Poor Sleeping Habit Causes Risk Of Death - ಪರಿಪೂರ್ಣ ನಿದ್ರೆ (Sound Sleep) ಮನುಷ್ಯರ ಶರೀರದ ಅವಶ್ಯಕತೆ. ವೈದ್ಯರೂ ಕೂಡ ಒರ್ವ ಸಾಮಾನ್ಯ ವ್ಯಕ್ತಿಗೆ ಸುಮಾರು 6 ರಿಂದ 8 ಗಂಟೆಗಳ ನಿದ್ರೆ ಮಾಡಲು ಸಲಹೆ ನೀಡುತ್ತಾರೆ. ಪರಿಪೂರ್ಣ ನಿದ್ರೆಯಿಂದ ಬಾಡಿ ಕ್ಲಾಕ್ (Body Clock) ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ನಮ್ಮ ಸಂಪೂರ್ಣ ಜೀವನಶೈಲಿಯ ಮೇಲೆ ಗಾಢ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ನಮಗೆ ರಾತ್ರಿಯ ಹೊತ್ತು ಸರಿಯಾಗಿ ನಿದ್ರೆ ಬಾರದೆಹೋದಲ್ಲಿ ಅದು ಹಲವು ರೀತಿಯ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಕುರಿತು ಇತ್ತೀಚೆಗೆ ನಡೆಸಲಾಗಿರುವ ಸಂಶೋಧನೆಯ ಪ್ರಕಾರ, ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡದೆ ಇರುವ ಜನರಲ್ಲಿ ಡಿಮೆನ್ಸಿಯಾ (Dementia) ಕಾಯಿಲೆ ಬರುವ ಅಪಾಯ ಹೆಚ್ಚಾಗಿರುತ್ತದೆ ಎನ್ನಲಾಗಿದೆ. ಇದಲ್ಲದೆ ಕಡಿಮೆ ನಿದ್ರೆಯಿಂದ ನಮ್ಮ ಬಾಡಿ ಕ್ಲಾಕ್ ಕೂಡ ಪ್ರಭಾವಕ್ಕೆ ಒಳಗಾಗುತ್ತದೆ. ಇದರಿಂದ ಉಂಟಾಗುವ ಕೆಲ ಕಾರಣಗಳಿಂದ ಸಾವು ಕೂಡ ಸಂಭವಿಸುವ ಸಾದ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಆಫ್ ಮೆಡಿಸಿನ್ (Harward Medical School Of Medicine) ನ ಇನ್ಸ್ಟ್ರುಕ್ಟರ್ ರೆಬಿಕಾ ರಾಬಿನ್ಸನ್, ಪ್ರತಿ ರಾತ್ರಿ ನಿದ್ರೆ ಮಾಡುವುದು ನಮ್ಮ ಶರೀರಕ್ಕೆ ತುಂಬಾ ಆವಶ್ಯಕವಾಗಿದೆ ಎಂಬುದು ಅಧ್ಯಯನದಿಂದ ಸಾಬೀತಾಗುತ್ತದೆ. ಪರಿಪೂರ್ಣ ನಿದ್ರೆಯಿಂದ ನಮ್ಮ ನ್ಯೂರಾಲಾಜಿಕಲ್ ಸಿಸ್ಟಂ ಸುಧಾರಿಸುತ್ತದೆ ಹಾಗೂ ಅನಿರೀಕ್ಷಿತ ಸಾವಿನ (Unexpected Death) ಅಪಾಯ ಕೂಡ ಕಡಿಮೆಯಾಗುತ್ತದೆ. ವಿಶ್ವಾದ್ಯಂತ ಕಡಿಮೆ ನಿದ್ರೆಯ ಕಾರಣ ಹಾಗೂ ಡಿಮೆನ್ಸಿಯಾ ಕಾರಣ ಬೇಗನೆ ಸಾವು ಸಂಭವಿಸುತ್ತಿರುವ ಅಂಕಿಸಂಖ್ಯೆಗಳು ತಜ್ಞರನ್ನು ಕೂಡ ಆಶ್ಚರ್ಯಕ್ಕೀಡು ಮಾಡಿವೆ ಎಂದಿದ್ದಾರೆ.
ಇದನ್ನೂ ಓದಿ-Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ವಿಶ್ವದ ಜನಸಂಖ್ಯೆಯ ಶೇ.45 ರಷ್ಟು ಜನರಿಗೆ ಕಡಿಮೆ ನಿದ್ರೆ ಬರುವುದು ಆರೋಗ್ಯಕ್ಕೆ ನಿಜವಾಗಿಯೂ ತುಂಬಾ ಅಪಾಯಕಾರಿ ಎಂದು ವರ್ಲ್ಡ್ ಸ್ಲೀಪ್ ಸೊಸೈಟಿ (World Sleep Society) ಹೇಳುತ್ತದೆ. 5 ರಿಂದ 70 ಮಿಲಿಯನ್ ಅಮೆರಿಕನ್ ನಾಗರಿಕರು ಸ್ಲೀಪ್ ಡಿಸಾರ್ಡರ್ (Sleep Disorder), ಸ್ಲೀಪ್ ಅಪ್ನಿಯಾ, ನಿದ್ರಾಹೀನತೆ (Insomnia) ಮತ್ತು ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್ (Restless Leg Syndrome) ಮುಂತಾದ ಕಾಯಿಲೆಗಳಿಗೆ ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಿಡಿಎಸ್ ಇದನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಹೇಳಿದೆ. ಕಡಿಮೆ ನಿದ್ರೆಯ ಈ ಸಮಸ್ಯೆಯು ಸಕ್ಕರೆ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಬುದ್ಧಿಮಾಂದ್ಯತೆ ಜೊತೆಗೆ ನೇರ ಸಂಬಂಧ ಹೊಂದಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ-Corona Vaccine For Children: ಸಿದ್ಧಗೊಂಡಿದೆ ಮಕ್ಕಳ 'ಸುರಕ್ಷಾ ಕವಚ'! ಕೋತಿಗಳ ಮೇಲಿನ ಆರಂಭಿಕ ಪರೀಕ್ಷೆ ಯಶಸ್ವಿ !
ಈ ಅಧ್ಯಯನಕ್ಕಾಗಿ, ತಜ್ಞರು 2011 ಮತ್ತು 2018 ರ ನಡುವೆ ಅನೇಕ ಜನರ ನಿದ್ರೆಯ ಅಭ್ಯಾಸದ ದತಾಂಶವನ್ನು ಸಂಗ್ರಹಿಸಿ ಪರಿಶೀಲಿಸಿದ್ದಾರೆ. ನಿದ್ರಾಹೀನತೆಯ ದೂರುಗಳನ್ನು ಹೊಂದಿರುವ ಜನರು ಪ್ರತಿ ರಾತ್ರಿಯೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಜರ್ನಲ್ ಆಫ್ ಸ್ಲೀಪ್ ರಿಸರ್ಚ್ನಲ್ಲಿ (Journal Of Sleep Research) ಪ್ರಕಟವಾದ ಈ ಸಂಶೋಧನೆಯ ವಿಶ್ಲೇಷಣೆಯನ್ನು ನ್ಯಾಷನಲ್ ಹೆಲ್ತ್ ಅಂಡ್ ಏಜಿಂಗ್ (National Health And Aging) ಅಧ್ಯಯನದಲ್ಲಿ ಮಾಡಲಾಗಿದೆ.
ಇದನ್ನೂ ಓದಿ- Lambda COVID-19 New Variant: 29 ದೇಶಗಳಲ್ಲಿ ದೊರೆತ ಕೊವಿಡ್-19 ಲ್ಯಾಮ್ದಾ ರೂಪಾಂತರಿ, WHO ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.