Cheapest Split Air Conditioner: ಸ್ಪ್ಲಿಟ್ ಹವಾ ನಿಯಂತ್ರಣ (Split Air-Conditioner)ಗಳು ಕೆಲವೊಮ್ಮೆ ತುಂಬಾ ದುಬಾರಿಯಾಗುತ್ತವೆ. ಅದಕ್ಕೆ ಎರಡು ಕಾರಣಗಳಿರುತ್ತವೆ, ಒಂದು, ಬೇಡಿಕೆ ಹೆಚ್ಚಾದಂತೆ ಅವುಗಳ ವೆಚ್ಚವು ಮೊದಲಿಗಿಂತ ಹೆಚ್ಚಾಗುತ್ತಾ ಹೋಗುತ್ತದೆ. ಎರಡನೆಯದ್ದು, ಯುನಿಟ್ ಗಳು ಉಳಿದಿದ್ದರೆ, ಅವುಗಳ ವೆಚ್ಚವೂ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಏರ್ ಕಂಡೀಶನ್ ಕೊಂಡುಕೊಳ್ಳಲು ಜನಸಾಮಾನ್ಯರು ಪರದಾಡುವಂತಾಗುತ್ತದೆ.
ಇದನ್ನೂ ಓದಿ: Watch Netflix Free: ವರ್ಷವಿಡೀ ನೆಟ್ ಫ್ಲಿಕ್ಸ್ ಮೇಲೆ ಉಚಿತ ಚಲನಚಿತ್ರಗಳನ್ನು ವೀಕ್ಷಿಸಬೇಕೆ? ಇಲ್ಲಿದೆ ಪ್ಲಾನ್ !
ಈಗ ಬೇಸಿಗೆ ಕಾಲದಲ್ಲಿ ಸುಡುವ ಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪ್ಲಿಟ್ ಏರ್ ಕಂಡಿಷನರ್ ಖರೀದಿಸಲು ಗ್ರಾಹಕರು ಮುಂದಾಗುತ್ತಾರೆ, ಆದರೆ ಈ ಬಾರೀ ನೀವು ಹೆಚ್ಚು ಹಣ ಪಾವತಿಸಬೇಕಿಲ್ಲ. ನಿಮಗಾಗಿ ಕಡಿಮೆ ಬೆಲೆಯ ಎಸಿಯನ್ನು ತಂದಿದ್ದೇವೆ. ಇಂದು ನಾವು ಆನ್ ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಭಾರತದ ಅಗ್ಗದ ಸ್ಪ್ಲಿಟ್ ಏರ್ ಕಂಡಿಷನರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾವು ಇಲ್ಲಿ ಅಮೆಜಾನ್ ಬೇಸಿಕ್ಸ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ (White, Copper, Anti Corrosion Coating) ಬಗ್ಗೆ ಮಾತನಾಡುತ್ತಿದ್ದೇವೆ. ಇದು ಮಾರುಕಟ್ಟೆಯಲ್ಲಿ ಅಗ್ಗದ ಸ್ಪ್ಲಿಟ್ ಏರ್ ಕಂಡಿಷನರ್ ಎಂದೇ ಖ್ಯಾತಿ ಪಡೆದಿದೆ. ಈ ಏರ್ ಕಂಡಿಷನರ್ ಅನ್ನು ಖರೀದಿಸುವುದು ವಿಂಡೋ ಏರ್ ಕಂಡಿಷನರ್ ಅನ್ನು ಖರೀದಿಸಿದಂತೆ. ಗ್ರಾಹಕರ ಜೇಬಿಗೆ ಹೊರೆಯಾಗುವುದಿಲ್ಲ. ಈ ಏರ್ ಕಂಡಿಷನರ್ ನ ಮೂಲ ಬೆಲೆ ರೂ 49,000. ಆದರೆ ಅದರ ಮೇಲೆ 47% ರಷ್ಟು ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುತ್ತಿದೆ. ಹೀಗಾಗಿ ಗ್ರಾಹಕರು ಇದನ್ನು ಖರೀದಿಸಲು ಕೇವಲ 25,990 ರೂಗಳನ್ನು ಪಾವತಿಸಬೇಕಾಗುತ್ತದೆ. ಅದು ಕೈಗೆಟುಕುವ ಮೊತ್ತವಾಗಿದೆ. ಈ ಮೊತ್ತದಲ್ಲಿ, ಗ್ರಾಹಕರು ಸಾಮಾನ್ಯವಾಗಿ ವಿಂಡೋ ಹವಾನಿಯಂತ್ರಣಗಳನ್ನು ಮಾತ್ರ ಖರೀದಿಸಿತ್ತಾರೆ. ಆದರೆ ಈ ಬಾರಿ ಶ್ರೀಮಂತ ಲುಕ್ ನೀಡುವ ಎಸಿಯನ್ನು ಕಡಿಮೆ ಬೆಲೆಗೆ ನೀವು ಖರೀದಿಸಬಹುದು.
ಇದನ್ನೂ ಓದಿ: ಶಿಯೋಮಿ ಕಂಪೆನಿಯ ಜನಪ್ರಿಯ ಉಪ ಬ್ರ್ಯಾಂಡ್ 'Poco F5'
ವಿಶೇಷತೆ:
ಈ ಸ್ಪ್ಲಿಟ್ ಎಸಿ 1 ಟನ್ ಸಾಮರ್ಥ್ಯದೊಂದಿಗೆ ಬರುತ್ತದೆ.ಆದ್ದರಿಂದ ಇದು ಕೆಲವೇ ನಿಮಿಷಗಳಲ್ಲಿ ನಿಮ್ಮ ಕೋಣೆಯನ್ನು ತಂಪಾಗಿಸುತ್ತದೆ. ಈ ಏರ್ ಕಂಡಿಷನರ್ ನಾನ್ ಇನ್ವರ್ಟರ್ ಕಂಪ್ರೆಂಸರನ್ನು ಹೊಂದಿದೆ. ಇದಕ್ಕೆ 3 ಸ್ಟಾರ್ BEE ರೇಟಿಂಗ್ ನೀಡಲಾಗಿದೆ. ಇನ್ನು 3.56ರಷ್ಟು ಹೆಚ್ಚು ವಿದ್ಯುತ್ ಉಳಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಈ ಏರ್ ಕಂಡಿಷನರ್, ಈ ಹವಾನಿಯಂತ್ರಣವು ಲಿವಿಂಗ್ ರೂಂಗೆ ಕೂಡ ಬೆಸ್ಟ್, ಉತ್ತಮವಾಗಿ ತಂಪು ಗಾಳಿಯನ್ನು ಈ ಎಸಿ ಬೀಸುತ್ತದೆ. ಈ ಹವಾನಿಯಂತ್ರಣವು 100% ತಾಮ್ರದ ಕಂಡೆನ್ಸರ್ ಅನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ