ಅನಗತ್ಯ ಕರೆಗಳನ್ನು ತಪ್ಪಿಸಲು ಈ ಸಣ್ಣ ಕೆಲಸ ಮಾಡಿ

How To Activate DND: ಇತ್ತೀಚಿನ ದಿನಗಳಲ್ಲಿ ಅನಗತ್ಯ ಕರೆಗಳ ತಲೆಬಿಸಿ ಹೆಚ್ಚಾಗಿದೆ. ಸ್ಪ್ಯಾಮ್ ಅಥವಾ ಮಾರ್ಕೆಟಿಂಗ್ ಕರೆಗಳು ಬಳಕೆದಾರರಿಗೆ ತೊಂದರೆ ನೀಡುತ್ತಲೇ ಇರುತ್ತವೆ. ಆದರೆ, ಇದನ್ನು ತಪ್ಪಿಸಲು ಸಹಾಯಕವಾಗುವಂತೆ TRAI ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶವನ್ನು ನೀಡಿದೆ. ಟೆಲಿಕಾಂ ಬಳಕೆದಾರದು ಡಿಎನ್ಡಿ ಸೇವೆಯನ್ನು ಸಕ್ರಿಯಗೊಳಿಸುವ ಮೂಲಕ ಅನಗತ್ಯ ಕರೆಗಳನ್ನು ತಪ್ಪಿಸಬಹುದಾಗಿದೆ. 

Written by - Yashaswini V | Last Updated : Dec 21, 2022, 08:17 AM IST
  • ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI) ರಾಷ್ಟ್ರೀಯ ಗ್ರಾಹಕರ ಆದ್ಯತೆಯ ನೋಂದಣಿ (NCPR) ಅನ್ನು ಪ್ರಾರಂಭಿಸಿತು
  • ಈ ಹಿಂದೆ ರಾಷ್ಟ್ರೀಯ ಡೋಂಟ್ ಕಾಲ್ ರಿಜಿಸ್ಟ್ರಿ (NDNC) ಉಪಕ್ರಮವು ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸಲು ಜನರಿಗೆ ಸಹಾಯ ಮಾಡುತ್ತದೆ.
  • ಜನರು ಎಲ್ಲಾ ಟೆಲಿಮಾರ್ಕೆಟಿಂಗ್ ಸಂವಹನ ಅಥವಾ ಆಯ್ದ ವಲಯಗಳಿಂದ ಕರೆಗಳನ್ನು ನಿಲ್ಲಿಸಲು ಸೇವೆಗೆ ಸೈನ್-ಅಪ್ ಮಾಡಬಹುದು.
ಅನಗತ್ಯ ಕರೆಗಳನ್ನು ತಪ್ಪಿಸಲು ಈ ಸಣ್ಣ ಕೆಲಸ ಮಾಡಿ title=
How to avoid spam calls

How To Activate DND: ಸ್ಪ್ಯಾಮ್ ಅಥವಾ ಮಾರ್ಕೆಟಿಂಗ್ ಕರೆಗಳ ಕಿರಿಕಿರಿಯಿಂದ ಬೇಸತ್ತಿದ್ದೀರಾ.... ಇಂತಹ ಕಿರಿಕಿರಿಯಿಂದ ಬಳಕೆದಾರರಿಗೆ ಪರಿಹಾರ ನೀಡಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಳಕೆದಾರರಿಗೆ ಎಲ್ಲಾ ವಲಯಗಳಿಂದ ಎಲ್ಲಾ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳನ್ನು ನಿರ್ಬಂಧಿಸಲು ಅನುಮತಿಸುತ್ತದೆ. ಡು ನಾಟ್ ಡಿಸ್ಟರ್ಬ್ (DND) ಸೇವೆಯನ್ನು ಸಕ್ರಿಯಗೊಳಿಸುವ ಮೂಲಕ ನೀವು ಇಂತಹ ತಲೆಬಿಸಿಯನ್ನು ತಪ್ಪಿಸಬಹುದಾಗಿದೆ. 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸಾಲ, ವಿಮೆ, ಕೊಡುಗೆಗಳು ಹೀಗೆ ಅನಗತ್ಯ ಸ್ಪ್ಯಾಮ್ ಕರೆಗಳು ಬಳಕೆದಾರರಿಗೆ ತೊಂದರೆ ಉಂಟು ಮಾಡುತ್ತಿವೆ. ಟ್ರೂಕಾಲರ್ ಅಪ್ಲಿಕೇಶನ್ ಸಹಾಯದಿಂದ ಕರೆ ಸ್ವೀಕರಿಸಿದ ನಂತರ ಅನೇಕ ಜನರು ಸಂಖ್ಯೆಯನ್ನು ನಿರ್ಬಂಧಿಸುತ್ತಾರೆ. ಆದರೆ ನಂತರ ಹೊಸ ಸಂಖ್ಯೆಯಿಂದ ಕರೆ ಬರಲು ಪ್ರಾರಂಭಿಸುತ್ತದೆ. ಬಳಕೆದಾರರಿಗೆ ಈ ಸಮಸ್ಯೆಯಿಂದ ಪರಿಹಾರ ನೀಡುವ ನಿಟ್ಟಿನಲ್ಲಿ TRAI ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶವನ್ನು ನೀಡಿದೆ. ಬಳಕೆದಾರರಿಗೆ ಡಿಎನ್ಡಿ ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳನ್ನು ಕೇಳಿದೆ.

ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (TRAI) ರಾಷ್ಟ್ರೀಯ ಗ್ರಾಹಕರ ಆದ್ಯತೆಯ ನೋಂದಣಿ (NCPR) ಅನ್ನು ಪ್ರಾರಂಭಿಸಿತು, ಈ ಹಿಂದೆ ರಾಷ್ಟ್ರೀಯ ಡೋಂಟ್ ಕಾಲ್ ರಿಜಿಸ್ಟ್ರಿ (NDNC) ಉಪಕ್ರಮವು ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸಲು ಜನರಿಗೆ ಸಹಾಯ ಮಾಡುತ್ತದೆ. ಜನರು ಎಲ್ಲಾ ಟೆಲಿಮಾರ್ಕೆಟಿಂಗ್ ಸಂವಹನ ಅಥವಾ ಆಯ್ದ ವಲಯಗಳಿಂದ ಕರೆಗಳನ್ನು ನಿಲ್ಲಿಸಲು ಸೇವೆಗೆ ಸೈನ್-ಅಪ್ ಮಾಡಬಹುದು.

ಇದನ್ನೂ ಓದಿ- ಗೀಸರ್‌ನಲ್ಲಿ ಈ ಪುಟ್ಟ ಡಿವೈಸ್ ಅಳವಡಿಸಿದರೆ ಅರ್ಧದಷ್ಟು ಕಡಿಮೆ ಆಗುತ್ತೆ ಕರೆಂಟ್ ಬಿಲ್

ಸ್ಪ್ಯಾಮ್ ಅಥವಾ ಟೆಲಿಮಾರ್ಕೆಟಿಂಗ್ ಕರೆಗಳನ್ನು ತಪ್ಪಿಸುವ ವಿಧಾನಗಳು:
ಸರ್ಕಾರವು ಯಾವುದೇ ಸಂಖ್ಯೆಗೆ ಅಡಚಣೆ ಮಾಡಬೇಡಿ ಅಂದರೆ ಡು ನಾಟ್ ಡಿಸ್ಟರ್ಬ್ (DND) ಸೇವೆಯನ್ನು ಬಹಳ ಸುಲಭಗೊಳಿಸಿದೆ. DND ಸೇವೆಯನ್ನು ಎರಡು ರೀತಿಯಲ್ಲಿ ಪ್ರಾರಂಭಿಸಬಹುದು. ಒಂದು ಎಸ್ಎಂಎಸ್ ಮೂಲಕ ಮತ್ತು ಇನ್ನೊಂದು ಕರೆ ಮೂಲಕ. ಈ ಎರಡು ಸುಲಭ ವಿಧಾನಗಳಲ್ಲಿ DND ಸೇವೆಯನ್ನು ಆನ್ ಮಾಡಬಹುದು.

ಎಸ್ಎಂಎಸ್ ಮೂಲಕ DND ಸೇವೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
>> ಇದಕ್ಕಾಗಿ ಮೊದಲು ನೀವು ಸಂದೇಶ ಅಪ್ಲಿಕೇಶನ್‌ಗೆ ಹೋಗಬೇಕು.
>> ಸಂದೇಶ ಪೆಟ್ಟಿಗೆಯಲ್ಲಿ START ಎಂದು ಟೈಪ್ ಮಾಡಿ.
>> ಈಗ ಈ ಸಂದೇಶವನ್ನು 1909 ಗೆ ಕಳುಹಿಸಿ.
>> ನಿಮ್ಮ ಟೆಲಿಕಾಂ ಸೇವಾ ಪೂರೈಕೆದಾರರು ನಿಮ್ಮ ವಿನಂತಿಯನ್ನು ದೃಢೀಕರಿಸುವ ಸಂದೇಶವನ್ನು ಕಳುಹಿಸುತ್ತಾರೆ. 
>> DND ಸೇವೆಯು 24 ಗಂಟೆಗಳ ಒಳಗೆ ಪ್ರಾರಂಭವಾಗುತ್ತದೆ.

ಇದನ್ನೂ ಓದಿ- WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್‌ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ!

ಕರೆ ಮಾಡುವ ಮೂಲಕ DND ಸೇವೆಯನ್ನು ಸಕ್ರಿಯಗೊಳಿಸುವುದು ಹೇಗೆ?
* ಮೊದಲು ಡಯಲರ್ ಅಪ್ಲಿಕೇಶನ್ ತೆರೆಯಿರಿ.
* 1909 ಗೆ ಕರೆ ಮಾಡಿ.
*  ನೀವು ಕೆಲವು ಸೂಚನೆಗಳನ್ನು ಅನುಸರಿಸಬೇಕು.
* ಇದನ್ನು ಮಾಡಿದ ನಂತರ, DND ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ. 

ಇದಲ್ಲದೆ ನೀವು ನಿಮ್ಮ ಟೆಲಿಕಾಂ ಸೇವಾ ನಿರ್ವಾಹಕರ ಮೂಲಕವೂ DND ಅನ್ನು ನೋಂದಾಯಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News