Google Maps: ಓವರ್ ಸ್ಪೀಡ್ ಚಲನ್ ತಪ್ಪಿಸಲು ಇಂದೇ ಈ ಸರಳ ಸೆಟ್ಟಿಂಗ್‌ಗಳನ್ನು ಬದಲಾಯಿಸಿ

Google Maps: ನೀವು ನಿಮ್ಮ ಕಾರ್ ಡ್ರೈವಿಂಗ್ ಅನುಭವವನ್ನು ಸುಧಾರಿಸಲು ಗೂಗಲ್ ಮ್ಯಾಪ್ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮಾತ್ರವಲ್ಲ, ಇದು ಓವರ್ ಸ್ಪೀಡ್ ಚಲನ್ ತಪ್ಪಿಸಲು ಕೂಡ ನಿಮಗೆ ಸಹಾಯಕ ಎಂದು ಸಾಬೀತುಪಡಿಸಬಹುದು. 

Written by - Yashaswini V | Last Updated : Jan 3, 2024, 11:02 AM IST
  • ಗೂಗಲ್ ಮ್ಯಾಪ್ ಎರಡು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದ್ದು ಅದು ನಿಮಗೆ ವೇಗದ ಚಲನ್‌ಗಳನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
  • ಗೂಗಲ್ ಮ್ಯಾಪ್ ನ ಆ ಎರಡು ಪ್ರಮುಖ ವಿಷಯಗಳೆಂದರೆ ಸ್ಪೀಡೋಮೀಟರ್ ಮತ್ತು ಲೈವ್ ಸ್ಪೀಡ್ ಲಿಮಿಟ್.
Google Maps: ಓವರ್ ಸ್ಪೀಡ್ ಚಲನ್ ತಪ್ಪಿಸಲು ಇಂದೇ ಈ ಸರಳ ಸೆಟ್ಟಿಂಗ್‌ಗಳನ್ನು ಬದಲಾಯಿಸಿ  title=

Google Maps: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಬಹುತೇಕ ಜನರಿಗೆ  ಯಾವುದೇ ಗೊತ್ತಿಲ್ಲದ ವಿಚಾರದ ಬಗ್ಗೆ ತಿಳಿಯಬೇಕೆಂದರೆ ಅವರಿಗೆ ಮೊದಲು ನೆನಪಾಗುವುದೇ ಗೂಗಲ್. ಗೂಗಲ್ ಪ್ರತಿಯೊಬ್ಬರಿಗೂ ಪ್ರತಿ ವಿಷಯದಲ್ಲಿಯೂ ಸಹಾಯ ಮಾಡುವ ಅಪ್ಲಿಕೇಶನ್ ಆಗಿದೆ. ಸಾಮಾನ್ಯವಾಗಿ, ಜನರು ವೇಗವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಗೂಗಲ್ ಮ್ಯಾಪ್ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಆದರೆ, ನೀವು ನಿಮ್ಮ ಕಾರ್ ಡ್ರೈವಿಂಗ್ ಅನುಭವವನ್ನು ಸುಧಾರಿಸಲು, ಗಮ್ಯಸ್ಥಾನಕ್ಕೆ ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುವ ಈ ಗೂಗಲ್ ಮ್ಯಾಪ್ ಓವರ್‌ಸ್ಪೀಡಿಂಗ್ ಚಲನ್ ತಪ್ಪಿಸಲು ಸಹ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? 

ವಾಸ್ತವವಾಗಿ, ಗೂಗಲ್ ಮ್ಯಾಪ್ ಎರಡು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದ್ದು ಅದು ನಿಮಗೆ ವೇಗದ ಚಲನ್‌ಗಳನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಗೂಗಲ್ ಮ್ಯಾಪ್ ನ ಆ ಎರಡು ಪ್ರಮುಖ ವಿಷಯಗಳೆಂದರೆ ಸ್ಪೀಡೋಮೀಟರ್ ಮತ್ತು ಲೈವ್ ಸ್ಪೀಡ್ ಲಿಮಿಟ್. 

ಇದನ್ನೂ ಓದಿ- Truecaller: ಟ್ರೂಕಾಲರ್‌ನಲ್ಲಿ ತಕ್ಷಣವೇ ಡಿಲೀಟ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ

ಸ್ಪೀಡೋಮೀಟರ್:  
ಗೂಗಲ್ ಮ್ಯಾಪ್ ನ ಈ ವೈಶಿಷ್ಟ್ಯವು ನಿಮ್ಮ ವೇಗವನ್ನು ತೋರಿಸುತ್ತಲೇ ಇರುತ್ತದೆ ಮತ್ತು ನೀವು ವೇಗದ ಮಿತಿಗಿಂತ ವೇಗವಾಗಿ ಚಾಲನೆ ಮಾಡಿದರೆ ನಿಮಗೆ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತದೆ. 

ಲೈವ್ ಸ್ಪೀಡ್ ಲಿಮಿಟ್: 
ಲೈವ್ ಸ್ಪೀಡ್ ಲಿಮಿಟ್ ವೈಶಿಷ್ಟ್ಯವು ನೈಜ ಸಮಯದಲ್ಲಿ ರಸ್ತೆಗಳಿಗೆ ವೇಗದ ಮಿತಿಗಳನ್ನು ಒದಗಿಸುತ್ತದೆ. ಇದು ವೇಗದ ಮಿತಿಗಳು ಬದಲಾಗುವ ಪ್ರದೇಶಗಳ ಕುರಿತು ನಿಮಗೆ ತಿಳಿಸುತ್ತದೆ ಮತ್ತು ವೇಗದ ಮಿತಿಯನ್ನು ಮೀರದಂತೆ ಚಾಲಕರಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ನಿಮಗೆ ಆಗಾಗ್ಗೆ ಸ್ಪೀಡ್ ಲಿಮಿಟ್ ಬಗ್ಗೆ ಎಚ್ಚರಿಕೆ ನೀಡುತ್ತಾ  ಓವರ್‌ಸ್ಪೀಡಿಂಗ್ ಚಲನ್ ತಪ್ಪಿಸಲು ಸಹಾಯಕವಾಗಲಿದೆ. 

ಇದನ್ನೂ ಓದಿ- ಡಿಜಿಟಲ್ ಸಾಲ ಎಂಬ ಕರಾಳ ಜಾಲ: ಭಾರತವನ್ನು ಕಾಡುತ್ತಿರುವ ಆತಂಕಕಾರಿ ವಾಸ್ತವದ ಅನಾವರಣ

ಒಂದೊಮ್ಮೆ ನೀವು ಕಾರ್ ಡ್ರೈವ್ ಮಾಡುವ ವೇಳೆ ಈ ಎರಡೂ ವೈಶಿಶ್ತ್ಯಾಗಳನ್ನು ಬಳಸಲು ಬಯಸಿದರೆ ಅದಕ್ಕಾಗಿ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕಾಗುತ್ತದೆ. 

* ಅದಕ್ಕಾಗಿ ಮೊದಲು ಗೂಗಲ್ ಮ್ಯಾಪ್ ಅಪ್ಲಿಕೇಶನ್ ತೆರೆಯಿರಿ. 
* ನಿಮ್ಮ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ.
* ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
* ನ್ಯಾವಿಗೇಷನ್ ಅನ್ನು ಟ್ಯಾಪ್ ಮಾಡಿ.
* ಬಳಿಕ ಡ್ರೈವಿಂಗ್ ಆಯ್ಕೆಗಳನ್ನು ಟ್ಯಾಪ್ ಮಾಡಿ.
* ಇಲ್ಲಿ ಸ್ಪೀಡೋಮೀಟರ್ ಟಾಗಲ್ ಅನ್ನು ಆನ್ ಮಾಡಿ.
* ಬಳಿಕ ಲೈವ್ ಸ್ಪೀಡ್ ಲಿಮಿಟ್ ಟಾಗಲ್ ಅನ್ನು ಆನ್ ಮಾಡಿ.

ನಿಮ್ಮ ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯಗಳನ್ನು ಆನ್ ಮಾಡಿದ ನಂತರ, ನೀವು ಸ್ಪೀಡ್ ಲಿಮಿಟ್ ಮೀರಿದಾಗ ನೀವು ಎಚ್ಚರಿಕೆಯನ್ನು ಪಡೆಯುತ್ತೀರಿ. ವೇಗದ ಚಲನ್‌ಗಳನ್ನು ತಪ್ಪಿಸಲು ಮತ್ತು ಸುರಕ್ಷಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News