ವಾಷಿಂಗ್ಟನ್: Jeff Bezos Predictions - ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ನಗರಗಳು ಸ್ಥಾಪನೆಗೊಂಡು ನಂತರ ಬಾಹ್ಯಾಕಾಶದಲ್ಲಿ ಹುಟ್ಟಿದವರು ವಿಹಾರಕ್ಕಾಗಿ ಅಥವಾ ತಮ್ಮ ರಜಾದಿನಗಳನ್ನು ಕಳೆಯಲು ಭೂಮಿಗೆ (Earth)ಬರಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್ ಸಂಸ್ಥಾಪಕ ಮತ್ತು ಬಿಲಿಯನೇರ್ ಜೆಫ್ ಬೆಜೋಸ್ (Amazon Founder Jeff Bezos) ಹೇಳಿದ್ದಾರೆ.
ಮನುಷ್ಯ ಬಾಹ್ಯಾಕಾಶದಲ್ಲಿ (Space) ಹುಟ್ಟುತ್ತಾನೆ
ನಾವು ಉದ್ಯಾನವನಕ್ಕೆ ಹೇಗೆ ಹೋಗುತ್ತೇವೆಯೋ ಅದೇ ರೀತಿ ಬಾಹ್ಯಾಕಾಶದಲ್ಲಿ ಹುಟ್ಟಿದ ವ್ಯಕ್ತಿಯೂ ಭೂಮಿಗೆ ವಿಹಾರಕ್ಕಾಗಿ ಬರಲಿದ್ದಾನೆ ಎಂದು ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ (Jeff Bezos) ಭವಿಷ್ಯ ನುಡಿದಿದ್ದಾರೆ. ವಾಷಿಂಗ್ಟನ್‌ನಲ್ಲಿ ಕಂಪನಿಯ ಯೋಜನೆಗಳು, ಬಾಹ್ಯಾಕಾಶ ಪರಿಶೋಧನೆ ಮತ್ತು ಭೂಮಿಯನ್ನು ಉಳಿಸುವುದು ಮುಂತಾದ ವಿಷಯಗಳ ಕುರಿತು ಮಾತನಾಡಿರುವ ಜೆಫ್ ಬೆಜೋಸ್, ಬ್ಲೂ ಒರಿಜಿನ್‌ನ ಭವಿಷ್ಯದ ಕುರಿತು ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬಾಹ್ಯಾಕಾಶದಲ್ಲಿ ತೇಲುವ ಮನೆಗಳು
ಅಂತರಿಕ್ಷದಲ್ಲಿ ಮನುಷ್ಯರು ನೆಲೆಸಲು ಅಲ್ಲಿನ ಮನೆಗಳು ಒಂದು ರೀತಿಯಲ್ಲಿ ತೇಲಾಡುವ ಮನೆಗಳಂತೆ ಇರಲಿವೆ ಎಂದಿದ್ದಾರೆ. ಮಾನವರನ್ನು ಅಲ್ಲಿಗೆ ನೆಲೆಸುವಂತೆ ಮಾಡಲು ಭೂಮಿಯ ಹವಾಮಾನ ಮತ್ತು ಗುರುತ್ವಾಕರ್ಷಣೆಯನ್ನು ನಕಲು ಮಾಡಲಾಗುವುದು. ಈ ತೇಲುವ ಮನೆಗಳಲ್ಲಿ ಒಂದು ಮಿಲಿಯನ್ ಜನರು ವಾಸಿಸಲು ಸಾಧ್ಯವಾಗಳಿವೆ ಮತ್ತು ಅಲ್ಲಿ ನದಿಗಳು, ಕಾಡುಗಳು ಮತ್ತು ವನ್ಯಜೀವಿಗಳೂ ಇರಲಿವೆ ಎಂದು ಬೆಜೋಸ್ ಹೇಳಿದ್ದಾರೆ.
ರಜಾದಿನಗಳಿಗಾಗಿ ಮಾನವರು ಭೂಮಿಗೆ ಬರಲಿದ್ದಾರೆ
ಈ ಕುರಿತು ಮಾತನಾಡಿರುವ ಬೆಜೋಸ್, 'ಶತಮಾನಗಳವರೆಗೆ ಜನರು ಬಾಹ್ಯಾಕಾಶದಲ್ಲಿ (Space News) ಜನಿಸಲಿದ್ದಾರೆ ಮತ್ತು ಬಾಹ್ಯಾಕಶದ ಮನೆ ಅವರ ಮೊದಲ ಮನೆಯಾಗಲಿದೆ. ಅವರು ಈ ಬಾಹ್ಯಾಕಾಶ ವಸಾಹತುಗಳಲ್ಲಿ ಜನಿಸುತ್ತಾರೆ, ನಂತರ ಅವರು ಭೂಮಿಗೆ ಪ್ರಯಾಣಿಸುತ್ತಾರೆ. ಜನರು ರಜೆಗಾಗಿ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ರೀತಿಯಲ್ಲಿ ಇದು ಇರಲಿದೆ' ಎಂದಿದ್ದಾರೆ.
ಯಾವುದೇ ಒಂದು ಬೇರೆ ಗ್ರಹಕ್ಕೆ (New Planet) ಹೋಗಿ ಅಲ್ಲಿ ತಮ್ಮ ಜೀವನವನ್ನು ಆರಂಭಿಸುವ ಬದಲು ಜನರು ಈ ಬಾಹ್ಯಾಕಾಶದ ವಸಾಹತುಗಳಲ್ಲಿ (Space Colonies) ವಾಸಿಸುವುದು ಉತ್ತಮ ಎಂದು ಜೆಫ್ ಬೆಜೋಸ್ ಹೇಳುತ್ತಾರೆ.
ಇದನ್ನೂ ಓದಿ - Asteroid: ಭೂಮಿಯತ್ತ ಧಾವಿಸುತ್ತಿದೆ ಭಯಾನಕ ಅಪಾಯ, ಅಲರ್ಟ್ ಘೋಷಿಸಿದ NASA
ಮಂಗಳ (Mars) ಗ್ರಹವನ್ನು ಇದಕ್ಕಾಗಿ ಆಯ್ಕೆ ಮಾಡಿ ಅದನ್ನು ಬದಲಾಯಿಸಿದರೆ ಅಥವಾ ಈ ರೀತಿಯ ನಾಟಕೀಯವಾಗಿ ಏನಾದರೂ ಮಾಡಿದರೆ (Mars Mission) ಅದು ತುಂಬಾ ಸವಾಲಿನ ಸಂಗತಿಯಾಗಿ ಪರಿಣಮಿಸಲಿದೆ ಎಂದು ಜೆಫ್ ಬೆಜೋಸ್ ಹೇಳಿದ್ದಾರೆ.
ಇದನ್ನೂ ಓದಿ-ಗ್ರಾಮೀಣ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು ಮುಂದಾದ ಎಲೋನ್ ಮಾಸ್ಕ್?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ