ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಐಫೋನ್ 13..!

ಟೆಕ್ ದೈತ್ಯ ಆ್ಯಪಲ್ ನ ಮುಂಬರುವ ಐಫೋನ್ 13 ಮಾದರಿಯು ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.ಇದು ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

Written by - Zee Kannada News Desk | Last Updated : Jul 5, 2021, 08:16 PM IST
  • ಟೆಕ್ ದೈತ್ಯ ಆ್ಯಪಲ್ ನ ಮುಂಬರುವ ಐಫೋನ್ 13 ಮಾದರಿಯು ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
  • ಇದು ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಐಫೋನ್ 13..! title=
Photo Credit: Gulf News

ನವದೆಹಲಿ: ಟೆಕ್ ದೈತ್ಯ ಆ್ಯಪಲ್ ನ ಮುಂಬರುವ ಐಫೋನ್ 13 ಮಾದರಿಯು ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.ಇದು ವೈರ್‌ಲೆಸ್ ಬಡ್ ಗಳಂತೆ ಇತರ ಸಾಧನಗಳನ್ನು ಚಾರ್ಜ್ ಮಾಡುವ ಸ್ಮಾರ್ಟ್‌ಫೋನ್ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಈಗಾಗಲೇ ಈ ವಿಶೇಷ ವೈಶಿಷ್ಟ್ಯವು ಸ್ಯಾಮ್‌ಸಂಗ್‌ನಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಗಳಲ್ಲಿ ಲಭ್ಯವಿದೆ.ಶೀಘ್ರದಲ್ಲೇ ಈ ಸೌಲಭ್ಯವು ಆ್ಯಪಲ್ ಐಫೋನ್ ಬಳಕೆದಾರರಿಗೂ ಲಭ್ಯವಾಗಲಿದೆ.ಜೊತೆಗೆ ಈಗಾಗಲೇ ಐಫೋನ್ 12ರ ಸರಣಿಯಲ್ಲಿ ಲಭ್ಯವಿರುವ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವು ಐಫೋನ್ 13 ರಲ್ಲಿಯೂ ದೊರಕಲಿದೆ.

ಇದನ್ನೂ ಓದಿ: 10 ವರ್ಷ ಹಳೆಯ ವಿನ್ಯಾಸದಲ್ಲಿ ಐಫೋನ್ 12! ಬೆಲೆ ಐಫೋನ್ 11ಕ್ಕಿಂತ ಕಡಿಮೆಯಿರಬಹುದು

ಈ ಮ್ಯಾಗ್‌ಸೇಫ್‌ನ ವಿಶೇಷತೆಯು ಐಫೋನ್ ಮಾದರಿಯ ಫೋನ್‌ಗಳಿಗೆ ವೇಗವರ್ಧಿತ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಮ್ಯಾಗ್‌ಸೇಫ್ ಐಫೋನ್ 12ರ ಗಾಜಿನ ಹಿಂಭಾಗದಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್ ಅನ್ನು ಬಳಸಲಾಗುತ್ತದೆ.

ವೈನ್‌ಬಾಚ್‌ನ ವರದಿಯ ಪ್ರಕಾರ, ಮುಂಬರುವ ಐಫೋನ್ 13 (Apple iPhone)  ಮಾದರಿಗಳು ದೊಡ್ಡ ವೈರ್‌ಲೆಸ್ ಚಾರ್ಜಿಂಗ್ ಕಾಯಿಲ್‌ನೊಂದಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.ಇದು ಮೂಲತಃ ವೇಗವಾಗಿ ಚಾರ್ಜಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.ಮತ್ತೊಂದು ವರದಿಯ ಪ್ರಕಾರ ಐಫೋನ್ 13 ಸರಣಿಯಲ್ಲಿನ ಆಯಸ್ಕಾಂತಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ.ಏಕೆಂದರೆ ಕೆಲವು ಬಳಕೆದಾರರು ತಮ್ಮ ಕೈಯಲ್ಲಿ ಐಫೋನ್ ಅನ್ನು ಸುರಕ್ಷಿತವಾಗಿ ಹಿಡಿದುಕೊಳ್ಳುವಷ್ಟು ಅನುಕೂಲಕರವಾಗಿಲ್ಲವೆಂದು ದೂರಿದ್ದರು ಎನ್ನಲಾಗಿದೆ.

ಇದನ್ನೂ ಓದಿ: World's Smallest 4G Smartphone: ಅನಾವರಣಗೊಂಡ ವಿಶ್ವದ ಅತ್ಯಂತ ಚಿಕ್ಕ 4G ಸ್ಮಾರ್ಟ್ಫೋನ್ Money Mist

ಏರ್‌ಪಾಡ್‌ಗಳಂತಹ ಉಪಕರಣಗಳಿಗೆ ರಿವರ್ಸ್ ಚಾರ್ಜಿಂಗ್ ಅನ್ನು ಮತ್ತಷ್ಟು ಬೆಂಬಲಿಸಲು ಆ್ಯಪಲ್ ದೊಡ್ಡ ಕಾಯಿಲ್ ಗಾತ್ರದೊಂದಿಗೆ ಬರಬಹುದು ಎನ್ನಲಾಗುತ್ತಿದೆ.

ಇದಲ್ಲದೆ ಕಂಪನಿಯ ಮುಂಬರುವ ಐಫೋನ್ 13 ಅಥವಾ ಹೊಸ ಐಫೋನ್ 12 s ಸರಣಿಯಲ್ಲಿ ಆ್ಯಪಲ್ ನ iOS 15 ಗ್ರಾಹಕರ ಬಳಕೆಗೆ ಲಭ್ಯವಾಗಲಿದೆ. ಹೊಸ ತಲೆಮಾರಿನ ಸ್ಮಾರ್ಟ್‌ಫೋನ್ ಚಿಪ್‌ಸೆಟ್‌ಗಳು, ಉತ್ತಮ ಬ್ಯಾಟರಿ ಸಾಮರ್ಥ್ಯಗಳು, ಹೆಚ್ಚಿನ ರಿಫ್ರೆಶ್ ರೇಟ್ ಮತ್ತು ಸ್ಪೀಕರ್ ಗ್ರಿಲ್ ಸೇರಿದಂತೆ ಇನ್ನಿತರ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಆ್ಯಪಲ್ ಕಂಪನಿಯು ಈ ಐಫೋನ್ ಮಾದರಿಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News