ಪೋರ್ಟಬಲ್ ಇನ್ವರ್ಟರ್ ಫ್ಯಾನ್: ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿ ದಾಟಿದೆ. ಬೇಸಿಗೆ ಕಾಲದಲ್ಲಿ ಹೆಚ್ಚು ಕಾಡುವ ಸಮಸ್ಯೆ ಪವರ್ಕಟ್. ಪದೇ ಪದೇ ಕರೆಂಟ್ ಹೋಗುವುದರಿಂದ ಫ್ಯಾನ್, ಎಸಿ, ಕೂಲರ್ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇಂತಹ ಸಂದರ್ಭದಲ್ಲಿ ಬಿಸಿಲಿನ ಬೇಗೆಯಿಂದ ನರಳುವಂತಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಅಂತಹ ಅನೇಕ ಸಾಧನಗಳು ಲಭ್ಯವಿವೆ. ಇದರಿಂದ ನೀವು ವಿದ್ಯುತ್ ಹೋದ ನಂತರವೂ ಯಾವುದೇ ತೊಂದರೆ ಇಲ್ಲದೆ ಅವುಗಳನ್ನು ಬಳಸಬಹುದು. ಹೌದು, ಮಾರುಕಟ್ಟೆಯಲ್ಲಿ ಸಿಗುವ ಪೋರ್ಟಬಲ್ ಇನ್ವರ್ಟರ್ ಫ್ಯಾನ್ಗಳನ್ನು ವಿದ್ಯುತ್ ಇಲ್ಲದೆಯೂ ಸುಮಾರು ಗಂಟೆಗಳ ಕಾಲ ಚಲಾಯಿಸಬಹುದು. ಈ ಲೇಖನದಲ್ಲಿ ಅಂತಹ ಫ್ಯಾನ್ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಜಾಜ್ ಪಿಗ್ಮಿ ಮಿನಿ 110 ಎಂಎಂ ಫ್ಯಾನ್:
ಬಜಾಜ್ ಅತ್ಯುತ್ತಮವಾಗಿ ವಿನ್ಯಾಸಗೊಳಿಸಿದ ಚಾರ್ಜ್ ಮಾಡಬಹುದಾದ ಮಿನಿ ಫ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇದು ಪೂರ್ಣ ಚಾರ್ಜ್ನಲ್ಲಿ 4 ಗಂಟೆಗಳ ಕಾಲ ತಡೆರಹಿತವಾಗಿ ಚಲಿಸಬಹುದು. ಈ ಫ್ಯಾನ್ ಅನ್ನು ಯುಎಸ್ಬಿ ಮೂಲಕ ಚಾರ್ಜ್ ಮಾಡಲಾಗುತ್ತದೆ, ಇದು Li-Ion ಬ್ಯಾಟರಿಯನ್ನು ಹೊಂದಿದೆ. ಫ್ಯಾನ್ನಲ್ಲಿ ಕ್ಲಿಪ್ ಇದೆ, ಆದ್ದರಿಂದ ಅದನ್ನು ಎಲ್ಲಿ ಬೇಕಾದರೂ ಅಳವಡಿಸಬಹುದು. ಇದರ ಬಿಡುಗಡೆ ಬೆಲೆ ರೂ. 1,395, ಆದರೆ ಅಮೇಜಾನ್ನಲ್ಲಿ ರೂ. 1,129 ಕ್ಕೆ ಲಭ್ಯವಿದೆ. ಫ್ಯಾನ್ ಅನ್ನು ಫ್ಲಿಪ್ಕಾರ್ಟ್ನಿಂದಲೂ ಖರೀದಿಸಬಹುದು.
ಇದನ್ನೂ ಓದಿ- FASTag ರೀಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಫಿಪ್ಪಿ ಎಂಆರ್-2912 ಚಾರ್ಜ್ ಮಾಡಬಹುದಾದ ಬ್ಯಾಟರಿ ಟೇಬಲ್ ಫ್ಯಾನ್:
ಫಿಪ್ಪಿ ಎಂಆರ್-2912 ಚಾರ್ಜ್ ಮಾಡಬಹುದಾದ ಬ್ಯಾಟರಿ ಟೇಬಲ್ ಫ್ಯಾನ್ನ ವಿಶೇಷತೆಯೆಂದರೆ ಅದನ್ನು ಗೋಡೆಯ ಮೇಲೆ ಅಳವಡಿಸಬಹುದಾಗಿದೆ. ಅಡುಗೆಮನೆಯಲ್ಲಿ ಹೆಚ್ಚಿನ ಶಾಖ ಇದ್ದರೆ, ಅದನ್ನು ಅಲ್ಲಿಯೂ ಅಳವಡಿಸಬಹುದು. ನಿಮ್ಮ ಕಛೇರಿ, ಮಲಗುವ ಕೋಣೆ, ಲಿವಿಂಗ್ ರೂಂ ಅಥವಾ ಊಟದ ಕೋಣೆಯಲ್ಲಿಯೂ ಸಹ ನೀವು ಇದನ್ನು ಸುಲಭವಾಗಿ ಬಳಸಬಹುದು.
ಇದನ್ನೂ ಓದಿ- Google's Action: ಸುಮಾರು 9 ಲಕ್ಷ ಆ್ಯಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧಾರ, ನೀವೂ ಇನ್ಸ್ಟಾಲ್ ಮಾಡಿದ್ದರೆ ಹುಷಾರ್
ಈ ಫ್ಯಾನ್ ಯುಎಸ್ಬಿ ಮೂಲಕ ಚಾರ್ಜ್ ಆಗುತ್ತದೆ ಮತ್ತು ಕರೆಂಟ್ ಇಲ್ಲದೆಯೂ ಸುಮಾರು 9 ಗಂಟೆಗಳ ಕಾಲ ಚಲಿಸುತ್ತದೆ ಎನ್ನಲಾಗಿದೆ. ಈ ಫ್ಯಾನ್ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಫ್ಯಾನ್ನ ಲಾಂಚ್ ಬೆಲೆ ರೂ. 3,999 ಆಗಿದ್ದರೂ, ಇದನ್ನು ಅಮೆಜಾನ್ನಿಂದ ರೂ 3,299 ಗೆ ಖರೀದಿಸಬಹು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.