InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ

InspectIR: ಇನ್ಮುಂದೆ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೋವಿಡ್ -19 ಅನ್ನು ಪತ್ತೆಹಚ್ಚಬಹುದು. ಇದಕ್ಕಾಗಿ, ಎಫ್‌ಡಿಎ ಸಾಧನವೊಂದರ ತುರ್ತು ಬಳಕೆಗೆ ಅನುಮತಿ ನೀಡಿದೆ, ತನ್ಮೂಲಕ ಕರೋನವೈರಸ್ ಅನ್ನು ಉಸಿರಾಟದ ಮೂಲಕ ಪರೀಕ್ಷಿಸಬಹುದು.  

Written by - Nitin Tabib | Last Updated : Apr 15, 2022, 02:43 PM IST
  • ಇನ್ಮುಂದೆ ಕೇವಲ ಮೂರೇ ನಿಮಿಷಗಳಲ್ಲಿ ಕೊರೊನಾ ಪರೀಕ್ಷೆ
  • ಉಸಿರಾಟದ ಮೂಲಕ ನಡೆಯಲಿದೆ ಈ ಪರೀಕ್ಷೆ
  • ತುರ್ತು ಬಳಕೆಗ ಅನುಮೋದನೆ ನೀಡಿದ US FDA
InspectIR: ಈ ಡಿವೈಸ್ ಮೂಲಕ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೊರೊನಾ ಟೆಸ್ಟ್ ನಡೆಸಿ title=
Covid 19 Test In Just Three Minutes

InspectIR COVID-19 Breathalyzer: US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಉಸಿರಾಟದ ಮೂಲಕ ಕೋವಿಡ್ -19 ಅನ್ನು ಪತ್ತೆಹಚ್ಚುವ ಸಾಧನವೊಂದರ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಸಾಧನವನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಕೇಂದ್ರಗಳಲ್ಲಿ ಬಳಸಬಹುದಾಗಿದೆ. ಈ ಸಾಧನದ ಸಹಾಯದಿಂದ, ಕೆಲವೇ ನಿಮಿಷಗಳಲ್ಲಿ ಕರೋನಾ ವೈರಸ್ ಅನ್ನು ಪರೀಕ್ಷಿಸಬಹುದು.
ಮೂರೇ ನಿಮಿಷಗಳಲ್ಲಿ ಕೊರೊನಾ ಪರೀಕ್ಷೆ ನಡೆಯಲಿದೆ

ಮಾಹಿತಿಯ ಪ್ರಕಾರ, ಈ ಸಾಧನದ ಹೆಸರು InspectIR COVID-19 Breathalyzer. ಇದನ್ನು ಕ್ಲಿನಿಕ್‌ಗಳು, ಆಸ್ಪತ್ರೆಗಳು ಮತ್ತು ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಬಳಸಬಹುದು. ಇದರಿಂದ ಕೇವಲ ಮೂರೇ ನಿಮಿಷಗಳಲ್ಲಿ ತನಿಖಾ ವರದಿ ಬರುತ್ತದೆ. ಪರವಾನಗಿ ಪಡೆದ ಮತ್ತು ಆರೋಗ್ಯ ರಕ್ಷಣೆ ಒದಗಿಸುವವರ ಮೇಲ್ವಿಚಾರಣೆಯಲ್ಲಿ ಮಾತ್ರ ಇದನ್ನು ಬಳಸಬಹುದಾಗಿದೆ.

ಇದನ್ನೂ ಓದಿ-Horn On Women Chest: ಮಹಿಳೆಯ ಶರೀರದ ಮೇಲೆ ಬೆಳೆದ ಕೊಂಬುಗಳು, ಕಂಡು ಬೆಚ್ಚಿಬಿದ್ದ ವೈದ್ಯರು

ಮತ್ತಷ್ಟು ಸುಲಭವಾದ ಕೊರೊನಾ ವೈರಸ್ ಪರೀಕ್ಷೆ
ಎಫ್‌ಡಿಎಯ 'ಸೆಂಟರ್ ಫಾರ್ ಡಿವೈಸಸ್ ಅಂಡ್ ರೇಡಿಯೊಲಾಜಿಕಲ್ ಹೆಲ್ತ್'ನ ನಿರ್ದೇಶಕ ಡಾ. ಜೆಫ್ ಶುರೆನ್ ಹೇಳುವ ಪ್ರಕಾರ, ಇದು ಕೋವಿಡ್-19 ಗಾಗಿ ಕ್ಲಿನಿಕಲ್ ಪ್ರಯೋಗಗಳಲ್ಲಿ ಹೊಸತನದ ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ. ಇದರಿಂದ ಕೊರೊನಾ ವೈರಸ್ ಪರೀಕ್ಷೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಕೋವಿಡ್ -19 ರ ಸಂದರ್ಭದಲ್ಲಿ, ಇದು ಮಹತ್ವದ ಯಶಸ್ಸಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

99.3 ರಷ್ಟು ನಿಖರ ಫಲಿತಾಂಶಗಳನ್ನು ನೀಡುತ್ತದೆ
ಕರೋನವೈರಸ್ ಸೋಂಕಿತ ಮಾದರಿಗಳನ್ನು ಗುರುತಿಸುವ ಮೂಲಕ ಸಾಧನವು ಶೇ.91.2 ರಷ್ಟು ನಿಖರವಾದ ಫಲಿತಾಂಶಗಳನ್ನು ಮತ್ತು ನಕಾರಾತ್ಮಕ ಮಾದರಿಗಳನ್ನು ಗುರುತಿಸುವ ಮೂಲಕ ಶೇ.99.3 ರಷ್ಟು ನಿಖರ ಫಲಿತಾಂಶಗಳನ್ನು ನೀಡಿದೆ ಎಂದು FDA ಗುರುವಾರ ಹೇಳಿದೆ. ಈ ಉಪಕರಣದ ಮೂಲಕ ಪ್ರತಿದಿನ 160 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದು ನಂತರ ಹೆಚ್ಚಾಗುವ ನಿರೀಕ್ಷೆ ಇದ್ದು, ಒಂದು ತಿಂಗಳಿಗೆ 64,000 ಮಾದರಿಗಳನ್ನು ಪರೀಕ್ಷಿಸಲು ಇದರಿಂದ ಸಾಧ್ಯವಾಗಲಿದೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News