ನವದೆಹಲಿ: Jio New Smartphone - ಬರುವ ದೀಪಾವಳಿಯಿಂದ (Diwali 2021) JioPhone Next ದೇಶಾದ್ಯಂತದ ಅಂಗಡಿಗಳಲ್ಲಿ ಲಭ್ಯವಿರಲಿದೆ ಎಂದು ರಿಲಯನ್ಸ್ ಜಿಯೋ ಹಾಗೂ ಗೂಗಲ್ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿವೆ. ಕಂಪನಿ ಈ ಫೋನ್ ಅನ್ನು ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ ಈ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಲಭ್ಯವಿರಿಸಲಾಗುವುದು ಎಂದೂ ಕೂಡ ಕಂಪನಿ ಹೇಳಿದೆ.
ಸುಲಭ ಕಂತುಗಳಲ್ಲಿಯೂ ಕೂಡ ನೀವು ಈ ಫೋನ್ (Jio Mobiles) ಅನ್ನು ಖರೀದಿಸಬಹುದು
ಗ್ರಾಹಕರು 'Jiophone Next' ಸ್ಮಾರ್ಟ್‌ಫೋನ್ ಅನ್ನು ಕಂತುಗಳಲ್ಲಿಯೂ ಸಹ ಖರೀದಿಸಬಹುದು ಎಂದು ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಫೋನ್ ಅನ್ನು ಕಂತುಗಳಲ್ಲಿ ಖರೀದಿಸಲು ಗ್ರಾಹಕರು ಆರಂಭದಲ್ಲಿ ರೂ 1,999 ಪಾವತಿಸಬೇಕಾಗುತ್ತದೆ ಮತ್ತು ಉಳಿದ ಮೊತ್ತವನ್ನು 18 ರಿಂದ 24 ತಿಂಗಳ ಕಂತುಗಳಲ್ಲಿ ಪಾವತಿಸಬಹುದು. ಈ ಕುರಿತು ಜಂಟಿ ಹೇಳಿಕೆ ನೀಡಿರುವ 'ಕಡಿಮೆ ಬೆಲೆಯ ಫೋನ್ ಅನ್ನು ಕಂತುಗಳ ಮೂಲಕ ಖರೀದಿಸುವ ಆಯ್ಕೆಯನ್ನು ನೀಡುತ್ತಿರುವುದು ಇದೇ ಮೊದಲು. ಈ ಆಯ್ಕೆಯು ಫೋನ್‌ನ ಖರೀದಿ ಬೆಲೆಯನ್ನು ಕೈಗೆಟುಕುವಂತೆ ಮಾಡುತ್ತದೆ ಮತ್ತು ಸಾಮಾನ್ಯ ಫೋನ್‌ನ ಬೆಲೆಗೆ ಇದು ಸಮನಾಗಿರುತ್ತದೆ' ಎಂದು ತಿಳಿಸಿದೆ.
ಇದನ್ನೂ ಓದಿ-ದೀಪಾವಳಿಗೆ ಬಿಡುಗಡೆಯಾಗಲಿದೆ JioPhone Next, ಕೇವಲ 10% ಪಾವತಿಸಿ ಖರೀದಿಸಿ ಅಗ್ಗದ 4G ಸ್ಮಾರ್ಟ್ ಪೋನ್
ಇಂಟರ್ನೆಟ್ ಬಳಿಕ ಇದೀಗ ಸ್ಮಾರ್ಟ್ ಫೋನ್ ಕ್ರಾಂತಿಗೆ ಮುಂದಾದ ಜಿಯೋ (Jio Mobile Launch)
ಕಂಪನಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ ಅನ್ನು ಕ್ವಾಲ್ಕಾಮ್ ಚಿಪ್‌ಸೆಟ್ (Qualcomm Chipset) ಒಳಗೊಂಡಿದೆ ಮತ್ತು ದೇಶಾದ್ಯಂತ ಎಲ್ಲಾ ಜಿಯೋಮಾರ್ಟ್ ಡಿಜಿಟಲ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಈ ಫೋನ್ ಅನ್ನು ಪ್ರಕಟಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, 'ಭಾರತೀಯರಿಗೆ ಹಬ್ಬದ ಋತುವಿನಲ್ಲಿ ಗೂಗಲ್ ಮತ್ತು ಜಿಯೋ ತಂಡಗಳು ಈ ಫೋನ್ ಅನ್ನು ಸಮಯಕ್ಕೆ ನೀಡುವಲ್ಲಿ ಯಶಸ್ವಿಯಾಗಿವೆ ಎಂಬುದನ್ನು ಪ್ರಕಟಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ (Covid-19 Pandemic) ರೋಗದಿಂದಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಸವಾಲುಗಳ ಹೊರತಾಗಿಯೂ ನಾವು ಈ ಫೋನ್ ತರುವಲ್ಲಿ ಯಶಸ್ವಿಯಾಗಿದ್ದೇವೆ. 135 ಕೋಟಿ ಭಾರತೀಯರ ಜೀವನವನ್ನು ಶ್ರೀಮಂತಗೊಳಿಸಲು, ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಡಿಜಿಟಲ್ ಕ್ರಾಂತಿಯ ಶಕ್ತಿಯಲ್ಲಿ ನಾವು ಆಳವಾಗಿ ನಂಬಿಕೆ ಹೊಂದಿದ್ದೇವೆ. ಮೊದಲು ನಾವು ಇದನ್ನು ಇಂಟರ್ನೆಟ್ ಮೂಲಕ ಮಾಡಿದ್ದು, ಈ ಬಾರಿ ಅದೇ ಕ್ರಾಂತಿಯನ್ನು ನಾವು ಸ್ಮಾರ್ಟ್‌ಫೋನ್ ಮೂಲಕ ಮಾಡುತ್ತೇವೆ' ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್
ಕಂಪನಿ ತನ್ನ ಸ್ಮಾರ್ಟ್ ಫೋನ್ ಅನ್ನು ವಿಶ್ವದ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಆಗಿದೆ ಎಂದು ಹೇಳಿಕೊಂಡಿದೆ. 10 ವಿವಿಧ ಭಾಷೆಗಳ ಸಪೋರ್ಟ್ ನೊಂದಿಗೆ ಈ ಫೋನ್ ಲಾಂಚ್ ಆಗುತ್ತಿದೆ. ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು ಕೂಡ ತುಂಬಾ ಆಕರ್ಷಕವಾಗಿದ್ದು, ಇತರ ಸ್ಮಾರ್ಟ್ ಫೋನ್ ಗಳೊಂದಿಗೆ ಪೈಪೋಟಿಗಾಗಿ ಅದನ್ನು ಸಿದ್ಧಗೊಳಿಸುತ್ತವೆ.
ಇದನ್ನೂ ಓದಿ-ಅತ್ಯಂತ ಕಡಿಮೆ ದರದ smartphone ಖರೀದಿಸಬೇಕೇ ? ಈ ದಿನದಿಂದ ಆರಂಭವಾಗಲಿದೆ jioPhone Next ಪ್ರಿ ಬುಕಿಂಗ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ