆರ್‌ಸಿಟಿಸಿ ಎಂದು ಸೇವ್ ಮಾಡುವ ಮೂಲಕ ಸುಲಭವಾಗಿ ವಾಟ್ಸಾಪ್ ಮೂಲಕ ಐಆರ್‌ಸಿಟಿಸಿ ಪಿಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಬಹುದು. ಪಿಎನ್‌ಆರ್ (ಪ್ಯಾಸೆಂಜರ್ ನೇಮ್ ರೆಕಾರ್ಡ್) ಸಂಖ್ಯೆಯು ನಿಮ್ಮ ರೈಲು ಟಿಕೆಟ್‌ನಲ್ಲಿ ಒದಗಿಸಲಾದ ಅನನ್ಯ 10-ಅಂಕಿಯ ಸಂಖ್ಯೆಯಾಗಿದೆ. ಇದು ನಿಮ್ಮ ಬುಕಿಂಗ್ ವಿವರಗಳನ್ನು ಗುರುತಿಸಲು ಮತ್ತು ಹಿಂಪಡೆಯಲು ಈ ಸಂಖ್ಯೆಯು ಸಿಸ್ಟಮ್‌ಗೆ ಸಹಾಯ ಮಾಡುತ್ತದೆ.
ವಾಟ್ಸಾಪ್ ಮೂಲಕ ಐಆರ್‌ಸಿಟಿಸಿ ಪಿಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:-
* ವಾಟ್ಸಾಪ್ ಮೂಲಕ ಐಆರ್‌ಸಿಟಿಸಿ ಪಿಎನ್‌ಆರ್ ಸ್ಥಿತಿಯನ್ನು ಪರಿಶೀಲಿಸಲು ಮೊದಲಿಗೆ ನಿಮ್ಮ ವಾಟ್ಸಾಪ್ ಚಾಟ್ ವಿಂಡೋದಲ್ಲಿ ನೀವು ಈಗಾಗಲೇ ಸೇವ್ ಮಾಡಿರುವ ಸಂಪರ್ಕಗಳನ್ನು ಹುಡುಕಿ, ಅಲ್ಲಿ ಐಆರ್‌ಸಿಟಿಸಿ ಎಂದು ಟೈಪ್ ಮಾಡಿ, ಚಾಟ್ ತೆರೆಯಲು ಐಆರ್‌ಸಿಟಿಸಿ ಸಂಪರ್ಕದ ಮೇಲೆ ಟ್ಯಾಪ್ ಮಾಡಿ.
ಇದನ್ನೂ ಓದಿ- ನಿಮ್ಮ WhatsApp ಖಾತೆಯಲ್ಲಿ ಇತರರ ಬೇಹುಗಾರಿಗೆ ತಡೆಯಲು ಬಂತು ಸಿಕ್ರೆಟ್ ಕೋಡ್!
* ಇಲ್ಲಿ ಚಾಟ್‌ನಲ್ಲಿ, ನಿಮ್ಮ ಪಿಎನ್‌ಆರ್ ಸಂಖ್ಯೆಯನ್ನು ನಮೂದಿಸಿ ಸಂದೇಶ ಕಳುಹಿಸಿ.
* ಐಆರ್‌ಸಿಟಿಸಿ ಚಾಟ್ ನಲ್ಲಿ ಒಮ್ಮೆ ನೀವು ನಿಮ್ಮ ಪಿಎನ್‌ಆರ್ ಸಂಖ್ಯೆಯನ್ನು ಕಳುಹಿಸಿದರೆ ಐಆರ್‌ಸಿಟಿಸಿ ವತಿಯಿಂದ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತೀರಿ. ಈ ಪ್ರತಿಕ್ರಿಯೆಯು ನಿಮ್ಮ ಪ್ರಸ್ತುತ ಪಿಎನ್‌ಆರ್ ಸ್ಥಿತಿ, ರೈಲಿನ ಆಗಮನ, ನಿರ್ಗಮನದ ಸಮಯ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಒಳಗೊಂಡಿರುತ್ತದೆ.
* ನೀವು ಹೆಚ್ಚಿನ ನವೀಕರಣಗಳನ್ನು ಪಡೆಯಲು ಬಯಸಿದರ್, ಇದಕ್ಕಾಗಿ ಇದಕ್ಕಾಗಿ ನೀವು ಐಆರ್‌ಸಿಟಿಸಿಯೊಂದಿಗೆ ಸಂವಹನವನ್ನು ಮುಂದುವರೆಸಬಹುದು. ಅಗತ್ಯವಿರುವಂತೆ ಸ್ಥಿತಿ ನವೀಕರಣಗಳನ್ನು ಕೇಳಬಹುದು.
ಇದನ್ನೂ ಓದಿ- Indian Railway Facts: ಭಾರತದ 5 ಅನನ್ಯ ರೈಲ್ವೆ ನಿಲ್ದಾಣಗಳಿವು, ಇಲ್ಲಿಗೆ ಪ್ರಯಾಣಿಸಲು ವೀಸಾ ಕೂಡ ಅಗತ್ಯ
ಇದಲ್ಲದೆ, ನಿಮ್ಮ ಫೋನ್‌ನಿಂದ 139 ಅನ್ನು ಡಯಲ್ ಮಾಡುವ ಮೂಲಕ ನೀವು ರೈಲಿನ ಸ್ಥಿತಿಯನ್ನು ಸಹ ಪರಿಶೀಲಿಸಬಹುದು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.